More

    ‘ಮಾಸ್ಟರ್’ಗೆ ಸಿಗ್ತು ಇನ್ನೊಂದು ರಿಲೀಸ್ ಡೇಟ್ … ಯಾವಾಗ ಗೊತ್ತಾ ವಿಜಯ್ ಹೊಸ ಚಿತ್ರದ ಬಿಡುಗಡೆ

    ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ವಿಜಯ್ ಅಭಿನಯದ ‘ಮಾಸ್ಟರ್’ ಚಿತ್ರ ಬಿಡುಗಡೆಯಾಗಿ ಒಂದು ವಾರವೇ ಆಗಿರಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಚಿತ್ರ ಸಂಪೂರ್ಣವಾಗಿದ್ದರೂ, ಬಿಡುಗಡೆ ಮಾಡುವಂತಿಲ್ಲ. ಹಾಗಾದರೆ, ಚಿತ್ರ ಯಾವಾಗ ಬಿಡುಗಡೆ ಎಂದು ಪ್ರಶ್ನೆ ಬರುವುದು ಸಹಜ. ಹಾಗೆ ಪ್ರಶ್ನಿಸುತ್ತಿರುವ ವಿಜಯ್ ಅಭಿಮಾನಿಗಳಿಗೆ ಚಿತ್ರತಂಡ ಒಂದು ಗುಡ್ ನ್ಯೂಸ್ ಕೊಟ್ಟಿದೆ.

    ಅದೇನೆಂದರೆ, ಜೂನ್ ತಿಂಗಳ 22ರಂದು ಹೇಗೂ ವಿಜಯ್ ಹುಟ್ಟುಹಬ್ಬವಿದೆ. ಈ ಹುಟ್ಟುಹಬ್ಬದ ಗ್‌ಟಿ ಆಗಿ ಯಾಕೆ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಚಿತ್ರತಂಡ ಲೆಕ್ಕ ಹಾಕುತ್ತಿದೆ. ಮೇ 3ರವರೆಗೂ ಹೇಗೆ ಚಿತ್ರ ಬಿಡುಗಡೆ ಮಾಡುವಂತಿಲ್ಲ. ಆಮೇಲೆ ಲಾಕ್‌ಡೌನ್ ಮುಗಿದು, ಚಿತ್ರಮಂದಿರಗಳನ್ನು ತೆಗೆದರೂ, ತಕ್ಷಣ ಪ್ರೇಕ್ಷಕರು ಬಂದು ಚಿತ್ರ ನೋಡುತ್ತಾರೆ ಎಂದು ಹೇಳುವ ಹಾಗಿಲ್ಲ. ಹಾಗಾಗಿ ಜೂನ್ 22ರ ವಿಜಯ್ ಹುಟ್ಟುಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡಿದರೆ, ಅಷ್ಟರಲ್ಲಿ ಪರಿಸ್ಥಿತಿ ಸಹ ಸ್ವಲ್ಪ ತಿಳಿಯಾಗಿರುತ್ತದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬದಂದೇ ಚಿತ್ರ ಬಿಡುಗಡೆಯಾಗುವುದರಿಂದ ವಿಜಯ್ ಅಭಿಮಾನಿಗಳು ಸಂತೋಷದಿಂದ ಕುಣಿದು ಕುಪ್ಪಳಿಸುತ್ತಾರೆ ಎಂಬುದು ಚಿತ್ರತಂಡದ ಲೆಕ್ಕಾಚಾರ. ಹಾಗಾಗಿ ಸದ್ಯದ ಮಟ್ಟಿಗೆ, ಜೂನ್ 22ರಂದು ‘ಮಾಸ್ಟರ್’ ಬಿಡುಗಡೆಯಾಗುತ್ತದೆ ಎಂದು ನಂಬಬಹುದು.

    ಇನ್ನು ‘ಮಾಸ್ಟರ್’ ಚಿತ್ರದಲ್ಲಿ ವಿಜಯ್ ನಾಯಕನಾಗಿ ಅಭಿನಯಿಸಿದರೆ, ವಿಜಯ್ ಸೇತುಪತಿ ಪ್ರತಿನಾಯಕನಾಗಿ ಅಭಿನಯಿಸಿದ್ದಾರೆ. ಇನ್ನು ಲೋಕೇಶ್ ಕನಕರಾಜ್ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

    ಚಿ. ಉದಯಶಂಕರ್ ಪತ್ನಿ ಶಾರದಮ್ಮ ಇನ್ನಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts