More

    ಶ್ರೀ ಶಂಕರಚಾರ್ಯ, ರಾಮಾನುಜಚಾರ್ಯ, ಸ್ವಾಮಿ ವಿವೇಕಾನಂದರ ಸಂದೇಶಗಳು ಬದುಕಿನ ದಾರಿದೀಪ

    ಶೃಂಗೇರಿ: ನಾವು ಯಾವ ಸಮಾಜ ಕಟ್ಟಬೇಕೆಂಬ ಪರಿಭಾವನೆ ನಮ್ಮಲ್ಲಿರಬೇಕು. ಪ್ರತಿ ವ್ಯಕ್ತಿಯೂ ಸಮಾಜದ ಅವಿಭಾಜ್ಯ ಅಂಗ. ಸಮಾಜಕ್ಕೆ ಉತ್ತಮ ಸಂಸ್ಕೃತಿ ಕೊಡುವ ವ್ಯಕ್ತಿತ್ವವನ್ನು ಎನ್‌ಎಸ್‌ಎಸ್ ಶಿಬಿರಗಳು ರೂಪಿಸುತ್ತವೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದರು.
    ಸಿಬಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಶ್ರೀ ಶಂಕರರು, ಶ್ರೀ ರಾಮಾನುಜರು, ಸ್ವಾಮಿ ವಿವೇಕಾನಂದರು ನೀಡಿದ ಸಂದೇಶಗಳು ನಮ್ಮ ಬದುಕಿನ ಪರಿಪೂರ್ಣತೆಗೆ ದಾರಿದೀಪವಾಗಿವೆ ಎಂದರು.
    ಧಾರ್ಮಿಕ, ಸಾಮಾಜಿಕ, ರಾಜಕೀಯ ಅಭಿವೃದ್ಧಿಗಳ ಸಾಧನೆಗಳಿಗೆ ಎನ್‌ಎಸ್‌ಎಸ್ ಶಿಬಿರ ಪೂರಕ. ಸಮಚಿತ್ತ, ಸಮನ್ವಯ, ಪೂರ್ಣ ಪರಿಕಲ್ಪನೆ ಜತೆ ರಾಷ್ಟ್ರೀಯ ಸೇವಾ ಮನೋಭಾವವನ್ನು ಎನ್‌ಎಸ್‌ಎಸ್ ಶಿಬಿರ ನಮಗೆ ನೀಡುತ್ತದೆ. ಪ್ರತಿ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದಾಗ ಅವರ ವ್ಯಕ್ತಿತ್ವ ವಿಕಸನವಾಗುತ್ತದೆ. ಅವಕಾಶದ ಬಾಗಿಲು ಯುವ ಶಕ್ತಿಗಳಿಗೆ ನಿರಂತರವಾಗಿ ತೆರೆದಿರುತ್ತದೆ. ಮನೆಯಲ್ಲಿ ಕುಳಿತು ಜಗತ್ತಿನ ವಿಸ್ಮಯವನ್ನು ಕ್ಷಣಮಾತ್ರದಲ್ಲಿ ನೋಡುವ ಅವಕಾಶಗಳಿವೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಸಮಾಜದ ಶಾಂತಿಯುತ ಪರಿಸರಕ್ಕಾಗಿ ಶ್ರಮಿಸಬೇಕಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts