More

    ಯುವಕರು ಪ್ರತಿಭಾನ್ವಿತ ಕ್ರೀಡಾಪಟುಗಳಾಗಿ ಹೊರಹೊಮ್ಮಲು ಸಲಹೆ

    ಮಾನ್ವಿ: ಕ್ರೀಡಾ ಚಟುವಟಿಕೆಗಳಲ್ಲಿ ಯುವಕರು ಭಾಗವಹಿಸುವ ಮೂಲಕ ದೇಶಕ್ಕೆ ಕೀರ್ತಿ ತರುವಂತಹ ಪ್ರತಿಭಾನ್ವಿತ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ಒಳಾಂಗಣ ಕ್ರೀಡಾಂಗಣದ ವ್ಯವಸ್ಥಾಪಕ ಡಾ.ಮಹೆಬೂಬ್ ಮದ್ಲಾಪುರ ಹೇಳಿದರು.

    ಪಟ್ಟಣದ ಒಳಾಂಗಣ ಕ್ರೀಡಾಂಗಣದಲ್ಲಿ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಜನ್ಮ ದಿನದ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಯಚೂರು, ಒಳಾಂಗಣ ಕ್ರೀಡಾಂಗಣದಿಂದ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಸಹಕಾರಿಯಾಗಿದ್ದು ಕ್ರೀಡೆಗಳಲ್ಲಿ ಅತ್ಯಂತ ಕಠಿಣ ಪರಿಶ್ರಮವಹಿಸಿ ಪಾಲ್ಗೂಂಡಾಗ ಮಾತ್ರ ದೇಶಕ್ಕೆ ಪದಕಗಳನ್ನು ತರಲು ಸಾಧ್ಯ ಎಂದರು.

    ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಅಭಿಷೇಕ್, ಡಾ.ಶಂಕರ್(ಪ್ರಥಮ), ಜಿಲಾನಿ ತಿರಂಗಾ, ಲಲಿತ್‌ಸಿಂಗ್ ರಜಪೂತ್ (ದ್ವಿತೀಯ) ಬಹುಮಾನ ಪಡೆದರು. ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿಗೌಡ ಭೋಗಾವತಿ, ಪುರಸಭೆ ಸದಸ್ಯ ಶರಣಪ್ಪ ಮೇದಾ, ದೈಹಿಕ ಶಿಕ್ಷಣಾಧಿಕಾರಿ ಕೇಶವ್, ಮುಖ್ಯಶಿಕ್ಷಕ ವಲಿಬಾಬು, ಪಣೀಂದ್ರೆರೆಡ್ಡಿ,, ಕ್ರೀಡಾಪಟುಗಳಾದ ಬಸವರಾಜ್ ಮಿಲ್, ಪೀರ್‌ಬಾಷಾ, ಪ್ರದೀಪ್‌ಕುಮಾರ, ರಮೇಶ ಉಚ್ಚಣ್ಣನವರ್, ಮಲ್ಲಿಕಾರ್ಜುನ ಮೇಟಿ ವಕೀಲ, ವಿಜಯಕುಮಾರ, ಸಿ.ಡಿ.ಅಶೋಕ, ಶ್ರೀಧರಗೌಡ, ಪ್ರಸಾದ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts