More

    ಪುಣ್ಯ ಕಾರ್ಯಗಳಿಂದ ಘನತೆ ಹೆಚ್ಚಳವಾಗುವುದೆಂದ ಹುಬ್ಬಳಿ ಶಾಂತಾಶ್ರಮ ಮಠದ ಸದ್ಗುರು ಅಭಿನವ ಸಿದ್ಧಾರೂಢ ಸ್ವಾಮೀಜಿ

    ಮಾನ್ವಿ: ನಾವು ಮಾಡುವ ಪುಣ್ಯಕಾರ್ಯಗಳಿಂದ ನಮ್ಮ ಘನತೆ, ವ್ಯಕ್ತಿತ್ವ ಹೆಚ್ಚಾಗುತ್ತದೆೆಂದು ಹುಬ್ಬಳಿ ಶಾಂತಾಶ್ರಮ ಮಠದ ಸದ್ಗುರು ಅಭಿನವ ಸಿದ್ಧಾರೂಢ ಸ್ವಾಮಿಗಳು ಹೇಳಿದರು.

    ತಾಲೂಕಿನ ನೀರಮಾನ್ವಿ ಗ್ರಾಮದ ಸಿದ್ಧರೂಢ ಶ್ರೀಮಠದಲ್ಲಿ ಬುಧವಾರ ಆಯೋಜಿಸಿದ್ದ ಸದ್ಗುರು ಬಸವಾನಂದ 14 ನೇ ಪುಣ್ಯ ಸ್ಮರಣೋತ್ಸವ ಹಾಗೂ ಸದ್ಗುರು ಸಿದ್ಧಲಿಂಗಪ್ಪ ತಾತನವರ ಗುರುವಂದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಮನುಷ್ಯ ಪುಣ್ಯ ಕಾರ್ಯಗಳು ಅಂತಃಕರಣಗಳನ್ನು ಶುದ್ಧ ಮಾಡುತ್ತವೆ. ಸಮಾಜಮುಖಿ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ. ಪುಣ್ಯ ಕಾರ್ಯಗಳಿಂದ ಮುಕ್ತಿ ಸಿಗುತ್ತದೆ. ಅಧ್ಯಾತ್ಮ ಚಿಂತನೆಗಳಿಂದ ಬದುಕಿನಲ್ಲಿ ಬದಲಾವಣೆ ಸಾಧ್ಯ ಎಂದು ಹೇಳಿದರು.

    ಕಲ್ಲೂರು ಶಂಕರಾಚಾರ್ಯ ಮಠದ ರಮಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಪುಣ್ಯದ ಕೆಲಸ ಮಾಡಬೇಕು. ತನು ಮನ ಧನದಿಂದ ಸೇವೆ ಸಲ್ಲಿಸಬೇಕು. ಆದರೆ, ಇಂದು ಪುಣ್ಯದ ಕಾರ್ಯಗಳು ದೂರವಾಗುತ್ತಿವೆ, ದ್ವೇಷ, ಅಸೂಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಬಾಗಲಕೋಟ ಸದ್ಗುರು ಪರಮರಾಮಾರೂಢರಶ್ರೀ, ನವಲಕಲ್ ಶ್ರೀಮಠದ ಅಭಿನವ ಸೋಮನಾಥ ಸ್ವಾಮೀಜಿ, ಹನುಮಂತಪ್ಪ ಶಂಕರಾಚಾರಿ, ಮಟಮಾರಿ ಶಿವಾನಂದ ಮಠ ಜ್ಞಾನಾನಂದಶ್ರೀ ಮಾತನಾಡಿದರು. ನೀರಮಾನ್ವಿ ಸಿದ್ಧಾರೂಢ ಶ್ರೀಮಠದ ಅಭಿನವ ನಿಜಗುಣ ಗುರುಗಳು, ಸದ್ಗುರು ಪಾಲಭಾವಿ ವೀರಯ್ಯಸ್ವಾಮಿ ಶಾಂತಮಲ್ಲ ಕುಟೀರ, ಮಲದಕಲ್ ನಿಜಾನಂದ ಆಶ್ರಮದ ಗುರುಬಸವ ರಾಜಗುರು, ಹನುಮಂತ್ರಾಯ ಶರಣರು, ಕರಿಯಪ್ಪ ಶರಣರು, ಶರಣಬಸವ ಸ್ವಾಮಿ, ಮರಸಣ್ಣ ಗುರುಗಳು ಇತರರಿದ್ದರು.

    ಶ್ರೀಮಠದಲ್ಲಿ ಬೆಳಗ್ಗೆ ವಿಶೇಷ ಪೂಜೆಗಳು ನಂತರ ಧ್ವಜಾರೋಹಣ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts