More

    ಕೊಡವ ಲ್ಯಾಂಡ್ ಹೋರಾಟ ವಿರೋಧಿಸಿ ಸಭೆ


    ಕೊಡಗು : ಕೊಡವ ಲ್ಯಾಂಡ್ ಪ್ರತ್ಯೇಕ ರಾಜ್ಯವಾದ್ದಲ್ಲಿ ಕೊಡಗಿನಲ್ಲಿರುವ ಇತರ ಸಮುದಾಯದವರಿಗೆ ಮಾನ್ಯತೆ ಸಿಗುವುದಿಲ್ಲ. ಹಾಗಾಗಿ ಕೊಡವ ಲ್ಯಾಂಡ್ ಹೋರಾಟವನ್ನು ವಿರೋಧಿಸಬೇಕು ಎಂದು ಮುಖಂಡ ಎಸ್.ಎಂ.ಚಂಗಪ್ಪ ಹೇಳಿದರು.


    ಶನಿವಾರಸಂತೆಯಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
    ಕೊಡಗು ರಾಜ್ಯವಾದರೆ ಕೊಡವ ಜನಾಂಗದವರೇ ಆಡಳಿತ ನಡೆಸುವ ಸಾಧ್ಯತೆ ಇರುತ್ತದೆ. ಉಳಿದ ಜನಾಂಗದವರು ಅವರ ಸೇವಕರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿರುವ ಇತರ ಜನಾಂಗದವರು ಎಚ್ಚತ್ತುಕೊಂಡು ಕೊಡವ ಲ್ಯಾಡ್ ಹೋರಾಟವನ್ನು ವಿರೋಧಿಸಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ನಡೆಯುವ ನಮ್ಮ ಹೋರಾಟಕ್ಕೆ ಎಲ್ಲ ಸಮುದಾಯದವರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.


    ಸಭೆಯಲ್ಲಿ ಶುಂಠಿ ಭರತ್‌ಕುಮಾರ್, ಡಿ.ಬಿ.ಧರ್ಮಪ್ಪ, ಎನ್.ಕೆ.ಅಪ್ಪಸ್ವಾಮಿ ಗೌಡ, ಎಸ್.ಎನ್.ರಘು, ಜಿ.ಎಂ.ಕಾಂತರಾಜ್, ಬಿ.ಕೆ.ಚಂದ್ರು, ಟಿ.ಆರ್.ಪುರುಷೋತ್ತಮ್, ರಂಗಸ್ವಾಮಿ, ಎನ್.ಬಿ.ನಾಗಪ್ಪ, ಸಿ.ಜೆ.ಗಿರೀಶ್, ಆನಂದ್, ಶಿವಾನಂದ್, ಬಿ.ಎಸ್.ಮಂಜುನಾಥ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts