More

    ಹಾಥರಸ್ ಪ್ರಕರಣ: ಪಿಎಫ್​ಐ ನಂಟಿನ ಕೇರಳದ ಪತ್ರಕರ್ತ ಮತ್ತು ಮೂವರ ನ್ಯಾಯಾಂಗ ಬಂಧನ ವಿಸ್ತರಣೆ

    ಮಥುರಾ: ಹಾಥರಸ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಕೇರಳದ ಪತ್ರಕರ್ತ ಮತ್ತು ಇತರ ಮೂವರ ನ್ಯಾಯಾಂಗ ಬಂಧನದ ಅವಧಿಯನ್ನು ನವೆಂಬರ್​ 2 ರ ತನಕ ಮತ್ತೆ ವಿಸ್ತರಿಸಿದೆ. ಪತ್ರಕರ್ತ ಸಿದ್ದಿಕ್​ ಕಪ್ಪನ್​ ಮತ್ತು ಇತರೆ ಮೂವರು ಹಾಥರಸ್ ಸಂತ್ರಸ್ತೆಯ ಮನೆಗೆ ಹೋಗುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದರು. ನಾಲ್ವರ ವಿರುದ್ಧ ಉದ್ದೇಶಪೂರ್ವಕ ಅಪರಾಧ ಎಸಗುವ ಉದ್ದೇಶ, ರಾಷ್ಟ್ರದ್ರೋಹ ಮತ್ತು ಇತರೆ ಕೆಲವು ಭಯೋತ್ಪಾದನಾ ನಡವಳಿಕೆಗಳ ಆರೋಪ ಹೊರಿಸಲಾಗಿದೆ.

    ಬಂಧಿತರನ್ನು ಅಕ್ಟೋಬರ್ ಏಳರಂದು ಕೋರ್ಟ್​ಗೆ ಹಾಜರುಪಡಿಸಿದ್ದ ವೇಳೆ ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇಂದು ಮತ್ತೆ ಆರೋಪಿಗಳನ್ನು ಮಥುರಾ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಂಜು ರಜಪೂತ್ ಅವರ ಸಮಕ್ಷಮ ವಿಡಿಯೋ ಕಾನ್ಫರೆನ್ಸ್​ ಮೂಲಕ ನಿಲ್ಲಿಸಿದಾಗ, ಪೊಲೀಸ್ ವಿಚಾರಣೆ ಇನ್ನೂ ಮುಗಿದಿಲ್ಲ ಎಂದು ಎಪಿಒ ಬ್ರಜಮೋಹನ್ ಸಿಂಗ್ ಹೇಳಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು ನವೆಂಬರ್ 2 ರ ತನಕ ನ್ಯಾಯಾಂಗ ಬಂಧನ ಅವಧಿ ಮುಂದುವರಿಸಿದರು.

    ಇದನ್ನೂ ಓದಿ: ‘ಮಹಾರಾಷ್ಟ್ರದಲ್ಲಿ ಹೆಚ್ಚಾಗ್ತಿದೆ ‘ಲವ್​ ಜಿಹಾದ್​’ ಕೇಸ್​ಗಳು’!

    ಅತೀಖುರ್​ ರಹಮಾನ್​, ಆಲಂ ಮತ್ತು ಮಸೂದ್​ ಪತ್ರಕರ್ತ ಸಿದ್ದಿಕ್​ ಕಪ್ಪನ್​ ಜತೆಗಿರುವ ಇತರೆ ಮೂವರು ಆರೋಪಿಗಳು. ಹಾಥರಸ್ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್​ಐ)ದ ಕೈವಾಡ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಆ ಸಂಘಟನೆ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಸಂಘಟನೆಗಳೊಂದಿಗೆ ಇವರಿಗೆ ನಂಟಿದೆ ಎಂಬ ಆರೋಪವನ್ನೂ ಪೊಲೀಸರು ಹೊರಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

    ದೇಶದ ಮೊದಲ ಮಲ್ಟಿ ಮೋಡಲ್ ಲಾಜಿಸ್ಟಿಕ್ಸ್ ಪಾರ್ಕ್​ಗೆ ಶಂಕುಸ್ಥಾಪನೆ ನೆರವೇರಿಸಿದ್ರು ಸಚಿವ ಗಡ್ಕರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts