More

    ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ಬೆದರಿಕೆ ಕರೆ, ದೂರು

    ಶಿವಮೊಗ್ಗ: ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಹಣಕಾಸಿನ ಅವ್ಯವಹಾರ, ಅಕ್ರಮ ನೇಮಕಾತಿ ಮತ್ತು ಇತರೆ ಅವ್ಯವಹಾರದ ವಿಚಾರವನ್ನು ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾಪಿಸದಂತೆ ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಶ್ರೀಧರ್ ಅವರಿಗೆ ಅಪರಿಚಿತ ವ್ಯಾಟ್ಸ್‌ಆ್ಯಪ್ ಕರೆ ಮೂಲಕ ಬೆದರಿಕೆ ಹಾಕಿದ್ದಾರೆ.
    ಡಾ. ಶ್ರೀಧರ್ ಅವರು 2019 ಡಿಸೆಂಬರ್‌ನಿಂದ ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದು 2022ರ ಮಾರ್ಚ್‌ವರೆಗೂ ವಿವಿಯ ಹಿಂದಿನ ಕುಲಪತಿಗಳ ಅವಧಿಯಲ್ಲಿ ಹಣಕಾಸಿನ ಅವ್ಯವಹಾರ, ನೇಮಕಾತಿ ಮತ್ತು ಇತರೆ ಅಕ್ರಮಗಳನ್ನು ಪತ್ತೆ ಮಾಡಿದ್ದರು.
    ಕಳೆದ ಜೂನ್‌ನಲ್ಲಿ ವಾಟ್ಸ್‌ಆ್ಯಪ್ ಕರೆ ಮಾಡಿದ ಅಪರಿಚಿತ ಅವ್ಯವಹಾರದ ಬಗ್ಗೆ ಸಿಂಡಿಕೇಟ್ ಸದಸ್ಯರು ಸಭೆಯಲ್ಲಿ ವಿಷಯ ಪ್ರಸ್ತಾಪಿಸದಂತೆ ಬೆದರಿಕೆ ಹಾಕಿದ್ದ. ಬಳಿಕ ಜೂ.19 ಮತ್ತು 24ರಂದು ವಾಟ್ಸ್‌ಆ್ಯಪ್‌ನಲ್ಲಿ ಅರ್ಥವಿಲ್ಲದ ಬ್ಯಾಗಿನ ವಿಚಾರವಾಗಿ ಮೆಸೇಜ್ ಮಾಡಿದ್ದು ಆನಂತರ ಶ್ರೀಧರ್ ಅವರು ಅಪರಿಚಿತನ ಮೊಬೈಲ್ ನಂಬರ್‌ನ್ನು ಬ್ಲಾಕ್ ಲೀಸ್ಟ್‌ಗೆ ಹಾಕಿದ್ದರು.
    ಎರಡು ದಿನಗಳ ಹಿಂದೆ ನಗರದ ಪ್ರಮುಖರೊಬ್ಬರಿಗೆ ಕರೆ ಮಾಡಿರುವ ಅಪರಿಚಿತ ಡಾ. ಶ್ರೀಧರ್ ಕೆಲ ಆರೋಪಗಳನ್ನೂ ಮಾಡಿದ್ದರು. ಹಾಗಾಗಿ ಡಾ. ಶ್ರೀಧರ್ ಅವರು ದಾವಣಗೆರೆ ವಿವಿಯಲ್ಲಿನ ಅವ್ಯವಹಾರದ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾಪಿಸದಂತೆ ಮತ್ತು ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಅಪರಿಚಿತನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts