More

    ಭತ್ತಕ್ಕೆ ಉತ್ತಮ ದರ -ಸರ್ಕಾರದ ಬೆಂಬಲ ಬೆಲೆ ಮೀರಿದ ಬೆಲೆ

    ಅಶೋಕ ಬೆನ್ನೂರು, ಸಿಂಧನೂರು
    ಆರ್‌ಎನ್‌ಆರ್, ಕಾವೇರಿ ಉತ್ತಮ ತಳಿಯ ಭತ್ತಕ್ಕೆ ಪ್ರಸಕ್ತ ಮಾರುಕಟ್ಟೆಯಲ್ಲಿ ಸರ್ಕಾರದ ಬೆಂಬಲ ಬೆಲೆಗಿಂತ ಜಾಸ್ತಿ ದರ ಇದೆ. ಇದು ರೈತರಲ್ಲಿ ಸಹಜವಾಗಿ ಸಂತಸ ಮೂಡಿಸಿದೆ. ತಾಲೂಕಿನಲ್ಲಿ ಮುಂಗಾರು ಹಂಗಾಮಿನಂತೆ ಬೇಸಿಗೆ ಬೆಳೆಗೂ ಪೂರ್ಣ ಪ್ರಮಾಣದಲ್ಲಿ ಭತ್ತ ನಾಟಿ ಮಾಡಲಾಗಿತ್ತು.

    ತುಂಗಭದ್ರಾ ಎಡದಂಡೆ ನಾಲೆಗೆ ಏ.10 ರವರೆಗೆ ನೀರು ಹರಿದುಬಂದಿದ್ದರಿಂದ ನಾಲೆಯ ಕೊನೆಯ ಭಾಗದಲ್ಲಿ ಕೆಲ ಪ್ರಮಾಣ ಹೊರತುಪಡಿಸಿದರೆ ಸಂಪೂರ್ಣ ಉತ್ತಮ ಫಸಲು ಬಂದಿದೆ.

    ಇದನ್ನೂ ಓದಿ: ರಸಗೊಬ್ಬರ ದರ ಏರಿಕೆ ಬರೆ: ವರ್ಷಾರಂಭದಲ್ಲೇ ಏರಿದ ಬೆಲೆ ಇಳಿಯದೇ ರೈತರಿಗೆ ತೊಂದರೆ; ಬೆಂಬಲ ಬೆಲೆಯೂ ಹೆಚ್ಚಾಗದೆ ನಿರಾಸೆ

    ತಾಲೂಕಿನಲ್ಲಿ ಈಗಾಗಲೇ ಶೇ.50 ಪ್ರಮಾಣದಷ್ಟು ಭತ್ತ ಕಟಾವು ಆಗಿದೆ. ಭತ್ತ ಕಟಾವು ಆಗುತ್ತಿದ್ದಂತೆ ಫಸಲಿಗೆ ಉತ್ತಮ ಬೆಲೆ ಬಂದಿರುವುದು ಕೂಡ ರೈತರಿಗೆ ಅನುಕೂಲವಾಗಿದೆ. ಬೇಸಿಗೆ ಬೆಳೆಗೆ ಸಾಮಾನ್ಯವಾಗಿ ಭತ್ತಕ್ಕೆ ಕೀಟಬಾಧೆ ಇರುವುದಿಲ್ಲ ಇದರಿಂದಾಗಿ ಹೆಚ್ಚಿನ ಪ್ರಮಾಣದ ಕ್ರಿಮಿನಾಶಕ ಕೂಡ ಸಿಂಪಡಣೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಇಳುವರಿ ಚೆನ್ನಾಗಿ ಬಂದಿದೆ.

    ಉತ್ತಮ ತಳಿಗೆ 75 ಕೆಜಿ ಚೀಲಕ್ಕೆ 1750ರಿಂದ 1850 ರೂ.

    2022-23 ನೇ ಸಾಲಿನಲ್ಲಿ ಭತ್ತಕ್ಕೆ ಕ್ವಿಂಟಾಲ್‌ಗೆ 2040 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಈ ಪ್ರಕಾರ 75 ಕೆಜಿ ಭತ್ತಕ್ಕೆ 1510 ರೂ. ಸಿಗಲಿದೆ. ಪ್ರಸ್ತುತ ಸಿಂಧನೂರಿನ ಮಾರುಕಟ್ಟೆಯಲ್ಲಿ ಸದ್ಯ ಆರ್‌ಎನ್‌ಆರ್ ತಳಿಯ ಭತ್ತದ 75 ಕೆಜಿ ಚೀಲಕ್ಕೆ 1750ರಿಂದ 1850 ರೂ. ಇದೆ.

    ಇದನ್ನೂ ಓದಿ: ವೈವಿಧ್ಯಮಯ ತಳಿ ಬೀಜಗಳನ್ನು ಸಂರಕ್ಷಿಸಿ

    ಇನ್ನು ಕಾವೇರಿ ಸೋನಾ ತಳಿಗೆ 1600ರಿಂದ 1700 ರೂ. ವರೆಗೆ ಭತ್ತ ಮಾರಾಟವಾಗುತ್ತಿದೆ. ಮುಂಗಾರು ಹಂಗಾಮಿಗಿಂತಲೂ ಉತ್ತಮ ಬೆಲೆ ಸಿಗುತ್ತಿದೆ. ಇನ್ನು ಕೆಲ ದಿನಗಳಲ್ಲಿ ಆರ್‌ಎನ್‌ಆರ್ ತಳಿಯ ಭತ್ತಕ್ಕೆ 75 ಕೆಜಿಗೆ 2 ಸಾವಿರ ರೂ. ಕಾವೇರಿ ತಳಿ 1800 ರೂ.ವರೆಗೆ ಏರಿಕೆಯಾಗುವ ಸಾಧ್ಯತೆಗಳಿವೆ.

    ಭತ್ತಕ್ಕೆ ಉತ್ತಮ ದರ -ಸರ್ಕಾರದ ಬೆಂಬಲ ಬೆಲೆ ಮೀರಿದ ಬೆಲೆ

    ಸಂಗ್ರಹಕ್ಕೆ ಮುಂದಾಗದ ವ್ಯಾಪಾರಿಗಳು

    ಈ ಹಿಂದಿನ ವರ್ಷಗಳಲ್ಲಿ ವ್ಯಾಪಾರಿಗಳು ರೈತರಿಂದ ಭತ್ತ ಖರೀದಿಸಿ, ಸಂಗ್ರಹ ಮಾಡಿಕೊಂಡು ಹೆಚ್ಚಿನ ಬೆಲೆ ಬಂದಾಗ ಮಾರಿಕೊಳ್ಳುತ್ತಿದ್ದರು. ಇದರಿಂದ ರೈತರಿಗೆ ಲಾಭವಾಗುವುದಕ್ಕಿಂತ ವ್ಯಾಪಾರಿಗಳಿಗೆ ಒಂದು ಚೀಲಕ್ಕೆ ಕನಿಷ್ಠವೆಂದರೂ 250ರಿಂದ 300 ರೂ.ವರೆಗೆ ಲಾಭ ಸಿಗುತ್ತಿತ್ತು.

    ಹೊರ ರಾಜ್ಯಗಳಿಗೆ ಮಾರಾಟ

    ಬಹುತೇಕ ಸಂದರ್ಭಗಳಲ್ಲಿ ರೈತರಿಗೆ ನಷ್ಟವಾಗುತ್ತಿತ್ತು. ಸಾಲ ಮಾಡಿಕೊಂಡು ಬೆಳೆ ಬೆಳೆಯುವ ರೈತರು ಫಸಲು ಬಂದ ಕೂಡಲೇ ಮಾರಿಕೊಳ್ಳುತ್ತಿದ್ದರು. ಇದೀಗ ಉತ್ತಮ ಬೆಲೆ ಇರುವುದರಿಂದ ರೈತರಿಗೇ ನೇರವಾಗಿ ಲಾಭವಾಗುತ್ತಿದೆ. ದರ ಹೆಚ್ಚಾಗಿರುವುದರಿಂದ ವ್ಯಾಪಾರಿಗಳು ಕೂಡ ಫಸಲು ಖರೀದಿ ಮಾಡಿ ಸಂಗ್ರಹ ಮಾಡಿಕೊಳ್ಳದೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಾರೆ.

    ಭತ್ತಕ್ಕೆ ಉತ್ತಮ ದರ -ಸರ್ಕಾರದ ಬೆಂಬಲ ಬೆಲೆ ಮೀರಿದ ಬೆಲೆ

    ಸಿಂಧನೂರು ಮಾರುಕಟ್ಟೆಯಲ್ಲಿ ಭತ್ತಕ್ಕೆ ಹಿಂದಿನ ವರ್ಷಗಳಿಗಿಂತ ಈ ಬಾರಿ ಉತ್ತಮ ಬೆಲೆ ಇದೆ. ಸರ್ಕಾರದ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ದರಕ್ಕೆ ಭತ್ತ ಮಾರಾಟವಾಗುತ್ತಿದ್ದು, ರೈತರಿಗೆ ಅನುಕೂಲವಾಗಿದೆ. ರೈತರು ಚಾಣಾಕ್ಷತನದಿಂದ ಭತ್ತದ ವ್ಯಾಪಾರ ಮಾಡಬೇಕು.
    | ಅಲ್ಲಾಭಕ್ಷಿ,
    ಕಾರ್ಯದರ್ಶಿ, ಎಪಿಎಂಸಿ, ಸಿಂಧನೂರು

    ಭತ್ತಕ್ಕೆ ಉತ್ತಮ ದರ -ಸರ್ಕಾರದ ಬೆಂಬಲ ಬೆಲೆ ಮೀರಿದ ಬೆಲೆ

    ನಾವು ನಿರೀಕ್ಷೆ ಮಾಡಿದಂತೆ ಭತ್ತದ ಇಳುವರಿ ಬಂದಿದೆ. ಮಾರುಕಟ್ಟೆಯಲ್ಲೂ ಫಲಸಿಗೆ ಉತ್ತಮ ಬೆಲೆ ಇದೆ. ಇನ್ನಷ್ಟು ಬೆಲೆ ಏರಿಕೆ ಆಗಲಿದೆ ಎಂಬ ಚರ್ಚೆ ನಡೆದಿದೆ. ಬೆಲೆ ಹೆಚ್ಚಿದಷ್ಟು ನಮಗೆ ಅನುಕೂಲವಾಗಲಿದೆ.
    | ಚನ್ನಾರೆಡ್ಡಿ,
    ರೈತ, ಸಿಂಧನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts