More

    ರಜತ ರಥಕ್ಕೆ ಅದ್ದೂರಿ ಸ್ವಾಗತ

    ಮಾನ್ವಿ:ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುಬುಧೇಂದ್ರ ತೀರ್ಥರ ಸಂಕಲ್ಪದಂತೆ ಪಟ್ಟಣದ ಜಗನ್ನಾಥ ದಾಸರ ಸನ್ನಿಧಿಗೆ ರಜತ ರಥ ಹಾಗೂ ರಜತ ಪಲ್ಲಕ್ಕಿಯನ್ನು ಮಂಗಳವಾರ ಅರ್ಪಿಸಲಾಯಿತು.

    ಮಂತ್ರಾಲಯದ ಮಠದ ಶಿಲ್ಪಿ ಪವನ್ ಕುಮಾರ, ಮಾನ್ವಿಯ ಭಂಡಾರಿ ಅಮರಯ ್ಯ ಶೆಟ್ಟಿ ನೀಡಿರುವ ಕಟ್ಟಿಗೆ ಹಾಗೂ 45 ಕೆಜಿ ಬೆಳ್ಳಿಯ ರಥಕ್ಕೆ ಕವಚವನ್ನು ಆಳವಡಿಸಲಾಗಿದೆ. 14 ಕೆಜಿ ಬೆಳ್ಳಿಯಲ್ಲಿ ಪಲ್ಲಕ್ಕಿಯನ್ನು ನಿರ್ಮಾಣ ಮಾಡಿದ್ದು ಕಳೆದ ಮೂರು ವರ್ಷಗಳಿಂದ ಭಕ್ತರು ರಥಕ್ಕಾಗಿ ನೀಡಿದ 49 ಕೆಜಿ ಬೆಳ್ಳಿಯಲ್ಲಿ 32 ಲಕ್ಷ ರೂ. ವೆಚ್ಚದಲ್ಲಿ ರಜತ ರಥ ಹಾಗೂ ರಜತ ಪಲ್ಲಕ್ಕಿಯನ್ನು ತಯಾರಿಸಲಾಗಿದೆ.

    ಮಂತ್ರಾಲಯದಿಂದ ತರಲಾದ ರಥ ಹಾಗೂ ಪಲ್ಲಕ್ಕಿಯನ್ನು ಜಗನ್ನಾಥ ದಾಸರ ಸನ್ನಿಧಾನಕ್ಕೆ ಮಠದ ಅರ್ಚಕರು ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಜಗನ್ನಾಥ ದಾಸರ ರಜತ ರಥ ನಿರ್ಮಾಣ ಸಮಿತಿ ನೇತೃತ್ವದಲ್ಲಿ ಮಾ.20ರಂದು ಸುಬುಧೇಂದ್ರ ತೀರ್ಥರಿಂದ ಜಗನ್ನಾಥ ದಾಸರಿಗೆ ರಜತ ರಥ ಹಾಗೂ ರಜತ ಪಲ್ಲಕ್ಕಿ ಸಮರ್ಪಣೆ ಬಳಿಕ ರಥೋತ್ಸವ ನಡೆಯಲಿದೆ. ಎಚ್.ಡಿ.ಕೃಷ್ಣಮೂರ್ತಿ, ಮನ್ಸಾಲಿ ಯಂಕಯ್ಯಶೆಟ್ಟಿ, ದ್ಯಾಸನೂರು ರಾಘವೇಂದ್ರಶೆಟ್ಟಿ, ಮಠದ ವ್ಯವಸ್ಥಾಪಕರಾದ ಶ್ರೀನಿವಾಸಚಾರ್ಯ ಹಾಗೂ ಆರ್ಚಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts