More

    ಮಾರ್ಚ್ 1ರಂದು ಮಾವಿನಹಳ್ಳಿ ಬಸಪ್ಪನ ರಥೋತ್ಸವ

    ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಬಸವಾಪುರದ ಮಾವಿನಹಳ್ಳಿ ಶ್ರೀಬಸವೇಶ್ವರ ಸ್ವಾಮಿಯ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಾರ್ಚ್ 1ರಂದು ಜರುಗಲಿದೆ.

    ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವ ಫೆ. 25ರಿಂದ ಆರಂಭವಾಗಲಿದ್ದು, ಅಂದು ಸ್ವಾಮಿಗೆ ರುದ್ರಾಭಿಷೇಕ ಸೇವೆ, 26ರಂದು ಅಶ್ವೋತ್ಸವ, ಕಂಕಣಧಾರಣೆ, ಪಲ್ಲಕ್ಕಿ ಉತ್ಸವ, ನಂತರ ಧ್ವಜಾರೋಹಣ ನೆರವೇರಲಿದೆ.

    27ರಂದು ವೃಷಭೋತ್ಸವ, 28ರಂದು ಗಜೋತ್ಸವ ಮತ್ತು ಕೆಂಡೋತ್ಸವ ಜರುಗಲಿದೆ. ಮಾ. 1ರಂದು ಸ್ವಾಮಿಯ ದೇಗುಲ ಮುಂಭಾಗ ಬೆಳಗ್ಗೆ 10.30ಕ್ಕೆ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ. ಸಂಜೆ 4ಕ್ಕೆ ಹೂವಿನ ಅಡ್ಡ ಪಲ್ಲಕ್ಕಿ ಉತ್ಸವದ ನಂತರ 5ಕ್ಕೆ ಸ್ವಾಮಿಯ ಮಹಾರಥೋತ್ಸವ ನೆರವೇರಲಿದೆ.

    2ರಂದು ಕಂಕಣ ವಿಸರ್ಜನೆ, ಮಹಾಮಂಗಳಾರತಿ, ಇತರೆ ಪೂಜಾ ಸೇವೆಯೊಂದಿಗೆ ಜಾತ್ರೆ ಮುಕ್ತಾಯವಾಗಲಿದೆ. ದೇವರ ಈ ಎಲ್ಲಾ ಕೈಂಕರ್ಯದಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಟ್ರಸ್ಟ್ ಉಪಾಧ್ಯಕ್ಷ ಬಿ.ಎಸ್. ವಿಶ್ವನಾಥ್ ಮನವಿ ಮಾಡಿದ್ದಾರೆ.

    ಸ್ವಾಮಿಯ ನೂತನ ದೇಗುಲ ಭವ್ಯವಾಗಿ ನಿರ್ಮಿಸುವ ಕಾರ್ಯ ಆರಂಭವಾಗಿದ್ದು, ನೆರವು ನೀಡಲಿಚ್ಛಿಸುವ ಭಕ್ತರು ಟ್ರಸ್ಟ್ ಸಂಪರ್ಕಿಸಬಹುದು ಎಂದು ಖಂಜಾಚಿ ಎಸ್.ಸಿ. ಮಲ್ಲಿಕಾರ್ಜುನಪ್ಪ ಕೋರಿದ್ದಾರೆ.

    ಜಾತ್ರೆ ಅಂಗವಾಗಿ ಈಚೆಗೆ ನಡೆದ ಸಭೆಯಲ್ಲಿ ಕಾರ್ಯದರ್ಶಿ ಗಂಗಾಧರಪ್ಪ, ಸಹ ಕಾರ್ಯದರ್ಶಿ ರುದ್ರಮುನಿ, ಸದಸ್ಯರಾದ ಬಸವರಾಜಪ್ಪ, ಶಂಕರಮೂರ್ತಿ, ನಾಗಭೂಷಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts