More

    ಮಾ.16,17ರಂದು ಬಿಎಂಎಸ್ ಕಾಲೇಜಿನಲ್ಲಿ ಸಿರಿಧಾನ್ಯ ಮೇಳ

    ಬೆಂಗಳೂರು ರಾಜ್ಯದಲ್ಲಿ ಸಿರಿಧಾನ್ಯಗಳ ಪುನರುತ್ಥಾನದ ಯಶಸ್ಸಿನ ಹಿನ್ನೆಲೆಯಲ್ಲಿ ಲಘು ಉದ್ಯೋಗ ಭಾರತಿ, ಐಎಂಎಸ್ ಪ್ರತಿಷ್ಠಾನ ಹಾಗೂ ಬಿಗ್ ೌಂಡೇಷನ್ ಸಹಯೋಗದಲ್ಲಿ ಮಾ.16 ಮತ್ತು 17ರಂದು ಬಸವನಗುಡಿಯಲ್ಲಿರುವ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ುಡ್ ೆಸ್ಟ್-ಎಕ್ಸ್‌ಪೀಯರಿಯನ್ಸ್ ಮಿಲ್ಲೆಟ್ಸ್’ ಎಂಬ ಮೇಳವನ್ನು ಆಯೋಜಿಸಲಾಗಿದೆ.

    ಮೇಳವನ್ನು ಕೃಷಿ ಮತ್ತು ರೈತ ಕಲ್ಯಾಣ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಲಿದ್ದಾರೆ.

    ಮೇಳದಲ್ಲಿ 100ಕ್ಕೂ ಹೆಚ್ಚಿನ ಮಳಿಗೆಗಳು ಸಿರಿಧಾನ್ಯಗಳಿಗೆ ಸಂಬಂಧಿಸಿದ ವಸ್ತುಗಳನ್ನು ಪ್ರದರ್ಶಿಸಲಿವೆ. ಸಿರಿಧಾನ್ಯಗಳ ಆವಿಷ್ಕಾರ, ಮಾರುಕಟ್ಟೆ ಪ್ರವೃತ್ತಿಗಳು ಮತ್ತು ಬೇಡಿಕೆ ವಿಶ್ಲೇಷಣೆ, ಪೂರೈಕೆ, ಲಾಜಿಸ್ಟಿಕ್ಸ್ ಮತ್ತು ಗುಣಮಟ್ಟ, ಹಣಕಾಸು ಮತ್ತು ವ್ಯವಹಾರ ಬೆಂಬಲ, ನೆಟ್ ವರ್ಕಿಂಗ್ ಸೇರಿ ವಿವಿಧ ವಿಷಯಗಳನ್ನು ಒಳಗೊಂಡ ‘ಗಮ್ಯಸ್ಥಾನ ಸಿರಿಧಾನ್ಯಗಳು’ ಎಂಬ ವಿಷಯದ ಮೇಲೆ ಎರಡು ದಿನಗಳ ಕಾಲ ಸಮ್ಮೇಳನವನ್ನು ಕೂಡ ಆಯೋಜಿಸಲಾಗಿದೆ.

    ಮೇಳನದಲ್ಲಿ 500ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಪಾಕಶಾಲೆಯ ಸೃಜನಶೀಲತೆಯನ್ನು ಉತ್ತೇಜಿಸಲು ಮತ್ತು ದೈನಂದಿನ ಅಡುಗೆಯಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಉತ್ತೇಜಿಸಲು ಸಾರ್ವಜನಿಕರಿಗೆ ಪಾಕವಿಧಾನ ತಯಾರಿಕೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

    ಮೇಳದ ಚರ್ಚೆಯಾಗುವ ವಿಷಯಗಳು

    •  ಆಹಾರ ವಲಯದಲ್ಲಿ ಎಸ್‌ಎಂಇಗಳ ನೆಟ್ ವರ್ಕಿಂಗ್ ಮತ್ತು ಸಹಯೋಗದ ಅವಕಾಶ

    – ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು

    – ಜಿ 2 ಬಿ ಸಂವಾದಗಳು ಮತ್ತು ಬಿ 2 ಸಿ ಮಾರಾಟದ ಮೂಲಕ ಎಸ್‌ಎಂಇ ಗಳಿಗೆ ವ್ಯವಹಾರ/ನವೋದ್ಯಮ ಅವಕಾಶಗಳು

    – ತಜ್ಞರು ನೀಡುವ ಮಾಹಿತಿಯ ಮೂಲಕ ಆಹಾರ ಉದ್ಯಮದ ಜ್ಞಾನ ಹಂಚಿಕೆ

    – ಆಹಾರ ಸಂಬಂಧಿತ ವ್ಯವಹಾರದ ಜಗತ್ತಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳುವುದು

    • ದೀರ್ಘಕಾಲೀನ ಸಹಯೋಗ ಮತ್ತು ಎಸ್‌ಎಚ್‌ಜಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳನ್ನು ಬೆಳೆಸುವುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts