More

    ಮಂಗಳಮುಖಿಯರ ದೌರ್ಜನ್ಯ ತಡೆಯಲು ಮುಂದಾಗಲಿ

    ರಾಯಚೂರು: ತೆಲಂಗಾಣದ ಮಂಗಳಮುಖಿಯರು ನಗರದಲ್ಲಿ ಸ್ಥಳೀಯರ ಮೇಲೆ ದೌರ್ಜನ್ಯ ಎಸಗಿ, ಜೀವ ಬೆದರಿಕೆ ಹಾಕುತ್ತಿದ್ದಾರೆ. ಜನರಿಗೆ ಭದ್ರತೆ ಒಗಿಸುವ ಜತೆಗೆ ಮಂಗಳಮುಖಿಯರಿಗೆ ಕಡಿವಾಣ ಹಾಕಬೇಕು ಎಂದು ಆಪ್ತಮಿತ್ರ ನಗರ ಮತ್ತು ಗ್ರಾಮೀಣ ಅಭಿವೃದ್ದಿ ಸೇವಾ ಸಂಸ್ಥೆ ಅಧ್ಯಕ್ಷೆ ಪ್ರಗತಿ ಒತ್ತಾಯಿಸಿದರು.

    ಇದನ್ನೂ ಓದಿ:ಯುವತಿ ಮೇಲೆ ಸಾಮೂಹಿಕ ದೌರ್ಜನ್ಯ ಎಸಗಿದ ಅಪ್ರಾಪ್ತ ವಯಸ್ಕರು; BJP ನಾಯಕನ ಪುತ್ರ ಸೇರಿದಂತೆ ಮೂವರು ವಶಕ್ಕೆ


    ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಸ್ಥಳೀಯ ಹುಲಿಗೆಮ್ಮ ಎಂಬುವವರು ತೆಲಂಗಾಣದ ಮಂಗಳಮುಖಿಯರು ಜತೆ ಸೇರಿಕೊಂಡು ಗುಂಪು ರಚಿಸಿಕೊಂಡಿದ್ದಾರೆ. ಒಂದು ಬಾರಿಗೆ 40ರಿಂದ 50 ಜನ ಮಂಗಳಮುಖಿಯರು ರಾಯಚೂರಿನಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆ. ಸ್ಥಳೀಯರಿಗೆ ಕಿರುಕುಳ ನೀಡುವುದು, ದೌರ್ಜನ್ಯ ಎಸಗಿ ಭಿಕ್ಷಾಟನೆಗೆ ಬಾರದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.
    ಮೂರು ದಿನಗಳ ಹಿಂದೆ ನನಗೆ ಫೋನ್ ಮಾಡಿ ತೆಲಂಗಾಣ ಗುಂಪಿಗೆ ಸೇರುವಂತೆ ಒತ್ತಾಯಿಸಲಾಗಿತ್ತು. ಇದನ್ನು ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಲಾಯಿತು. ಈಗಾಗಲೇ ಈ ಕುರಿತು ಎಸ್ಪಿ ಹಾಗೂ ಡಿವೈಎಸ್ಪಿಗೆ ದೂರು ನೀಡಲಾಗಿದೆ. ಪೊಲೀಸರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.


    ಸಮಾಜದಲ್ಲಿ ಮಂಗಳಮುಖಿಯರಿಗೆ ಕೆಲಸ ನೀಡಲ್ಲ. ಅವರು ಕುಟುಂಬದಿಂದ ದೂರವಾಗಿ ಬದುಕುತ್ತಿದ್ದರೂ ಇಲ್ಲದ ಆರೋಪಗಳಿಗೆ ತುತ್ತಾಗುವಂತಾಗಿದೆ. ಸ್ಥಳೀಯರು ಆಂಧ್ರಪ್ರದೇಶಕ್ಕೆ ಹೋಗಿ ಭಿಕ್ಷಾಟನೆ ಮಾಡಿದರೆ ಬೆದರಿಸುತ್ತಿದ್ದಾರೆ. ಅಲ್ಲಿಯವರ ಇಲ್ಲಿ ಬಂದು ನಮ್ಮವರನ್ನೇ ಹೆದರಿಸುತ್ತಿದ್ದಾರೆ. ಪೊಲೀಸರು ಕಾನೂನು ಕ್ರಮಕೈಗೊಳ್ಳಬೇಕು ಎಂದು ಪ್ರಗತಿ ಒತ್ತಾಯಿಸಿದರು. ಪದಾಧಿಕಾರಿಗಳಾದ ಲಕ್ಷ್ಮಣ, ಕಾಜಲ್, ಶಿರಿಷಾ, ಸೀಮಾ, ವಂದನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts