More

    ಮಾಯಕ್ಕಾ ದೇವಸ್ಥಾನದ ಬಾಗಿಲು ಬಂದ್

    ಚಿಂಚಲಿ: ಮಹಾರಾಷ್ಟ್ರ ಮತ್ತು ಕೇರಳದಲ್ಲಿ ರೂಪಾಂತರಿ ಕರೊನಾ ವೈರಸ್ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಮಾಯಕ್ಕಾದೇವಿ ದೇವಸ್ಥಾನದ ದರ್ಶನ ನಿಷೇಧಿಸಲಾಗಿದೆ ಎಂದು ರಾಯಬಾಗ ತಹಸೀಲ್ದಾರ್ ಮೋಹನ ಭಸ್ಮೆ ಹೇಳಿದರು. ತಾಲೂಕಾಡಳಿತದ ಸಿಬ್ಬಂದಿಯೊಂದಿಗೆ ಭಾನುವಾರ ಬೆಳಗ್ಗೆ ಆಗಮಿಸಿ ದೇವಸ್ಥಾನದ ಬಾಗಿಲು ಬಂದ್ ಮಾಡಿ ಅವರು ಮಾತನಾಡಿದರು. ಮಾಯಕ್ಕಾದೇವಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಾರಾಷ್ಟ್ರದ ಭಕ್ತರು ಆಗಮಿಸುವುದರಿಂದ ಸಾರ್ವಜನಿಕರ ಮತ್ತು ಭಕ್ತರ ಆರೋಗ್ಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶನಿವಾರ ರಾತ್ರಿಯಿಂದಲೇ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಕರೊನಾ ರೂಪಾಂತರ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು. ರಾಯಬಾಗ ಸಿಪಿಐ ಕೆ.ಎಸ್. ಹಟ್ಟಿ ಮಾತನಾಡಿದರು. ಕುಡಚಿ ಪಿಎಸ್‌ಐ ಶಿವರಾಜ ಧರಿಗೋಣ, ಪಪಂ ಮುಖ್ಯಾಧಿಕಾರಿ ವಿ.ಆರ್. ಬಳ್ಳಾರಿ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಕಿತ್ತೂರ, ಪಪಂ ಸದಸ್ಯ ಅಂಕುಶ ಜಾಧವ ಹಾಗೂ ಮೈಸೂರ ಕೊಂಬೆಣ್ಣವರ, ರಾವಸಾಬ ಪೂಜೇರಿ, ಬಾಬು ಪೂಜೇರಿ, ಬಾಳೇಶ ಪೂಜೇರಿ, ಸುಧಾಕರ ಪೂಜೇರಿ, ಲವು ಚೌಗಲಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts