More

    ಕನ್ನಡಿಗರ ತಾಳ್ಮೆ ಕೆಣಕದಿರಿ: ಮರಾಠಿಗರಿಗೆ ಕರವೇ ಎಚ್ಚರಿಕೆ ನಾಡಧ್ವಜ ಸುಟ್ಟವರ ವಿರುದ್ಧ ಕ್ರಮಕ್ಕೆ ಪಟ್ಟು

    ಚನ್ನಪಟ್ಟಣ :  ನಾಡಧ್ವಜಕ್ಕೆ ಬೆಂಕಿ ಹಚ್ಚಿದ, ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿರುವ ಮರಾಠಿ ಪುಂಡರನ್ನು ಬಂಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುವಾರ್ ಶೆಟ್ಟಿ ಬಣ) ರಾಮನಗರ ಜಿಲ್ಲಾ ಟಕ ಹಾಗೂ ತಾಲೂಕು ಟಕದ ಪದಾಧಿಕಾರಿಗಳು ಶನಿವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
    ವೇದಿಕೆ ಜಿಲ್ಲಾಧ್ಯಕ್ಷ ರಾಜು (ಎಂಎನ್‌ಆರ್) ಮಾತನಾಡಿ, ಕನ್ನಡಿಗರ ಸಹನೆಯನ್ನು ಎಂಇಎಸ್ ಹಾಗೂ ಶಿವಸೇನೆ ಪುಂಡರು ನಿರಂತರವಾಗಿ ಕೆಣಕುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ. ಇದೀಗ, ಮಹಾಸೇನಾನಿ ರಾಯಣ್ಣನ ಪ್ರತಿಮೆ ಧ್ವಂಸ ವಾಡಿದ್ದಾರೆ. ಇವುಗಳನ್ನು ಸಹಿಸಲು ಸಾಧ್ಯವಿಲ್ಲ. ಕನ್ನಡಿಗರ ತಾಳ್ಮೆ ಕೆಣಕಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಸಿದರು.

    ತಹಸೀಲ್ದಾರ್ ಎಲ್.ನಾಗೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ವೇದಿಕೆ ತಾಲೂಕು ಅಧ್ಯಕ್ಷ ಹರೀಶ್‌ಕುವಾರ್, ಜಿಲ್ಲಾ ಗೌರವಾಧ್ಯಕ್ಷ ಮಂಜು ಶಂಕರಣ್ಣ, ರಾಮನಗರ ತಾಲೂಕು ಅಧ್ಯಕ್ಷ ಪ್ರತಾಪ್‌ಗೌಡ, ಜಿಲ್ಲಾ ಯುವ ಟಕದ ಅಧ್ಯಕ್ಷ ಮಹಾಲಿಂಗ, ಜಿಲ್ಲಾ ಉಪಾಧ್ಯಕ್ಷ ಮಾತೃಭೂಮಿ ಮಹೇಶ್, ಪದಾಧಿಕಾರಿಗಳಾದ ನಾಗರಾಜು, ಸಂತೋಷ್‌ಕು ಮಾರ್, ಸಿದ್ದ ಮಾರೇಗೌಡ, ಸಿಎಂ ಮಹೇಶ್‌ಗೌಡ ಸೇರಿ ಹಲವರು ಇದ್ದರು.

    ಚನ್ನಪಟ್ಟಣ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ನಗರದ ಅಂಚೆಕಚೇರಿ ರಸ್ತೆಯಲ್ಲಿನ ಕಾವೇರಿ ಸರ್ಕಲ್‌ನಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಭಾವಚಿತ್ರಕ್ಕೆ ಮಸಿ ಬಳಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
    ವೇದಿಕೆ ಅಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಎಂಇಎಸ್ ಪುಂಡರು ಕರ್ನಾಟಕ ಮತ್ತು ಕನ್ನಡಿಗರ ವಿರುದ್ಧ ನಿರಂತರವಾಗಿ ಒಂದಲ್ಲ ಒಂದು ಪ್ರಹಾರ ನಡೆಸುತ್ತಲೆ ಇದ್ದಾರೆ. ರಾಜ್ಯ ಸರ್ಕಾರ ದಿಟ್ಟಕ್ರಮ ಕೈಗೊಳ್ಳಲು ವಿಫಲವಾಗಿರುವುದು ಅವರ ಕುಚೇಷ್ಟೆ ಹೆಚ್ಚಾಗಲು ಕಾರಣವಾಗಿದೆ.

    ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಕೆಡವಲಾಗಿದೆ, ಅದೇರೀತಿಯಲ್ಲಿ ಬೆಂಗಳೂರಿನಲ್ಲಿ ಅವರ ಪ್ರತಿಮೆಗೆ ಮಸಿ ಬಳಿದು ವಿಕೃತಿಗೊಳಿಸಲಾಗಿದೆ. ರಾಯಣ್ಣನ ಪ್ರತಿಮೆಯನ್ನು ಮುಟ್ಟಿ ಎಂಇಎಸ್‌ನ ಪುಂಡರು ಕನ್ನಡಿಗರ ಸ್ವಾಭಿವಾನವನ್ನು ಕೆಣಕಿದ್ದಾರೆ. ಕನ್ನಡಿಗರ ಸಹನೆಯ ಕಟ್ಟೆ ಒಡೆಯುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತು ಕಿಡಿಗೇಡಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

    ರಾಜ್ಯದಲ್ಲಿ ಎಂಇಎಸ್ ನಿಷೇಧಿಸಿ: ಎಂಇಎಸ್ ಹಾಗೂ ಶಿವಸೇನೆಯನ್ನು ನಿಷೇಧ ವಾಡಬೇಕು. ರಾಯಣ್ಣ ಪ್ರತಿಮೆ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದು ಸರ್ಕಾರದಿಂದ ಆಗದಿದ್ದರೆ ನಾಡಿನ ಕನ್ನಡಪರ ಸಂಟನೆಗಳು ಹಾಗೂ ಜನಪರ ಸಂಟನೆಗಳು ಬುದ್ಧಿ ಕಲಿಸಲು ಸಿದ್ಧವಾಗಲಿವೆ ಎಂದು ಎಚ್ಚರಿಕೆ ನೀಡಿದರು.
    ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ ಮಾತನಾಡಿದರು.ವೇದಿಕೆ ಪದಾಧಿಕಾರಿಗಳಾದ ಬೆಂಕಿ ಶ್ರೀಧರ್, ಜಗದಾಪುರ ಕೃಷ್ಣೇಗೌಡ, ಕನ್ನಡಪರ ಹೋರಾಟಗಾರರಾದ ಬಾಬ್‌ಜಾನ್, ಪೈಲ್ವಾನ್ ಅಕ್ರಂ, ಸತೀಶ್, ವಿವೇಕ್, ಮಳೂರುಪಟ್ಟಣ ಕುವಾರ್ ಮತ್ತಿತರರು ಉಪಸ್ಥಿತರಿದ್ದರು.

    ಚನ್ನಪಟ್ಟಣ: ಬ್ರಿಟಿಷರ ವಿರುದ್ಧ ಕಾದಾಡಿ ಕರುನಾಡಿನ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೇರಿಸಿದ ದೇಶಭಕ್ತ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಅಪ ಮಾನ ಖಂಡನೀಯ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪ ಗೊಳಿಸಿರುವ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಪತ್ರಿಕೆಗೆ ತಿಳಿಸಿರುವ ಅವರು, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ದುಷ್ಕರ್ಮಿಗಳು ವಿಕೃತ ಗೊಳಿಸಿರುವುದು.

     

    ಸಮಾಜ ತಲೆತಗ್ಗಿಸುವಂತಹದ್ದು, ಸರ್ಕಾರ ಈ ವಿಷಯದಲ್ಲಿ ಸಹನೆಯಿಂದ ವರ್ತಿಸದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಈ ವಿಷಯದಲ್ಲಿ ಎಲ್ಲ ಪಕ್ಷಗಳು ರಾಜಕೀಯ ವಾಡದೆ ಕನ್ನಡಿಗರ ಸ್ವಾಭಿ ಮಾನ ಉಳಿಸಲು ಮುಂದಾಗಬೇಕು. ರಾಜ್ಯ ಸರ್ಕಾರ ಯಾವುದೇ ಧರ್ಮ, ಜಾತಿ ಎಂದು ನೋಡದೆ ಕ್ರಮ ಕೈಗೊಳ್ಳಬೇಕಿದೆ. ರಾಜ್ಯದಲ್ಲಿ ಎಂಇಎಸ್ ನಿಷೇಧ ಮಾಡಬೇಕೆಂದು ಒತ್ತಾಯಿಸಿದ್ದಾರೆ.

     

     

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts