More

    ನಿರುದ್ಯೋಗದ ಆತಂಕದಲ್ಲಿದ್ದವನಿಗೆ ಖುಷಿಕೊಟ್ಟ ಮೆಕ್​ಡೊನಾಲ್ಡ್ಸ್​ ಹುಡುಗಿ!

    ಮೆಕ್​ಡೊನಾಲ್ಡ್ಸ್​ನಲ್ಲಿ ಕುಳಿತಿದ್ದ ಆತ ತುಂಬಾ ಬೇಸರದಲ್ಲಿದ್ದ, ಜತೆಗೆ ನಿರುದ್ಯೋಗದ ಆತಂಕದಲ್ಲೂ ಇದ್ದ. ಅಲ್ಲಿ ಊಟ ಮಾಡಿದ ಬಳಿಕ ಅವನ ಬೇಸರವೆಲ್ಲ ಮಾಯವಾಯಿತು. ಅದು ಅವನ ಆ ದಿನದ ಅತ್ಯಂತ ಖುಷಿಯ ಕ್ಷಣವಾಗಿತ್ತು. ಅದಕ್ಕೆ ಕಾರಣ, ಆ ಹುಡುಗಿ, ಎನ್ಯಾ.

    ಆ ಹುಡುಗಿ ಎನ್ಯಾ, ಬೇರೆ ಯಾರೂ ಅಲ್ಲ. ಆಕೆ ಆ ಮೆಕ್​ಡೊನಾಲ್ಡ್ಸ್​ ಕೇಂದ್ರದ ಉದ್ಯೋಗಿ. ಆತ ಅಲ್ಲಿ ಊಟ ಮಾಡಿದ ಬಳಿಕ ಚಿಂತೆಯಲ್ಲಿದ್ದುದನ್ನು ಗಮನಿಸಿದ ಆಕೆ, ಆತನ ಬಿಲ್​ ಮೊತ್ತವನ್ನು ತನ್ನ ಕಾರ್ಡ್​ನಿಂದಲೇ ಸ್ವೈಪ್​ ಮಾಡಿದ್ದಳು.

    ಆ ವ್ಯಕ್ತಿ ತನ್ನ ಜೋಶ್​ ಯು ಆರ್ ಎಂಬ ಟ್ವಿಟರ್​ ಹ್ಯಾಂಡಲ್​ನಲ್ಲಿ ಈ ಕುರಿತ ವಿಡಿಯೋ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಯುವತಿಯ ನಡೆಯಿಂದ ನೆಟ್ಟಿಗರೂ ಖುಷಿಯಾಗಿದ್ದು, ಈ ವಿಡಿಯೋವನ್ನು 17 ಸಾವಿರಕ್ಕೂ ಅಧಿಕ ಮಂದಿ ಮೆಚ್ಚಿದ್ದಾರೆ. ಅಂದಹಾಗೆ ಇವೆಲ್ಲ ನಡೆದಿದ್ದು ಯುಕೆನ ಟೈ ಹಿಲ್​ ಎಂಬಲ್ಲಿನ ಮೆಕ್​ಡೊನಾಲ್ಡ್ಸ್​​ನಲ್ಲಿ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts