More

    ನವದಂಪತಿ ಪ್ರೀತಿ, ವಿಶ್ವಾಸ, ಸಾಮರಸ್ಯದಿಂದ ಬದುಕು ಸಾಗಿಸಿ

    ರಟ್ಟಿಹಳ್ಳಿ: ನವದಂಪತಿ ಪ್ರೀತಿ, ವಿಶ್ವಾಸ, ಸಾಮರಸ್ಯ, ಪರಸ್ಪರರಲ್ಲಿ ನಂಬಿಕೆಯಿಂದ ಬದುಕು ಸಾಗಿಸಿದಾಗ ಮಾತ್ರ ಅವಿಭಕ್ತ ಕುಟುಂಬಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಬಿಜೆಪಿಯ ಕಾಂತೇಶ ಕೆ.ಇ. ಹೇಳಿದರು.
    ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಶ್ರೀ ವೀರಮಹೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು. ನವದಂಪತಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಒಬ್ಬರಿಗೊಬ್ಬರೂ ಅರ್ಥೈಸಿಕೊಂಡು ವಿಶ್ವಾಸದೊಂದಿಗೆ ಇರಬೇಕು. ಕುಟುಂಬದಲ್ಲಿ ಹಠದ ಸಾಧನೆ ಇರಬಾರದು. ಇತರರಿಗೆ ಮಾದರಿಯಾಗಿ ತಮ್ಮ ಜೀವನ ಸಾಗಿಸಬೇಕು, ನಮ್ಮ ಧರ್ಮದ ರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.
    ಸಾನ್ನಿಧ್ಯ ವಹಿಸಿದ್ದ ಕಬ್ಬಿಣಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹ ದುಂದು ವೆಚ್ಚಕ್ಕೆ ಕಡಿವಾಣ ಹಾಕುತ್ತದೆ ಎಂದರು.
    ಸಾವಿರಾರು ಜನರ ಸಮ್ಮುಖದಲ್ಲಿ ಹಸೆಮಣೆ ಏರಿದ ನವದಂಪತಿಗಳು ಪ್ರೀತಿ, ವಿಶ್ವಾಸದಿಂದ ಬದುಕಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಉತ್ತಮ ಸಂಸ್ಕಾರದಿಂದ ನಮ್ಮ ಪರಂಪರೆಗಳು ಮುಂದುವರಿಯುತ್ತವೆ ಎಂದರು.
    ಹಿರೇಮಾಗಡಿ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶಿವಯೋಗಿ ದೇವರು ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಸಾಮೂಹಿಕ ವಿವಾಹ ಸಮಾರಂಭಲ್ಲಿ 5 ನವಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು. ಗ್ರಾಮದ ಕೊಟ್ರಯ್ಯ ಶಾಸ್ತ್ರಿ ವೈದಿಕತ್ವದಲ್ಲಿ ಕಾರ್ಯಕ್ರಮ ಜರುಗಿತು. ಪರಮೇಶ್ವರಪ್ಪ ಹಲಗೇರಿ, ಪ್ರಕಾಶಗೌಡ ಎಲೇದಹಳ್ಳಿ, ಗ್ರಾಪಂ ಸದಸ್ಯರಾದ ಟಿ.ಸಿ. ಶಿವಪ್ಪನವರ, ಹನುಮಂತಪ್ಪ ನಗೇನಹಳ್ಳಿ, ಸುನೀತಾ ಗಣೇಶ ಹಾದ್ರಿಹಳ್ಳಿ, ಮಹೇಶ ಬಣಕಾರ, ಗ್ರಾಮಸ್ಥರಾದ ಕಲ್ಲಪ್ಪ ಕಲ್ಲದೇವರು, ರಿಂದೇಶ ಗೌಳೇರ, ಕುಮಾರ ಬಳಿಗಾರ, ಗುಡ್ಡಪ್ಪ ದೇಸಾಯಿ, ಚೆನ್ನಬಸಯ್ಯ ಮಠದ, ಸುಭಾಷ ದ್ಯಾಮನಕಟ್ಟಿ, ಚಂದ್ರಪ್ಪ ಬೇವಿನಹಳ್ಳಿ, ಹನುಮಂತಪ್ಪ ಬೇವಿನಹಳ್ಳಿ, ಗ್ರಾಮಸ್ಥರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts