More

    ‘ಕ್ಯಾಪ್ಚರ್’ ಸಿನಿಮಾದಲ್ಲಿ ಪ್ರಿಯಾಂಕಾ ಮಗಳಾಗಿ ಮಾನ್ವಿತಾ ನಟನೆ

    ಟಗರು ಸಿನಿಮಾದ ಮೆಂಟಲ್​​ ಹೋಜಾವ್​ ಸಾಂಗ್​​​​ ಬೆಡಗಿ ಸಿನಿ ಎರಂಗಕ್ಕೆ ಕೊಂಚ ಬ್ರೇಕ್​ ಕೊಟ್ಟಿದ್ದ ಮಾನ್ವಿತಾ ಇದೀಗ ಮತ್ತೆ ತೆರೆ ಮೇಲೆ ಬರೋಕೆ ಸಜ್ಜಾಗಿದ್ದಾರೆ. ಕೆಂಡಸಂಪಿಗೆ ನಟಿ ಇದೀಗ ಮತ್ತೊಂದು ವಿಭಿನ್ನ ಪಾತ್ರ ಅಂದ್ರೆ ಪ್ರಿಯಾಂಕಾ ಉಪೇಂದ್ರ ಅವರ ಮಗಳಾಗಿ ನಟಿಸೋಕೆ ಮುಂದಾಗಿದ್ದಾರೆ.
    ಕ್ಯಾಪ್ಚರ್ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಪ್ರಿಯಾಂಕಾ ಮಗಳ ಪಾತ್ರದಲ್ಲಿ ಮಾನ್ವಿತಾ ನಟಿಸಿದ್ದಾರೆ.

    'ಕ್ಯಾಪ್ಚರ್' ಸಿನಿಮಾದಲ್ಲಿ ಪ್ರಿಯಾಂಕಾ ಮಗಳಾಗಿ ಮಾನ್ವಿತಾ ನಟನೆ


    ಮಾನ್ವಿತಾ ಈ ಸಿನಿಮಾದಲ್ಲಿ ಸ್ನೇಹಾ ಎನ್ನುವ ಪಾತ್ರದಲ್ಲಿ ನಟಿಸಿದ್ದು, ಮೊದಲ ಬಾರಿಗೆ ಹಾರರ್ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ.

    'ಕ್ಯಾಪ್ಚರ್' ಸಿನಿಮಾದಲ್ಲಿ ಪ್ರಿಯಾಂಕಾ ಮಗಳಾಗಿ ಮಾನ್ವಿತಾ ನಟನೆ


    ಈಗಾಗಲೇ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಅವರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಇದೀಗ ಮಾನ್ವಿತಾ ಕೂಡ ನಟಿಸುತ್ತಿದ್ದಾರೆ ಎನ್ನುವ ವಿಚಾರ ಕ್ಯಾಪ್ಚರ್ ಮೇಲಿನ ಕುತೂಹಲವನ್ನ ಮತ್ತಷ್ಟು ಹೆಚ್ಚಿಸಿದೆ.

    'ಕ್ಯಾಪ್ಚರ್' ಸಿನಿಮಾದಲ್ಲಿ ಪ್ರಿಯಾಂಕಾ ಮಗಳಾಗಿ ಮಾನ್ವಿತಾ ನಟನೆ


    ಕೊನೆಯದಾಗಿ ಮಾನ್ವಿತಾ ‘ಶಿವ 143’ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ವರ್ಷದ ಬಳಿಕ ತೆರೆಮೇಲೆ ಬರುತ್ತಿದ್ದಾರೆ. ಪ್ಚರ್ ಸಿನಿಮಾಗೆ ರವಿರಾಜ್ ಅವರು ತಮ್ಮ ಶ್ರಿ ದುರ್ಗಪರಮೇಶ್ವರಿ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಈ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.

    'ಕ್ಯಾಪ್ಚರ್' ಸಿನಿಮಾದಲ್ಲಿ ಪ್ರಿಯಾಂಕಾ ಮಗಳಾಗಿ ಮಾನ್ವಿತಾ ನಟನೆ


    ಸಿನಿಮಾ ಕುರಿತಂತೆ ಮಾನ್ವಿತಾ ಹೇಳಿದ್ದೇನೆ?
    ನಟಿ ಮಾನ್ವಿತಾ ಕಾಮತ್, ‘ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸಿದ್ದೇನೆ. ಮೊದಲ ತುಂಬಾ ಭಯವಿತ್ತು. ಆದರೆ ಪಾತ್ರ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. 15 ದಿನಗಳು ಗೋವಾದಲ್ಲಿ ಶೂಟಿಂಗ್ ಮಾಡಿದ್ವಿ, ಪ್ರಿಯಾಂಕಾ ಮೇಡಮ್ ಜೊತೆ ಕೆಲಸ ಮಾಡಿದ್ದು ಖಷಿ ತಂದಿದೆ. ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ತುಂಬಾ ದೃಷ್ಟಿ ಆಗಿತ್ತು ಅನಿಸುತ್ತೆ. ಜ್ವರ ಕೂಡಡ ಬಂದಿತ್ತು. ದೃಷ್ಟಿ ತೆಗಿಸಿಕೊಂಡ ಮೇಲೆ ಸರಿ ಆಯಿತು’ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts