More

    ಬಳಗಾನೂರಿನ ಬಂಧುಶತಪುರೇಶ ರಥೋತ್ಸವ ಇಂದು

    ಮಸ್ಕಿ: ತಾಲೂಕಿನ ಬಳಗಾನೂರ ಪಟ್ಟಣದ ಆರಾಧ್ಯದೈವ ಬಂಧುಶತಪುರೇಶನ ಜಾತ್ರಾ ಮಹೋತ್ಸವ ಮೇ 5 ರಂದು
    ನಡೆಯಲಿದ್ದು, ಮಹಾರಥೋತ್ಸವ ಜರುಗಿತು.

    ದೇವಸ್ಥಾನಕ್ಕೆ ಬಣ್ಣಗಳಿಂದ ಲೇಪನ ಮಾಡಲಾಗಿದ್ದು, ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಭಕ್ತರಿಗೆ ಆಂಜನೇಯ ದೇವರ ದರ್ಶನಕ್ಕಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಪಪಂಯಿಂದ ಜಾತ್ರೆಗೆ ಬರುವ ಯಾತ್ರಿಕರಿಗಾಗಿ ಕುಡಿಯುವ ನೀರಿನ ಸೌಕರ್ಯ ಒದಗಿಸಲಾಗುತ್ತಿದೆ. ರಥದ ಮನೆಯಲ್ಲಿ ಭಕ್ತರಿಗೆ ಮಹಾಪ್ರಸಾದ ಸೇವೆ ಇರಲಿದೆ.

    ಮಾರುತಿ ದೇವರಿಗೆ ಮಹಾ ಅಭಿಷೇಕ

    ದೇವಸ್ಥಾನ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಸುಧಾ ಅರಮನೆ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಗುರುವಾರ ಶ್ರೀ ಮಾರುತಿ ದೇವರಿಗೆ ಮಹಾ ಅಭಿಷೇಕ, ಅಲಂಕಾರಸೇವೆ, ಮಧ್ಯಾಹ್ನ ಕಂಕಣ ಕಟ್ಟುವುದು, ಗರುಡಪಟ್ಟಿ ಹಾಗೂ ದೇವಸ್ಥಾನಕ್ಕೆ ಕಳಸಾರೋಹಣ ಹಾಗೂ ಉಚ್ಚಾಯ ಸೇವೆ ಜರುಗಿದವು.

    ಪೂಜಾಸಾಮಗ್ರಿಗಳ ಮೆರವಣಿಗೆ

    5 ರಂದು ಆಗಿಹುಣ್ಣಿಮೆ ದಿನ ಬೆಳಗ್ಗೆ ಶ್ರೀ ಮಾರುತಿ ದೇವರಿಗೆ ಸುಪ್ರಭಾತ ಸೇವೆ, ಅಭಿಷೇಕ, ಪೂಜಾಲಂಕಾರ, ಎಲ್ಲಾ ಬಾಬುದಾರರ ಮನೆಯಿಂದ ಪೂಜಾಸಾಮಗ್ರಿಗಳ ಮೆರವಣಿಗೆ, ಭಕ್ತರಿಂದ ಧೀರ್ಘದಂಡ ನಮಸ್ಕಾರ, ಉರುಳುಸೇವೆ, ಗಂಡಾರತಿ ಸೇವೆ ನೈವೇದ್ಯ ಧಾರ್ಮಿಕ ಕಾರ್ಯಗಳು ನಡೆಯಲಿವೆ.

    ಇದನ್ನೂ ಓದಿ:‌ಮೋದಿ ಕಾಲದಲ್ಲಿ ಒಂದೂ ಹಗರಣವಾಗಿಲ್ಲ…ಕಾಂಗ್ರೆಸ್ ಸರ್ಕಾರದಲ್ಲಿ ಹಗರಣ ಬಿಟ್ಟು ಬೇರೇನು ಆಗಿಲ್ಲ : ವಿಜಯ ಸಂಕೇಶ್ವರ ಹೇಳಿಕೆ

    ಸಂಜೆ 5ಕ್ಕೆ ದೇವರ ಉತ್ಸವಮೂರ್ತಿ ಪೂಜೆಯೊಂದಿಗೆ ರಥೋತ್ಸವ ಪಲ್ಲಕ್ಕಿ ಉತ್ಸವ ಡೊಳ್ಳಿನ ಕುಣಿತ ಸಕಲ ವಾದ್ಯಗಳೊಂದಿಗೆ ದಾಸರ ಹಾಡು ಕುಣಿತ ನಡೆಯಲಿದೆ. ಬಳಿಕ ರಥೋತ್ಸವ ಜರುಗಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts