More

    ಸಾಮೂಹಿಕ ವಿವಾಹ ಅತ್ಯಂತ ಶ್ರೇಷ್ಠ ಕಾರ್ಯ

    ಕುಕನೂರು: ಸಾಮೂಹಿಕ ವಿವಾಹ ಮಾಡುವುದು ಬಡವರ್ಗದ ಜನರಿಗೆ ಸಹಕಾರ ನೀಡುವ ಉನ್ನತ ಕಾರ್ಯವಾಗಿದೆ ಎಂದು ಮಂಗಳೂರಿನ ಅರಳೆಲೆ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ತಾಲೂಕಿನ ತಳಬಾಳ ಗ್ರಾಮದಲ್ಲಿ ಶ್ರೀಭೀಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಮಂಗಲ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸೋಮವಾರ ಆಶೀರ್ವಚನ ನೀಡಿದರು.

    ಪುರಾಣ, ಪ್ರವಚನದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಮೂಹಿಕ ವಿವಾಹ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯ. ಬಡ ಜನರಿಗೆ ಸಾಮೂಹಿಕ ವಿವಾಹಗಳು ಅನುಕೂಲವಾಗುತ್ತವೆ. ದುಬಾರಿಯ ಈ ಕಾಲದಲ್ಲಿ ಮದುವೆ ಮಾಡುವುದು ಬಡ ಜನರಿಗೆ ಕಷ್ಟಕರ. ಆ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಬಡವರ ಹೊರೆ ಕಡಿಮೆ ಮಾಡುತ್ತದೆ ಎಂದರು.

    ಸಾಮೂಹಿಕ ವಿವಾಹ ಎಂಬುದು ಸಾಮಾಜಿಕ ಕಳಕಳಿಯ ಸಂಕೇತವೂ ಹೌದು. ಗ್ರಾಮ ಗ್ರಾಮಗಳ ಮಧ್ಯೆ ಸಾಮರಸ್ಯ ಸಹ ಬೆಳೆಯುತ್ತದೆ. ಬದುಕಿನ ಕ್ಷಣಗಳನ್ನು ಸಮಾಜ ಸೇವೆಗೆ ಅರ್ಪಿಸಬೇಕು. ಆ ನಿಟ್ಟಿನಲ್ಲಿ ತಳಬಾಳ ಗ್ರಾಮಸ್ಥರು ಕಾರ್ಯ ಶ್ಲಾಘನೀಯ. ಸಾಮೂಹಿಕ ವಿವಾಹ ಮಾಡಿಕೊಟ್ಟು ಜೀನವನ್ನು ಸಾರ್ಥಕ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    12 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಂತರ ಅನ್ನಸಂತರ್ಪಣೆ ಜರುಗಿತು. ಪುರಾಣ ಪ್ರವಚನಕಾರ ಶಾಂತಯ್ಯ ಶಾಸ್ತ್ರಿ, ಸಂಗೀತಗಾರ ಹನುಮಂತಪ್ಪ, ತಬಲಾ ವಾದಕ ನೀಲಕಂಠಪ್ಪ ರೊಡ್ಡರ, ಗ್ರಾಪಂ ಸದಸ್ಯ ದೇವೇಂದ್ರಪ್ಪ ಕಮ್ಮಾರ, ನಿವೃತ್ತ ಶಿಕ್ಷಕ ಮಲ್ಲಿಕಸಾಬ್, ಪ್ರಮುಖರಾದ ಹುಚ್ಚಯ್ಯ ಸಸಿಮಠ, ಅಂದಯ್ಯ ಲಕಮಾಪೂರ, ಮಲ್ಲಯ್ಯ ಭೂಸನೂರಮಠ, ಶಂಕರಗೌಡ ಪೊಲೀಸ್ ಪಾಟೀಲ್, ವೀರಭದ್ರಯ್ಯ ಮನ್ನಾಪೂರ, ಶೇಖಪ್ಪ ಭೋವಿ, ಬಸಪ್ಪ ತಳವಾರ, ಭೀಮಯ್ಯ ಸಸಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts