More

    ಅನುಭವದಿಂದ ಪರಿಪಕ್ವತೆ ಲಭ್ಯ: ಪ್ರೊ.ಗೋಪಿನಾಥ್

    ಶಿವಮೊಗ್ಗ: ಬದುಕಿನಲ್ಲಿ ಎದುರಾಗುವ ಪ್ರತಿ ಅವಮಾನಗಳನ್ನೂ ಮೀರಿ ನಿಲ್ಲುವ ಆತ್ಮವಿಶ್ವಾಸ ಎಲ್ಲರದ್ದಾಗಬೇಕೆಂದು ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿ ಪ್ರೊ. ಎಸ್.ಎಂ.ಗೋಪಿನಾಥ ಹೇಳಿದರು.

    ನಗರದ ಎಸ್‌ಆರ್‌ಎನ್‌ಎಂ ಕಾಲೇಜಿನಿಂದ ಪ್ರಥಮ ವರ್ಷದ ಬಿಸಿಎ ಹಾಗೂ ಬಿಎಸ್ಸಿ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅನುಭವದಿಂದ ಮಾತ್ರ ಬದುಕಿನಲ್ಲಿ ನಿಜವಾದ ಪರಿಪಕ್ವ ಗಳಿಸಲು ಸಾಧ್ಯ. ಅಂತಹ ಪರಿಪಕ್ವತೆ ಯಾವುದೇ ಪುಸ್ತಕಗಳಿಂದ ಸಿಗಲಾರದು. ಅವಮಾನಕ್ಕೆ ಒಳಗಾದ ವ್ಯಕ್ತಿ ಮಾತ್ರ ನಿಜವಾಗಿಯೂ ಸನ್ಮಾನಕ್ಕೆ ಅರ್ಹ. ಹೀಗಾಗಿ ಅವಮಾನಗಳನ್ನು ಸಮರ್ಥವಾಗಿ ಎದುರಿಸುವ ಮನೋಭಾವ ನಮ್ಮದಾಗಬೇಕೆಂದರು.
    ಕಲಿಕೆಯಲ್ಲಿ ಯಾರು ದಡ್ಡರಲ್ಲ, ಕೆಲವರಲ್ಲಿ ಕಲಿಕೆಯ ಸ್ಥಿತಿ ನಿಧಾನವಾಗಿರುತ್ತದೆ. ಕಲಿಕಾ ಗುಣಮಟ್ಟ ಹೆಚ್ಚಳಕ್ಕೆ ಪಾಲಕರು ಮತ್ತು ಶಿಕ್ಷಕರು ಅವಲೋಕಿಸಿ ವಿದ್ಯಾರ್ಥಿಯನ್ನು ಪ್ರೇರೇಪಿಸಬೇಕು. ಪದವಿ ಹಂತದಲ್ಲಿ ಗುರಿ ಸೇರುವ ತವಕ ವಿದ್ಯಾರ್ಥಿಗಳಲ್ಲಿರಬೇಕು. ಪಾಲಕರ ಕಷ್ಟಗಳಿಗೆ ಹೆಗಲಾಗುವ ಜವಾಬ್ದಾರಿ ರೂಢಿಸಿಕೊಳ್ಳಬೇಕು. ಸಮಾಜಮುಖಿ ಚಿಂತನೆಗಳ ಮನೋಭೂಮಿಕೆ ರೂಪುಗೊಳ್ಳಬೇಕೆಂದರು.
    ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ದೀಪ ತಾನು ಬೆಳಗಿ ಇತರರಿಗೆ ಬೆಳಕು ನೀಡುವಂತೆ ಶಿಕ್ಷಕರು ತಾವು ವಿಷಯ ಮನನ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅದನ್ನು ಧಾರೆ ಎರೆಯುತ್ತಾರೆ. ತಾಯಿ ತನ್ನ ಮಕ್ಕಳಿಗೆ ಆ ಹೊತ್ತಿನ ಅವಶ್ಯಕತೆ ಪೂರೈಸಿದರೆ, ತಂದೆ ಭವಿಷ್ಯದ ಅವಶ್ಯಕತೆಗಳನ್ನು ಪೂರೈಸುತ್ತಾನೆ. ಹೀಗಾಗಿ ಪಾಲಕರು ಹೆಮ್ಮೆಪಡುವಂತೆ ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಡಾ. ಕೆ.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts