More

    ಆತ್ಮರಕ್ಷಣೆಗೆ ಕರಾಟೆ ಅಗತ್ಯ

    ಮಾನ್ವಿ: ನಮ್ಮ ರಕ್ಷಣೆ ನಮ್ಮಿಂದಲೇ ಆಗಬೇಕು. ಹೀಗಾಗಿ ಕರಾಟೆ ಕಲಿತು ಆತ್ಮ ಮತ್ತು ಮಾನ ರಕ್ಷಣೆ ಕಲೆ ಕರಗತ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ ಹೇಳಿದರು.

    ಪಟ್ಟಣದ ಸಿದ್ದಾರ್ಥ ಕಾಲೇಜಿನಲ್ಲಿ ಭಾನುವಾರ ಸೆಕೈ ಸೀಟೊ ಗೊಜು ರಿಯೋ ಕರಾಟೆ ಆಶೋಷಿಯೇಷನ್‌ನಿಂದ ಬ್ರೂಸ್‌ಲೀ ಜನ್ಮದಿನದಂಗವಾಗಿ ಏರ್ಪಡಿಸಿದ್ದ ಬೆಲ್ಟ್ ಪದವಿ ವಿತರಣೆ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರಾಟೆಯಿಂದ ಏಕಾಗ್ರತೆ, ಶಿಸ್ತುಬದ್ದ ಜೀವನ ಸಾಧ್ಯವಾಗುತ್ತದೆ. ಪಾಲಕರು ತಮ್ಮ ಮಕ್ಕಳನ್ನು ತರಬೇತಿ ಶಿಬಿರಗಳಲ್ಲಿ ಸೇರ್ಪಡೆ ಮಾಡಬೇಕು. ಇದರಿಂದ ಮಕ್ಕಳಲ್ಲಿ ಚಿಂತನಾ ಶಕ್ತಿ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದರು.

    ವಿಶ್ವ ಸಮರ ಕಲೆಗಳ ಒಕ್ಕೂಟದ ಪ್ರಧಾನಕಾರ್ಯದರ್ಶಿ ಸುನೀಲ್‌ಕುಮಾರ, ಪಿ.ತಿಪ್ಪಣ್ಣ ವಕೀಲ ಮಾತನಾಡಿದರು. ಪುರಸಭೆ ಉಪಾಧ್ಯಕ್ಷೆ ಸಂತೋಷಮ್ಮ ಜಯಪ್ರಕಾಶ, ಸಮಾಜ ಕಲ್ಯಾಣಾಧಿಕಾರಿ ರವೀಂದ್ರ ಉಪ್ಪಾರ, ಕರಾಟೆ ಶಿಕ್ಷಕ ಅಬೀಬ್ ಮತವಾಲೆ ಸಾಹೇಬ್, ಮುಖಂಡರಾದ ಜೆ.ಎಚ್.ದೇವರಾಜ್, ಪಿ.ರವಿಕುಮಾರ ವಕೀಲ, ಯಲ್ಲಪ್ಪ ಬಾದರದಿನಿ ವಕೀಲ, ಕರಾಟೆ ತರಬೇತುದಾರ ಎಚ್.ಎನ್.ದೇವರಾಜ್, ಗುಂಡಮ್ಮ ಮೇಟಿ ವಕೀಲರು, ಸುಭಾನ್‌ಬೇಗ್, ಕುಮಾರಸ್ವಾಮಿ ಮೇದಾ, ಶಿಕ್ಷಕ ಶಿವುಕುಮಾರ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts