More

    ಕೊರಗ ಭಾಷೆಯಲ್ಲಿ ಆಮಂತ್ರಣ ಪತ್ರಿಕೆ

    ವಿಜಯವಾಣಿ ಸುದ್ದಿಜಾಲ ಶಿರ್ವ

    ತುಳುನಾಡಿನ ಕೊರಗ ಭಾಷೆ ತನ್ನದೇ ಆದ ಪ್ರಾಮುಖ್ಯತೆ ಹೊಂದಿದ್ದು, ಇದೀಗ ಅಳಿವಿನಂಚಿನಲ್ಲಿರುವ ಕೊರಗ ಭಾಷೆಯಲ್ಲೇ ತನ್ನ ಮಗನ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿ ಬಂಧುಗಳಿಗೆ ಹಂಚುವ ಮೂಲಕ ರಮೇಶ್ ಮಂಚಕಲ್ ಭಾಷಾ ಪ್ರೇಮ ಮೆರೆದಿದ್ದಾರೆ.

    ಮೂಲತಃ ಉಡುಪಿ ಶಿರ್ವ ಕೋಡು ಪಂಜಿಮಾರಿನವರಾದ ರಮೇಶ್ ವಾಮಂಜೂರಿನಲ್ಲಿ ನೆಲೆಸಿದ್ದು, ಏ.2ರಂದು ಮಗ ಲೇಖರಾಜ್‌ಗೆ ಕೋಡಿಕಲ್‌ನ ವೇದಾವತಿಯೊಂದಿಗೆ ಮಂಗಳೂರಿನಲ್ಲಿ ನಡೆಯುವ ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೊರಗ ಭಾಷೆಯಲ್ಲಿ ಮುದ್ರಿಸಿ ಗಮನ ಸೆಳೆದಿದ್ದಾರೆ. ಈ ಮೂಲಕ ತಮ್ಮ ಜನಾಂಗದ ಭಾಷಾಭಿಮಾನ ಮೆರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts