More

    ಅಶ್ಲೀಲ ವಿಡಿಯೋಗಳನ್ನು ನೋಡಲು ಉತ್ತೇಜನ: ವಿವಾದಕ್ಕೆ ಗುರಿಯಾದ ಖ್ಯಾತ ಯೂಟ್ಯೂಬರ್​ ಸ್ವಾತಿ

    ಚೆನ್ನೈ: ಆನ್‌ಲೈನ್ ಕಂಟೆಂಟ್ ಕ್ರಿಯೆಟಿವ್​ ಕ್ಷೇತ್ರದಲ್ಲಿ, ಪಾಲಕರ ಜವಾಬ್ದಾರಿ ಮತ್ತು ಮಾನಸಿಕ ಆರೋಗ್ಯ ಕುರಿತಾದ ವಿಡಿಯೋಗಳಿಗೆ ಹೆಸರುವಾಸಿಯಾಗಿರುವ ಮಲಯಾಳಂನ ಪ್ರಮುಖ ಮಹಿಳಾ ಯೂಟ್ಯೂಬರ್ ಸ್ವಾತಿ ಜಗದೀಶ್​ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

    ಮಾಯಾಸ್​ ಅಮ್ಮ ಎಂಬುದು ಸ್ವಾತಿ ಅವರ ಯೂಟ್ಯೂಬ್​ ಚಾನೆಲ್​ ಹೆಸರು. ಇತ್ತೀಚೆಗೆ ಸ್ವಾತಿ ಅವರ ನೇತೃತ್ವದಲ್ಲಿ ನಡೆದ ಪಾಲಕರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಾಲಕರೊಬ್ಬರು ತಮ್ಮ 8 ವರ್ಷದ ಮಗಳೊಂದಿಗೆ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದೆವು ಎಂದು ಹೇಳಿಕೆ ನೀಡಿದ ಬಳಿಕ ಈ ವಿವಾದ ಹುಟ್ಟುಕೊಂಡಿದೆ. ಈ ಹೇಳಿಕೆಯು ಇದೀಗ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.

    ಇದನ್ನೂ ಓದಿ: ವರ್ಕ್ಔಟ್​​​​​ನಿಂದ ಹೃದಯಾಘಾತ ಆಗಲ್ಲ, ಅದು ತಪ್ಪು ಪರಿಕಲ್ಪನೆ: ಮಾಜಿ ಶಾಸಕ ರಾಜು ಗೌಡ

    ಪಾಲಕರ ಜವಾಬ್ದಾರಿ ಮತ್ತು ಮಾನಸಿಕ ಯೋಗಕ್ಷೇಮವನ್ನು ತಿಳಿಸಿಕೊಡುವ ವಿಡಿಯೋಗಳೊನ್ನು ಸ್ವಾತಿ ಅವರು ತಮ್ಮ ಮಯಾಸ್​ ಅಮ್ಮ ಚಾನಲ್​ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ವಿಡಿಯೋಗಳ ಜೊತೆಗೆ ಪಾಲಕರಿಗೆ ಮಕ್ಕಳ ಬೆಳವಣಿಗೆಯ ತರಬೇತಿಯನ್ನು ನೀಡುತ್ತಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳನ್ನು ಬೆಳೆಸುವ ಜ್ಞಾನವನ್ನು ಒದಗಿಸುವ ಗುರಿಯನ್ನು ಸ್ವಾತಿ ಹೊಂದಿದ್ದಾರೆ.

    ಮಕ್ಕಳ ಜತೆ ಅಶ್ಲೀಲ ವಿಡಿಯೋ ನೋಡಲು ಸ್ವಾತಿ ಪ್ರೇರಿಪಿಸಿರುವುದು ವಿವಾದಕ್ಕೆ ಗುರಿಯಾಗಿದೆ. ಅಪ್ರಾಪ್ತ ವಯಸ್ಕರನ್ನು ಇಂತಹ ವಿಷಯಕ್ಕೆ ಒಡ್ಡುವುದು ನೈತಿಕವಾಗಿ ಸರಿಯಲ್ಲ ಮತ್ತು ಕಾನೂನುಬದ್ಧವಾಗಿ ಇದನ್ನು ನಿಷೇಧಿಸಲಾಗಿದೆ. ಮಕ್ಕಳ ಮುಗ್ಧತೆಯನ್ನು ಕಾಪಾಡುವುದು ಅತ್ಯುನ್ನತ ಕಾಳಜಿಯಾಗಿದೆ ಎಂದು ನೆಟ್ಟಿಗರು ಸ್ವಾತಿ ವಿರುದ್ಧ ಕಿಡಿಕಾರಿದ್ದಾರೆ. ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅರಿವಿನ ಬಗ್ಗೆ ತಿಳಿಸಬೇಕು ಎಂಬುದು ಸ್ವಾತಿ ಅವರ ವಾದವಾಗಿದೆ. ಅಲ್ಲದೆ, ತಮ್ಮ ನಡೆಯನ್ನು ಸಹ ಅವರ ಸಮರ್ಥಿಸಿಕೊಂಡಿದ್ದಾರೆ. ಆದರೆ, ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಗಾರ್ಮೆಂಟ್ಸ್ ನೌಕರಿಗೆ ಹೊರಟ್ಟಿದ್ದ ಆಟೋ, ಬಸ್ ಮುಖಾಮುಖಿ; ಯುವತಿ ಮೃತ, 10 ಕಾರ್ಮಿಕರಿಗೆ ಗಾಯ

    ಅಪ್ರಾಪ್ತರು ಸೂಕ್ತವಲ್ಲದ ವಿಷಯಕ್ಕೆ ಒಡ್ಡಿಕೊಳ್ಳುವುದು ಮತ್ತು ವಿಷಯದ ಸ್ವರೂಪವನ್ನು ಲೆಕ್ಕಿಸದೆಯೇ, ಸ್ಪಷ್ಟವಾದ ವಸ್ತುಗಳಿಗೆ ಚಿಕ್ಕ ಮಕ್ಕಳನ್ನು ಒಡ್ಡುವುದು ನೈತಿಕವಾಗಿ ಆಕ್ಷೇಪಾರ್ಹ ಮತ್ತು ಕಾನೂನುಬದ್ಧವಾಗಿ ನಿರ್ಬಂಧಿಸಲಾಗಿದೆ. ಮಕ್ಕಳ ಮಾನಸಿಕ ಯೋಗಕ್ಷೇಮ ಮತ್ತು ಮುಗ್ಧತೆಯನ್ನು ಖಾತ್ರಿಪಡಿಸುವುದು ಅತ್ಯಂತ ಮಹತ್ವದ್ದಾಗಿದೆ, ಪ್ರಭಾವಿಗಳು ತಮ್ಮ ವೇದಿಕೆಗಳನ್ನು ಜವಾಬ್ದಾರಿಯುತವಾಗಿ ಬಳಸುವ ಅಗತ್ಯವನ್ನು ಈ ವಿವಾದ ಒತ್ತಿಹೇಳುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

    ವರ್ಕ್ಔಟ್​​​​​ನಿಂದ ಹೃದಯಾಘಾತ ಆಗಲ್ಲ, ಅದು ತಪ್ಪು ಪರಿಕಲ್ಪನೆ: ಮಾಜಿ ಶಾಸಕ ರಾಜು ಗೌಡ

    ಕಮಿಷನ್‌ ಆರೋಪ: ಯಾವ ಕಂಟ್ರಾಕ್ಟರ್ ಹಿಂದೆ ಯಾರಿದ್ದಾರೆ ನನಗೂ ಗೊತ್ತಿದೆ ಎಂದ ಡಿಕೆಶಿ

    ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆರಂಭಿಸಿ ಪ್ರಧಾನಿ ಮೋದಿಗೆ 3 ಪ್ರಶ್ನೆಗಳನ್ನು ಕೇಳಿದ ಗೌರವ್​ ಗೊಗೊಯ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts