More

    ರೂ.3.32 ಕೋಟಿ ಕ್ರಿಯಾಯೋಜನೆಗೆ ಮಾನ್ವಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ

    ಮಾನ್ವಿ: ತಾಪಂ ಸಭಾಂಗಣದಲ್ಲಿ ಸೋಮವಾರ ಪ್ರಭಾರ ಅಧ್ಯಕ್ಷ ಚನ್ನಬಸವಣ್ಣ ಬೆಟ್ಟದೂರು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆದು, 3.32 ಕೋಟಿ ರೂ.ಅನುದಾನದ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಲಾಯಿತು.

    2020-21ನೇ ಸಾಲಿನ ತಾಪಂ ಯೋಜನೆಗಳ ಪ್ರಗತಿ ಪರಿಶೀಲನೆ ಹಾಗೂ 15 ನೇ ಹಣಕಾಸು, ಮುಖ್ಯಮಂತ್ರಿ ಅಭಿವೃದ್ಧಿ ಅನುದಾನ ಸೇರಿ1.14 ಕೋಟಿ ರೂ. ಮತ್ತು ಮುಖ್ಯಮಂತ್ರಿ ಅಭಿವೃದ್ಧಿ ಅನುದಾನದ 2 ಕೋಟಿ ರೂ., ಅಂಗನವಾಡಿ ಕಾಮಗಾರಿ 10 ಲಕ ರೂ., ಆರೋಗ್ಯ ಇಲಾಖೆ ಔಷಧ ಸರಬರಾಜು 1 ಲಕ್ಷ ರೂ., ಆರೋಗ್ಯ ಇಲಾಖೆ ಕಟ್ಟಡಗಳ ದುರಸ್ತಿ 6.40 ಲಕ್ಷ ರೂ., ವಿಶೇಷ ಘಟಕ ಯೋಜನೆಯಡಿ 1.20 ಲಕ್ಷ ರೂ. ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ದೊರಕಿತು. ಸಿಎಂ ಅಭಿವೃದ್ಧಿ 2 ರೂ. ಕೋಟಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಕುರಿತು ತಾಪಂ ಇಒ ಶರಣಬಸವ ಸಭೆಗೆ ಮಾಹಿತಿ ನೀಡಿದರು.

    ಮುಖ್ಯಮಂತ್ರಿ ಅಭಿವೃದ್ಧಿ ಅನುದಾನದ 2 ಕೋಟಿ ರೂ. ಸರ್ಕಾರದಿಂದ ಸೂಕ್ತ ನಿರ್ದೇಶನ ಬಾರದ ಹಿನ್ನಲೆಯಲ್ಲಿ ಈ ಅನುದಾನವನ್ನು ಮಾನ್ವಿ ತಾಪಂ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕಾ ಅಥವಾ ಸಿರವಾರ, ಮಸ್ಕಿ ತಾಪಂಗೆ ಕಲ್ಪಿಸಬೇಕಾ ಎನ್ನುವುದರ ಕುರಿತು ಸರ್ಕಾರದಿಂದ ನಿರ್ದೇಶನ ಪಡೆದು ಅನುದಾನ ಬಳಕೆಗೆ ಅವಕಾಶ ದೊರಕಿಸಲಾಗುವುದು ಎಂದು ಇಒ ಶರಣಬಸ ಸಭೆಗೆ ತಿಳಿಸಿದರು.

    ಸದಸ್ಯರಾದ ಶಾಂತಪ್ಪ ಕಪಗಲ್, ಮಲ್ಲಪ್ಪಗೌಡ ಖರಾಬದಿನ್ನಿ, ಶರಣಮ್ಮ ಮುದಿಗೌಡ, ಹುಲಿಗೆಮ್ಮ ಕೊಟ್ನೆಕಲ್, ದುರುಗಮ್ಮ ಅಮರಾವತಿ, ಬಸ್ಸಮ್ಮ ಬ್ಯಾಗವಾಟ, ನಾಗಮ್ಮ ಕರಡಿಗುಡ್ಡ, ಶ್ವೇತಾ ಪಾಟೀಲ್, ಇಒ ಶರಣಬಸವ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts