More

    ಗೋವಾದಲ್ಲಿ ಯುದ್ಧ ವಿಮಾನ ಪತನ: ಪೈಲಟ್​ ಪ್ರಾಣಾಪಾಯದಿಂದ ಪಾರು

    ಪಣಜಿ: ಭಾರತೀಯ ನೌಕಾಪಡೆಯ ಮಿಗ್​-21ಕೆ ಯುದ್ಧ ವಿಮಾನವು ಬುಧವಾರ ಗೋವಾದ ಪಣಜಿ ಬಳಿಯ ಸಮುದ್ರದಲ್ಲಿ ಪತನವಾಗಿದ್ದು, ಅದೃಷ್ಟವಶಾತ್​ ಪೈಲಟ್​ ಅಪಾಯದಿಂದ ಪಾರಾಗಿದ್ದಾರೆ. ಸಾವಿನ ದವಡೆಯಿಂದ ಪೈಲಟ್​ ಪಾರಾದ ಆ ಕ್ಷಣ ಹೀಗಿತ್ತು…

    ‘ಎರಡು ಇಂಜಿನ್​ ಹೊಂದಿರುವ ಯುದ್ಧ ವಿಮಾನ ನಿತ್ಯದ ಕ್ರಮದಂತೆ ಹಾರಾಟ ನಡೆಸಿ ತನ್ನ ಬೇಸ್​ಗೆ ಹಿಂತಿರುಗುತ್ತಿತ್ತು. ಈ ಸಮಯದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಅಪಾಯದಿಂದ ಪಾರಾಗಲು ಪೈಲಟ್​ ತಮ್ಮನ್ನು ತಾವು ವಿಮಾನದಿಂದ ಇಜೆಕ್ಟ್ ಮಾಡಿಕೊಂಡಿದ್ದಾರೆ. ಕೂಡಲೇ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಿ ಪೈಲಟ್​​ನನ್ನು ರಕ್ಷಿಸಲಾಯಿತು’ ಎಂದು ನೌಕಾದಳ ತಿಳಿಸಿದೆ.

    ಮಿಗ್​ ಯುದ್ಧ ವಿಮಾನಗಳಲ್ಲಿ ಪೈಲಟ್​ ಕೂರುವ ಕುರ್ಚಿಯ ಕೆಳಗೆ ರಾಕೆಟ್​ ಮೋಟರ್​ ಅಳವಡಿಸಲಾಗಿರುತ್ತದೆ. ಇಜೆಕ್ಟ್ ಬಟನ್​ ಒತ್ತಿದ ಕೂಡಲೇ ವಿಮಾನದ ಗಾಜು ತೆರೆದುಕೊಂಡು ಕುರ್ಚಿ ಜೋರಾಗಿ ಮೇಲಕ್ಕೆ ಚಿಮ್ಮುತ್ತದೆ. ಮೇಲಕ್ಕೆ ಚಿಮ್ಮುವಾಗ ಪೈಲಟ್​ ಮೂರ್ಛೆ ತಪ್ಪುವ ಅಪಾಯ ಇರುತ್ತದೆ. ಮೂರ್ಛೆ ತಪ್ಪಿದ ಪೈಲಟ್ ನೀರಿಗೆ ಬಿದ್ದರೆ ಉಸಿರುಗಟ್ಟುವ ಸಾಧ್ಯತೆ ಹೆಚ್ಚು. ಅದೃಷ್ಟವಷಾತ್​ ಪೈಲಟ್​ ಅಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ ಎಂದು ನೌಕಾದಳ ವಿವರಿಸಿದೆ.

    ವಿಮಾನ ಪತನಕ್ಕೆ ಕಾರಣ ಏನೆಂದು ತಿಳಿಯಲು ಬಿಒಐ (ಬೋರ್ಡ್​ ಆಫ್​ ಇನ್ವೆಸ್ಟಿಗೇಶನ್​)ಗೆ ತನಿಖೆ ನಡೆಸುಂತೆ ನೌಕಾದಳ ಸೂಚಿಸಿದೆ. ಜಗತ್ತಿನಲ್ಲಿ ಮಿಗ್​-21ಕೆ ಯುದ್ಧ ವಿಮಾನಗಳನ್ನು ಬಳಸುತ್ತಿರುವ ಏಕೈಕ ರಾಷ್ಟ್ರ ಭಾರತ. ರಷ್ಯಾದಿಂದ ಐಎನ್​ಎಸ್​ ವಿಕ್ರಮಾದಿತ್ಯವನ್ನು (ಮೂಲ ಹೆಸರು ಆಡ್ಮಿರಲ್​ ಗೋರ್ಶ್ಕೋವ್​) ಖರೀದಿಸುವಾಗ ಜತೆಗೆ ಖರೀದಿಸಲಾಗಿತ್ತು.

    ಈ ಹಿಂದೆಯೂ ಅನೇಕ ಮಿಗ್​ ವಿಮಾನಗಳು ಪತನವಾಗಿವೆ. ಅಪಘಾತ ಸರಣಿಗಳಿಂದಾಗಿ ಮಿಗ್ ವಿಮಾನಗಳಿಗೆ ‘ಫ್ಲಯಿಂಗ್ ಕಾಫಿನ್​’ ಎಂದು ಕರೆಯಲಾಗುತ್ತೆ. ಮಿಗ್ ವಿಮಾನಗಳ ಬದಲಾಗಿ ಬೇರೆ ಯುದ್ಧ ವಿಮಾನಗಳನ್ನು ಖರೀದಿಸಲು ಸೇನೆ ಉದ್ದೇಶಿಸಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts