More

    ಕಂಪ್ಲಿಯಲ್ಲಿ ಸ್ನಾತಕೋತ್ತರ ಪದವಿ ಕಾಲೇಜು ಆರಂಭಿಸಲು ಒತ್ತಾಯ

    ಕಂಪ್ಲಿ: ಪಟ್ಟಣದಲ್ಲಿ ಸ್ನಾತಕೋತ್ತರ ಪದವಿ ಕಾಲೇಜು ಆರಂಭಿಸುವಂತೆ ಒತ್ತಾಯಿಸಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಸದಸ್ಯರು ಶಿರಸ್ತೆದಾರ್ ಎಸ್.ಡಿ.ರಮೇಶ್‌ಗೆ ಶನಿವಾರ ಮನವಿ ಸಲ್ಲಿಸಿದರು.

    ಪ್ರಥಮ ದರ್ಜೆ ಕಾಲೇಜಿನಲ್ಲಿಯೇ ಸ್ನಾತಕೋತ್ತರ ಪದವಿ ಆರಂಭಿಸಿ

    ಸಂಘಟನೆ ತಾಲೂಕು ಅಧ್ಯಕ್ಷ ಎನ್.ಸೈಯ್ಯದ್ ವಾರೀಶ್ ಮಾತನಾಡಿ, ಪ್ರತಿ ವರ್ಷ ತಾಲೂಕಿನಿಂದ 150 ರಿಂದ 200 ಜನ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಶಿಕ್ಷಣಕ್ಕಾಗಿ ಗಂಗಾವತಿ, ಬಳ್ಳಾರಿ, ಕೊಪ್ಪಳ ಸೇರಿ ಬೇರೆ ಕಡೆಗಳಿಗೆ ತೆರಳಬೇಕಾಗುತ್ತದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬೇರೆಡೆ ತೆರಳದೆ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೇ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಸ್ನಾತಕೋತ್ತರ ಪದವಿ ಕಾಲೇಜು ತೆರೆಯಬೇಕೆಂದು ಒತ್ತಾಯಿಸಿದರು.

    ಇದನ್ನೂ ಓದಿ: ಸ್ನಾತಕೋತ್ತರ ಪದವಿ ಕಾಲೇಜು ಸೇರಿದಂತೆ ಎಲ್ಲ ವಿಭಾಗಕ್ಕೂ 3 ದಿನ ರಜೆ ಘೋಷಿಸಿದ ಮೈಸೂರು ವಿಶ್ವವಿದ್ಯಾಲಯ


    ಸಂಘಟನೆ ಪದಾಧಿಕಾರಿಗಳಾದ ರಮೇಶ್ ಕುಂಟೋಜಿ, ರೋಷನ್ ಯಾಳ್ಪಿ, ಡಿ.ಹೇಮಂತ್‌ಕುಮಾರ್, ಗಂಗಾವತಿ ಕೃಷ್ಣ, ಸುಭಾನ್, ಗುರುಶಾಸ್ತ್ರಿ, ಪಿ.ಸಿ.ಈರಣ್ಣ, ಎಂ.ಪಂಪನ ಗೌಡ, ಪುರುಷೋತ್ತಮ್, ಎಚ್.ದೇವರಾಜ್, ಸಿ.ಡಿ.ಅನಿಲ್‌ಕುಮಾರ್, ಧನರಾಜ್, ಕೆ. ಶಾಂತಕುಮಾರ್, ವೆಂಕಟೇಶ್, ಗಣೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts