More

    ಪಶ್ಚಿಮ ಬಂಗಾಳದಲ್ಲಿ ಮಾಸ್ಕ್ ಮೂಲಕವೂ ರಾಜಕೀಯ ಪ್ರಚಾರ!

    ಕೋಲ್ಕತಾ: ಎಷ್ಟು ಸಾಧ್ಯವೋ ಅಷ್ಟು ಸಲ ಜನರಿಗೆ ಮುಖ ತೋರಿಸುವುದು ರಾಜಕಾರಣಿಗಳಿಗೆ ಅನಿವಾರ್ಯ. ಆದರೆ ಕರೊನಾ ಬಂದಾಗಿನಿಂದ ಅವರು ಜನರಿಗೆ ಪೂರ್ಣ ಮುಖ ತೋರಿಸುವುದೂ ಕಷ್ಟವಾಗಿಬಿಟ್ಟಿದೆ. ಇದಕ್ಕೆ ಕಾರಣ- ಮಾಸ್ಕ್ .

    ಮನೆಯಿಂದ ಹೊರಗೆ ಬರುವವರೆಲ್ಲರೂ ಮಾಸ್ಕ್ ಧರಿಸಬೇಕು ಎಂಬುದು ಈಗ ಕೆಲವೆಡೆ ನಿಯಮವಾಗಿದ್ದರೆ, ಇನ್ನು ಕೆಲವೆಡೆ ಅಘೋಷಿತ ಕಾನೂನು. ಹಾಗಾಗಿ ಎಲ್ಲರೂ ಮಾಸ್ಕ್ ಧರಿಸಿಯೇ ಮನೆಯಿಂದ ಹೊರಬೀಳುತ್ತಾರೆ. ಇಂತಹ ಸ್ಥಿತಿಯಲ್ಲಿ ರಾಜಕಾರಣಿಗಳು ಅರ್ಧ ಮುಖ ಮುಚ್ಚಿಕೊಂಡು ಜನರನ್ನು ಭೇಟಿ ಮಾಡುವುದು ಹೇಗೆ? ಫೋಟೋ-ವಿಡಿಯೋಗಳಿಗೆ ಪೋಸ್ ಕೊಡುವುದು ಹೇಗೆ?

    ಬೇರೆಲ್ಲ ಕಡೆ ರಾಜಕಾರಣಿಗಳು ಸಂದರ್ಭಕ್ಕೆ ತಕ್ಕಂತೆ ಮಾಸ್ಕನ್ನು ಕೆಳಗಿಳಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆದರೆ ಪಶ್ಚಿಮ ಬಂಗಾಳದ ರಾಜಕಾರಣಿಗಳು ಮಾಸ್ಕ್ ಹಾಕಿಕೊಂಡೇ ತಮ್ಮ ಪಕ್ಷದ ಕಾರ್ಯಚಟುವಟಿಕೆಯನ್ನು ಸಮರ್ಥವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನೂ ಓದಿ:  ಮತ್ತೆ ಏರಿಕೆಯಾಯಿತು ಪೆಟ್ರೋಲ್ ದರ: ನಿತ್ಯ ಪರಿಷ್ಕರಣೆ ನಿಯಮ ಮರುಜಾರಿ

    ತೃಣಮೂಲ ಕಾಂಗ್ರೆಸ್‌ನವರು ಬಿಳಿ ಬಟ್ಟೆಯ ಮೇಲೆ ತಮ್ಮ ರಾಜ್ಯದ ನಕ್ಷೆ ಅಥವಾ ಪಕ್ಷದ ಚಿಹ್ನೆಯನ್ನು ಮುದ್ರಿಸಿದ ಮಾಸ್ಕ್‌ಗಳನ್ನು ಧರಿಸುತ್ತಿದ್ದರೆ, ಬಿಜೆಪಿಯವರು ಕೇಸರಿ ಬಟ್ಟೆಯಲ್ಲಿ ಕಮಲ ಚಿಹ್ನೆ ಮುದ್ರಿಸಿದ ಮಾಸ್ಕ್‌ಗಳನ್ನು ಧರಿಸಿ ಮಿಂಚುತ್ತಿದ್ದಾರೆ… ‘ಸ್ವಾಮಿಕಾರ್ಯವೂ ಆಯ್ತು, ಸ್ವಕಾರ್ಯವೂ ಆಯ್ತು’ ಎನ್ನುವಂತೆ! ಇದನ್ನೂ ಓದಿ: ನೂರು ಕನಸು ಹೊತ್ತು ಗಂಡನ ಮನೆಗೆ ಹೋದಾಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

    ಇನ್ನು ಕೆಲವು ಕಾರ್ಯಕರ್ತರು ಮಾಸ್ಕ್ ಮೇಲೆಯೇ ತಮ್ಮ ಪಕ್ಷದ ಜನಪ್ರಿಯ ಘೋಷಣೆಗಳನ್ನು ಮುದ್ರಿಸಿಕೊಳ್ಳುತ್ತಿದ್ದಾರೆ. ಇವುಗಳನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯಿಂದ ಹಿಡಿದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ವರೆಗೆ ಎಲ್ಲರೂ ಪಾಲಿಸುತ್ತಿದ್ದಾರೆ. ಇವುಗಳನ್ನು ಧರಿಸಿಯೇ ಪ್ರತಿದಿನ ಪತ್ರಿಕಾಗೋಷ್ಠಿಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ.

    ‘ಕರೊನಾ ಕಿಲ್ಲರ್’ ಸಾಧನ ಆವಿಷ್ಕರಿಸಿದ ರೋಬೋ ಮಂಜೇಗೌಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts