More

    ಡಿಜಿಟಲ್ ಕ್ರಾಂತಿ ಸೃಷ್ಟಿಸಿದ ಶಿಕ್ಷಕಗೆ ಗೌರವ

    ವಿಜ್ಞಾನ ಶಿಕ್ಷಕ ಭೀಮಪ್ಪಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

    ಮಸ್ಕಿ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಭೀಮಪ್ಪಗೆ ಪ್ರತಿಷ್ಠಿತ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಸೆ.5ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

    ಶಿಕ್ಷಕ ಭೀಮಪ್ಪ ಆಧುನಿಕ ತಂತ್ರಜ್ಞಾನ ಬಳಸಿ ವಿಜ್ಞಾನ ಬೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮದೆ ಬ್ಲಾಗ್ ಮೂಲಕ ಪ್ರೌಢಶಾಲೆಯಲ್ಲಿ ಕನ್ನಡ ಮಾದ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಡಿಜಿಟಲ್ ಸಂಪನ್ಮೂಲಗಳನ್ನು ಹಲವು ವರ್ಷಗಳಿಂದ ನೀಡುತ್ತಿದ್ದಾರೆ. ಸುಮಾರು 32 ಲಕ್ಷ ವೀಕ್ಷಣೆ ಪಡೆದ ಕರ್ನಾಟಕದ ಏಕೈಕ ವಿಜ್ಞಾನ ಬ್ಲಾಗ್ ಆಗಿರುವುದು ಹೆಗ್ಗಳಿಕೆ ವಿಷಯ. ಇವರು ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸ್ಟೇಟ್ ಎಸ್‌ಎಸ್‌ಎಲ್‌ಸಿ ಸ್ಟೂಡೆಂಟ್ ಗ್ರೂಪ್ ಹೆಸರಿನ ಟೆಲಿಗ್ರಾಮ್ ಗುಂಪು ರಚಿಸಿದ್ದು, ಹಲವಾರು ವರ್ಷಗಳಿಂದ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಅದರ ಮೂಲಕ ಎಲ್ಲ ವಿಷಯಗಳ ಸಂಪನ್ಮೂಲಗಳನ್ನು ಉಚಿತವಾಗಿ ಹಂಚಿ, ಫಲಿತಾಂಶ ಸುಧಾರಣೆಗೆ ಕಾರಣಿಕರ್ತರಾಗಿದ್ದಾರೆ. ಭೀಮಪ್ಪ ವಿಜ್ಞಾನ ವಿಷಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.

    ಪ್ರಶಸ್ತಿ ನನ್ನ ಶಾಲೆಯ ಮಕ್ಕಳಿಗೆ ಸಲ್ಲಬೇಕು. ಇದುವರೆಗೂ ಸಾವಿರಕ್ಕೂ ಹೆಚ್ಚು ವಿಷಯಗಳ ಕುರಿತು ಯೂಟ್ಯೂಬ್ ನಲ್ಲಿ ವಿಷಯ ಮಂಡಿಸಿರುವೆ. ರಾಜ್ಯದ ವಿವಿಧ ಕಡೆ ವಿದ್ಯಾರ್ಥಿಗಳಿಂದ ಅದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪರಿಶ್ರಮಕ್ಕೆ ಸಂದ ಪ್ರಶಸ್ತಿಯಾಗಿದ್ದು, ಖುಷಿ ತಂದಿದೆ.
    | ಭೀಮಪ್ಪ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಮಸ್ಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts