More

    ಅನ್ಯ ಭಾಷೆಗಳಿಗೆ ರಾಜ್ಯದಲ್ಲಿ ಮನ್ನಣೆ, ಬಿ.ಮಂಜಮ್ಮ ಜೋಗತಿ ಅನಿಸಿಕೆ

    ಮಾನ್ವಿ: ಅನ್ಯ ಭಾಷೆಗಳಿಗೆ ರಾಜ್ಯದಲ್ಲಿ ಮನ್ನಣೆ ಸಿಗುತ್ತಿರುವ ಕಾರಣ ಕನ್ನಡ ಬೆಳೆಯುತ್ತಿಲ್ಲ ಎಂದು ರಾಜ್ಯ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಹೇಳಿದರು.

    ಪಟ್ಟಣದ ಶಾದಿಮಹಲ್‌ನಲ್ಲಿ ಶುಕ್ರವಾರ ಪಯೋನಿಯರ್ಸ್‌ ಸರ್ವಾಭಿವೃದ್ಧಿ ಬಳಗ ಮತ್ತು ನವಸ್ಫೂರ್ತಿ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕನ್ನಡ ರಾಜ್ಯೋತ್ಸವ ಕುರಿತ ಪ್ರಬಂಧ ಇತರ ಸ್ಪರ್ಧೆಗಳ ವಿಜೇತರಿಗೆ ಹಮ್ಮಿಕೊಂಡಿದ್ದ ಬಹುಮಾನ ವಿತರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

    ರಾಜ್ಯೋತ್ಸವ ನ.1ಕ್ಕಷ್ಟೇ ಸೀಮಿತವಾಗದೆ ವರ್ಷವಿಡಿ ಆಚರಣೆಗೊಳ್ಳಬೇಕು. ಕಡ್ಡಾಯವಾಗಿ ಮಕ್ಕಳನ್ನು 1 ರಿಂದ 10ನೇ ತರಗತಿ ವರೆಗೆ ಕನ್ನಡ ಶಾಲೆ ಕಳಿಸುವ ಕೆಲಸವಾಗಬೇಕು. ಇಂಗ್ಲಿಷ ಕಲಿಯುವುದು ತಪ್ಪಲ್ಲ ಆದರೆ, ಕನ್ನಡಕ್ಕೆ ಹೆಚ್ಚಿನ ಗೌರವ ನೀಡಬೇಕು. ಮೊಬೈಲ್ ನಮ್ಮ ತಲೆಯನ್ನು ತಗ್ಗಿಸುತ್ತದೆ. ನಮ್ಮ ಭಾಷೆ, ಸಂಸ್ಕೃತಿಯ ಪುಸ್ತಕಗಳನ್ನು ಓದಿದರೆ ತಲೆ ಎತ್ತಿ ನಡೆಯುವ ಧೈರ್ಯ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಾಜಾ ವೆಂಕಟಪ್ಪನಾಯಕ ಮಾತನಾಡಿ, ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಭಾಷೆಗೆ ಹೆಚ್ಚಿನ ಮಹತ್ವ ನೀಡಬೇಕು. ಸಾಧನೆ ಸಾಧಕರ ಸೊತ್ತೇ ಹೊರತು ಸೋಮಾರಿಗಳದ್ದಲ್ಲ. ನಾವು ಮಾಡುವ ಕೆಲಸದಲ್ಲಿ ನಂಬಿಕೆ ಇರಬೇಕು. ಇದಿದ್ದರೆ ನಾವು ಎತ್ತರಕ್ಕೆ ಬೆಳೆಯುತ್ತೇವೆ. ದೇಶದಲ್ಲಿ ಕನ್ನಡಕ್ಕೆ ವಿಶೇಷ ಸ್ಥಾನವಿದ್ದು, ಉಳಿಸುವ ಕಾರ್ಯವಾಗಬೇಕು ಎಂದರು.

    ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಜನಪದ ಸಾಹಿತಿ ವೆಂಕನಗೌಡ ವಟಗಲ್ ಮಾತನಾಡಿದರು. ಪಯೋನಿಯರ್ಸ್‌ ಸರ್ವಾಭಿವೃದ್ಧಿ ಬಳಗದ ಅಧ್ಯಕ್ಷ ಮೊಹಮ್ಮದ್‌ಬೇಗ್ ಅಧ್ಯಕ್ಷೆ ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತೆ ಕಮಲಮ್ಮ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರನಾಯಕ, ಕೆ.ಇ. ನರಸಿಂಹ, ರಾಜಾ ಶಾಂಸುಂದರ್‌ನಾಯಕ, ರಾಮಲಿಂಗಪ್ಪ, ಪಕ್ಷಿಪ್ರೇಮಿ ಸಲಾವುದ್ದೀನ್, ಅರಣ್ಯಾಧಿಕಾರಿ ರಾಜೇಶನಾಯಕ, ಡಾ. ಅಂಬಿಕಾ, ಡಾ.ಪ್ರಜ್ಞಾ, ಡಾ.ಎಚ್.ಎಂ. ಬಾಬು, ಸಂಗಮೇಶ ಮುದೋಳ, ಶಕೀಲ್‌ಬೇಗ್, ವಿಜಯಲಕ್ಷ್ಮೀ, ನವಸ್ಫೂರ್ತಿ ಬಳಗದ ಅಧ್ಯಕ್ಷ ಸುನೀಲ್ ಹಾಗೂ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts