More

    ಕುಶಿ ಹರಿದಾಸ್​ ಭಟ್​ ಕೃತಿಗಳ ಮರುಮುದ್ರಣ: ವಿವೇಕ ರೈ

    ಉಡುಪಿ: ಜಿಲ್ಲೆಯಲ್ಲಿ ಭಾವನಾತ್ಮಕ, ಬೌದ್ಧಿಕ, ಸಾಂಸತಿಕ ಜಗತ್ತು ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ ಕುಶಿ ಹರಿದಾಸ್​ ಭಟ್​ ಅವರ ಪುಸ್ತಕಗಳನ್ನು ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಮರುಮುದ್ರಣಗೊಳಿಸಲಾಗುವುದು. ಕುಶಿ ಮತ್ತು ಉಡುಪಿ ಎಂಬ ವಿಷಯದಲ್ಲಿ 1 ಗಂಟೆಗಳ ಸಾಕ್ಷ$್ಯ ಚಿತ್ರ ತಯಾರಿಸಲಾಗುವುದು ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಬಿ.ಎ. ವಿವೇಕ ರೈ ಹೇಳಿದರು.

    ಭಾನುವಾರ ಎಂಜಿಎಂ ಕಾಲೇಜಿನಲ್ಲಿ ಪ್ರೊ. ಕು.ಶಿ. ಹರಿದಾಸ್​ ಭಟ್​ ಅವರ ಜನ್ಮಶಮಾನೋತ್ಸವ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾತನಾಡಿದರು.

    ಕುಶಿಯವರು ಸ್ಥಾಪಿಸಿದ ಪ್ರಾದೇಶಿಕ ಜಾನಪದ ಕೇಂದ್ರ ಜಿಲ್ಲೆಯ ಸಂಪನ್ಮೂಲ ಕೇಂದ್ರವಾಗಿ ಬೆಳೆದಿದ್ದು, ಇಷ್ಟು ವ್ಯವಸ್ಥಿತ ಕೇಂದ್ರ ಬೇರೆ ಯಾವುದೇ ರಾಜ್ಯದಲ್ಲಿಲ್ಲ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸುಮಾರು 38 ಭಾಷೆಗಳ 5 ಸಾವಿರ ಪುಸ್ತಕಗಳನ್ನು ಈ ಕಾಲೇಜಿಗೆ ತಂದು ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿರುವುದು ಅಪೂರ್ವ ಕೆಲಸವಾಗಿದೆ. ಇಲ್ಲದಿದ್ದರೆ ಅಮೂಲ್ಯ ಬರಹಗಳು ಬೀದಿಪಾಲಾಗುತ್ತಿದ್ದವು ಎಂದರು.

    ತುಳು ಭಾಷೆಗೆ ನಿಂಟು ಬೇಕು ಎಂಬ ನಿಟ್ಟಿನಲ್ಲಿ ವಿದೇಶದಲ್ಲಿದ್ದ ಉಪಾಧ್ಯಾಯ ದಂಪತಿಯನ್ನು ಇಲ್ಲಿಗೆ ಕರೆದುಕೊಂಡು ಬಂದು ಆ ಜವಾಬ್ದಾರಿಯನ್ನು ಹೊರೆಸಿದ್ದರು. ಹಣವೇ ಪ್ರಧಾನವಾಗಿರುವ ಈ ಕಾಲಟ್ಟದಲ್ಲಿ ಅವರು ವೃತ್ತಿಯ ತೃಪ್ತಿಗಾಗಿ ಕೆಲಸ ಮಾಡಿದ್ದು, ಕುರ್ಚಿ ಎತ್ತಿ ಇಡುವವನಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವ ಅರ್ಹತೆ ಪಡೆಯೋದಿಲ್ಲ ಎಂಬ ಮಾತಿಗೆ ಉದಾಹರಣೆಯಾಗಿದ್ದರು ಎಂದರು.

    ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​. ಬಲ್ಲಾಳ್​ ಕಾರ್ಯಕ್ರಮ ಉದ್ಘಾಟಿಸಿ, ಕಲೆ, ಸಂಸತಿ ಉಳಿಸುವ ನಿಟ್ಟಿನಲ್ಲಿ ಕುಶಿಯವರು ಮಹತ್ವದ ಕೆಲಸಗಳನ್ನು ಮಾಡಿದ್ದು, ಅವರ ಬಹುಮುಖ ಪ್ರತಿಭೆ ಯು ಜನಾಂಗಕ್ಕೆ ಪ್ರೇರಣೆಯಾಗಲಿ ಎಂದು ಹೇಳಿದರು.

    ಅಕಾಡೆಮಿ ಆ್​ ಜನರಲ್​ ಎಜುಕೇಶನ್​ ಕಾರ್ಯದರ್ಶಿ ವರದರಾಯ ಪೈ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎನ್​.ಟಿ. ಭಟ್​, ಮೋಹನ್​ ದಾಸ್​ ಪೈ ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ದೆಶಕ ಟಿ. ರಂಗ ಪೈ, ಎಂಜಿಎಂ ಪಪೂ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ಹಳೆ ವಿದ್ಯಾರ್ಥಿ ಸಂದ ಅಧ್ಯಕ್ಷ ಪ್ರೊ. ಸುರೇಂದ್ರನಾಥ ಶೆಟ್ಟಿ ಕೊಕ್ಕರ್ಣೆ, ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್​ ಶೆಟ್ಟಿ, ಇಂದ್ರಾಳಿ ಯಕ್ಷಗಾನ ಕೇಂದ್ರ ಅಧ್ಯಕ್ಷ ಕಿಶನ್​ ಹೆಗ್ಡೆ ಉಪಸ್ಥಿತರಿದ್ದರು. ಕುಶಿಯವರ ಮಕ್ಕಳಾದ ಸುಜಾತಾ, ಜಯದೇವ, ಅನಂತ ಮೋಹನ್​, ಹರ್ಷವರ್ಧನ್​, ಆಶಾ ಭಾಗವಹಿಸಿದ್ದರು.
    ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷಿ ನಾರಾಯಣ ಕಾರಂತ ಸ್ವಾಗತಿಸಿ, ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್​ ನಾಯ್ಕ ವಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಪುತ್ತಿ ವಸಂತಕುಮಾರ್​ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts