ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರನ್ನು ವಿವಾಹವಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ಅವರ ಮಾಜಿ ಗೆಳತಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ಅನುಷ್ಕಾಗೆ ಮುನ್ನ ಕೊಹ್ಲಿ ಈ ಹುಡುಗಿಯೊಂದಿಗೆ ಸುತ್ತಾಡಿದ್ದ ಚಿತ್ರಗಳೂ ಸಾಕಷ್ಟು ಸದ್ದು ಮಾಡುತ್ತಿವೆ.
ಅನುಷ್ಕಾ ಶರ್ಮ ಜತೆಗೆ ಡೇಟಿಂಗ್ ಮಾಡಿ ಮದುವೆಯಾಗುವುದಕ್ಕೆ ಮುನ್ನ ವಿರಾಟ್ ಕೊಹ್ಲಿ ಬ್ರೆಜಿಲ್ ಮೂಲದ ಇಜಾಬೆಲ್ ಲೈಟ್ ಜತೆಗೆ ಸುಮಾರು 2 ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದರು. ಮಾಡೆಲಿಂಗ್ ಜಗತ್ತಿನಲ್ಲಿ ಸಾಕಷ್ಟು ಸುದ್ದಿ ಮಾಡಿರುವ ಇಜಾಬೆಲ್ ಲೈಟ್ ಕೆಲ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ. 2012ರಲ್ಲಿ ತೆರೆಕಂಡ ಆಮೀರ್ ಖಾನ್ ಅಭಿನಯದ ‘ತಲಾಷ್’ ಅದರಲ್ಲಿ ಪ್ರಮುಖವಾದುದು.
ಇದನ್ನೂ ಓದಿ: ಲಾಕ್ಡೌನ್ ಸಂಕಷ್ಟದಿಂದಾಗಿ ದಿನಗೂಲಿಯಾದ ಅಂತಾರಾಷ್ಟ್ರೀಯ ಫುಟ್‌ಬಾಲ್ ಆಟಗಾರ್ತಿ!
ವಿರಾಟ್ ಕೊಹ್ಲಿ 2012ರಿಂದ 2014ರ ನಡುವೆ ಇಜಾಬೆಲ್ ಜತೆಗೆ ಸುತ್ತಾಡಿದ್ದರು. 2013ರಲ್ಲಿ ಕೊಹ್ಲಿ ಇಜಾಬೆಲ್ ಅವರ ಬ್ಯಾಗ್ ಹಿಡಿದು ರಸ್ತೆಬದಿಯಲ್ಲಿ ನಡೆಯುತ್ತಿದ್ದ ಚಿತ್ರದ ಮೂಲಕ ಇವರಿಬ್ಬರ ಡೇಟಿಂಗ್ ಸುದ್ದಿಗೆ ಅಧಿಕೃತ ಮುದ್ರೆಯೂ ಬಿದ್ದಿತ್ತು. ಆದರೆ ಬಳಿಕ ಕೊಹ್ಲಿ-ಇಜಾಬೆಲ್ ಸಂಬಂಧ ಮುರಿದು ಬಿದ್ದಿತ್ತು. ಸಂದರ್ಶನವೊಂದರಲ್ಲಿ ಈ ಬಗ್ಗೆ ಮುಕ್ತವಾಗಿಯೇ ಮಾತನಾಡಿದ್ದ ಇಜಾಬೆಲ್ ಲೈಟ್, ‘ಹೌದು, ನಾವಿಬ್ಬರು ಸುಮಾರು 2 ವರ್ಷಗಳ ಕಾಲ ರಿಲೇಷನ್‌ಷಿಪ್‌ನಲ್ಲಿದ್ದೆವು. ಕೊನೆಗೆ ಇಬ್ಬರೂ ಸಹಮತದಿಂದಲೇ ಸಂಬಂಧ ಮುರಿದುಕೊಂಡೆವು’ ಎಂದಿದ್ದರು.
ಪತ್ನಿ ನತಾಶಾ ಈಜುಡುಗೆ ಫೋಟೋಗೆ ಪಾಂಡ್ಯ ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?
ಶ್ರೀಲಂಕಾ ಎದುರು 33 ರನ್ಗಳಿಂದ ಗೆಲುವು ದಾಖಲಿಸಿದ ಬಾಂಗ್ಲಾದೇಶ
ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಪುತ್ರಿಯರು ಈಗ ಟೆನಿಸ್ ಆಟಗಾರ್ತಿಯರು!