More

    ಅಮೇಜಾನ್‌ನಲ್ಲಿ ವಸಿಷ್ಠ ವರ್ಸಸ್ ವಸಿಷ್ಠ … ಸ್ಟ್ರೀಮ್ ಆಗುತ್ತಿವೆ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಮತ್ತು ‘ಮಾಯಾ ಬಜಾರ್’

    ಅಮೇಜಾನ್‌ನಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳೆಲ್ಲಾ ನೋಡಿ ಮುಗಿಸಿಯಾಗಿದೆ, ಹೊಸ ಸಿನಿಮಾ ಯಾವುದು ಬಿಡುಗಡೆಯಾಗಿಲ್ಲ ಎಂದು ಬೇಸರದಲ್ಲಿರುವವರಿಗೆ ಒಂದು ಸಂತೋಷದ ಸುದ್ದಿ ಇದೆ. ‘ದಿಯಾ’, ‘ಲವ್ ಮಾಕ್‌ಟೇಲ್’ ನಂತರ ಇದೀಗ ಎರಡು ಹೊಸ ಕನ್ನಡ ಚಿತ್ರಗಳು ಅಮೇಜಾನ್ ಪ್ರೈಮ್‌ನಲ್ಲಿ ಇಂದಿನಿಂದ ನೋಡುವುದಕ್ಕೆ ಲಭ್ಯವಿದೆ.

    ಪುನೀತ್ ರಾಜಕುಮಾರ್ ನಿರ್ಮಾಣದ ‘ಮಾಯ ಬಜಾರ್’ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ … ಈ ಎರಡೂ ಚಿತ್ರಗಳು ಇದೀಗ ಅಮೇಜಾನ್‌ನಲ್ಲಿ ಶುಕ್ರವಾರದಿಂದ ಸ್ಟ್ರೀಮಿಂಗ್ ಆಗುತ್ತಿದೆ. ವಿಶೇಷವೆಂದರೆ, ಈ ಎರಡೂ ಚಿತ್ರಗಳಲ್ಲಿ ವಸಿಷ್ಠ ಸಿಂಹ ಹೀರೋ ಆಗಿ ನಟಿಸಿದ್ದು, ಅವರ ಎರಡು ಚಿತ್ರಗಳು ಇಂದು ಒಂದೇ ದಿನ ಅಮೇಜಾನ್‌ನಲ್ಲಿ ಬಿಡುಗಡೆಯಾಗಿದೆ. ಈ ಎರಡು ಚಿತ್ರಗಳು ಫೆಬ್ರವರಿಯಲ್ಲಿ ರಾಜ್ಯದ್ಯಂತ ಬಿಡುಗಡೆಯಾಗಿದ್ದವು. ಈಗ ಅಮೇಜಾನ್ ಮೂಲಕ ವಿಶ್ವದಾದ್ಯಂತ ಬಿಡುಗಡೆಯಾಗಿದೆ.

    ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಎಂಬ ಹೆಸರೇ ಹೇಳುವಂತೆ ಎರಡೂ ದೇಶಗಳ ಸಂಸ್ಕೃತಿಗಳ ಅನಾವರಣ ಈ ಚಿತ್ರದಲ್ಲಾಗಿದೆ. ಈ ಎರಡೂ ದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರದಲ್ಲಿ ವಸಿಷ್ಠಗೆ ನಾಯಕಿಯಾಗಿ ಮಾನ್ವಿತಾ ನಟಿಸಿದ್ದು ಮಿಕ್ಕಂತೆ ಸುಮಲತಾ ಅಂಬರೀಶ್, ಅನಂತ್ ನಾಗ್, ಸಾಧು ಕೋಕಿಲ, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದಾರೆ.

    ಇನ್ನು 2016ರಲ್ಲಾದ ಅಪನಗದೀಕರಣದ ಸುತ್ತ ನಡೆಯುವ ಕಾಲ್ಪನಿಕ ಕಥೆ ‘ಮಾಯ ಬಜಾರ್’ನಲ್ಲಿ. ಅಪನಗದೀಕರಣವಾದ ಸಂದರ್ಭದಲ್ಲಿ ಒಂದಿಷ್ಟು ಜನರ ಜೀವನ ಹೇಗೆಲ್ಲಾ ಬದಲಾಯಿತು ಎಂದು ಹೇಳುವ ಈ ಚಿತ್ರವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶಿಸಿದ್ದು, ಚಿತ್ರದಲ್ಲಿ ವಸಿಷ್ಠ ಜತೆಗೆ ಪ್ರಕಾಶ್ ರೈ, ಸಾಧು ಕೋಕಿಲ, ಸುಧಾರಾಣಿ, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ.

    ಕಿರುತೆರೆಯ ಸುಂದರಿಯರು ಕ್ವಾರಂಟೈನ್​ ಹೊತ್ತಲ್ಲಿ ಏನೆಲ್ಲ ಮಾಡುತ್ತಿದ್ದಾರೆ? ಅವರೇ ನೀಡಿದ ಉತ್ತರ ಹೀಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts