More

    ಹಾಲು ಉತ್ಪದಕರ ಗಾಯದ ಮೇಲೆ ಬರೆ : ಲೀಟರ್‌ಗೆ 5 ರೂ. ದರ ಇಳಿಕೆಗೆ ವಿರೋಧ

    ಗೌರಿಬಿದನೂರು: ಹಾಲು ಉತ್ಪಾದಕರ ಕುಂದುಕೊರತೆ ಕುರಿತು ಚರ್ಚಿಸಲು ನ.17ರಂದು ಸಭೆ ಕರೆಯಲಾಗಿದೆ. ಇದಕ್ಕೆ ರೈತ ಸಂಸಂಸ್ಥೆಗಳು ಹಾಗೂ ಕನ್ನಡಪರ ಸಂಟನೆಗಳು ಸಹಕರಿಸಬೇಕು ಎಂದು ರೈತ ಸಂದ ತಾಲೂಕು ಅಧ್ಯಕ್ಷ ಗುಂಡಾಪುರ ಲೋಕೇಶ್‌ಗೌಡ ಮನವಿ ಮಾಡಿದರು.

    ನಗರದ ನದಿದಡ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನೊಂದ ಹಾಲು ಉತ್ಪದಕರ ವೇದಿಕೆ ಹಾಗೂ ಪ್ರಗತಿಪರ ಸಂಟನೆಗಳ ಒಕ್ಕೂಟದ ಪದಾಧಿಕಾರಿಗಳು ಭಾನುವಾರ ಏರ್ಪಡಿಸಿದ್ದ ಸಭೆೆಯಲ್ಲಿ ಮಾತನಾಡಿದರು. ಕೋಚಿಮುಲ್ ಹಾಲು ಒಕ್ಕೂಟ ವಿಭಜನೆಯಾದ ಬೆನ್ನಲ್ಲೇ ಹಾಲಿನ ದರವನ್ನು 29 ರೂ.ನಿಂದ 24 ರೂ.ಗೆ ಇಳಿಸಲಾಗಿದೆ. ಇದರಿಂದಾಗಿ ಹಾಲು ಉತ್ಪದಕರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದನ್ನು ವಿರೋಧಿಸಿ ಹೋರಾಟ ರೂಪಿಸಬೇಕಿದೆ. ಉತ್ಪಾದಕರಿಗೆ ಲೀಟರ್‌ಗೆ ಕನಿಷ್ಠ 30 ರೂ. ದರ ನಿಗದಿ, ಒಕ್ಕೂಟದ ದುಂದುವೆಚ್ಚಗಳಿಗೆ ಕಡಿವಾಣ, ಒಕ್ಕೂಟದ ಮೂಲಸೌಕರ್ಯಗಳಿಗಾಗಿ ಲೀಟರಿಗೆ 1 ರೂ. ಕಡಿತ ನಿಲ್ಲಿಸಬೇಕು ಎಂಬುದು ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು 17ರಂದು ಹೋರಾಟ ಆರಂಭಿಸಲು ರೂಪರೇಷೆ ಸಿದ್ಧಪಡಿಸಬೇಕಿದೆ ಎಂದರು.

    ರೈತ ಸಂ ತಾಲೂಕು ಅಧ್ಯಕ್ಷ ಮಾಳಪ್ಪ ಮಾತನಾಡಿ, ನಮ್ಮ ರಾಜ್ಯಾದ್ಯಂತ ಏಕರೂಪ ಹಾಲಿನ ದರ ನಿಗದಿ, ಪಶುಆಹಾರ ದರ ಕಡಿತ, ಕೃತಕ ಗರ್ಭದಾರಣೆ ಗುಣಮಟ್ಟ ಕಾಪಾಡುವುದು ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
    ವಕೀಲ ಸಣ್ಣಕ್ಕಿ ವೆಂಕಟರವಣಪ್ಪ, ಮುಖಂಡರಾದ ಪ್ರಭು, ಜಮೀರ್, ಶ್ರೀಧರ್, ದಿಲೀಪ್, ಗಂಗಾದರ್, ಸುಜಾತಮ್ಮ, ಲಯನ್‌ಲಕ್ಷ್ಮೀ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts