More

    ನಾಗರಿಕ ಸೇವಾ ನಿಯಮ ಜಾರಿ ಕೈಬಿಡಲು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಒತ್ತಾಯ

    ರಾಯಚೂರು: ನೌಕರರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುವ ಕರ್ನಾಟಕ ನಾಗರಿಕ ಸೇವಾ ನಿಯಮ ಜಾರಿ ಪ್ರಸ್ತಾವ ಕೈಬಿಡುವಂತೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಒತ್ತಾಯಿಸಿದೆ.

    ಈ ಕುರಿತು ಒಕ್ಕೂಟದ ನಿಯೋಗ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರ್‌ಗೆ ಮಂಗಳವಾರ ಮನವಿ ಸಲ್ಲಿಸಿತು. ನಿಯಮದ ಕರಡಿನಲ್ಲಿ ಬ್ರಿಟಿಷ್ ಕಾಲದ ವಸಾಹತು ಮನೋಧೋರಣೆಯ ಅಂಶಗಳಿದ್ದು, ಸಂವಿಧಾನದ ಆಶಯಗಳಿಗೆ ಧಕ್ಕೆ ತರುವಂತಿರುವ ಕಾರಣ ನಿಯಮ ಜಾರಿ ಪ್ರಸ್ತಾವ ಸಂಪೂರ್ಣ ಕೈಬಿಡಬೇಕು ಎಂದು ಒತ್ತಾಯಿಸಿದರು.

    ಕರ್ನಾಟಕ ನಾಗರಿಕ ಸೇವಾ ನಿಯಮ 1966 ಅನ್ನು ಆಧರಿಸಿ ಈವರೆಗೂ ಹಲವಾರು ಸುತ್ತೋಲೆ, ಆದೇಶಗಳ ಮೂಲಕ ನೌಕರರ ನಡತೆ ನಿಯಂತ್ರಿಸಲಾಗುತ್ತಿತ್ತು. ಆದರೆ ಈಗ ಪ್ರಕಟಿಸಿರುವ ಕರಡಿನಲ್ಲಿರುವ ಅಂಶಗಳು ನೌಕರರ ಜತೆಗೆ ಕುಟುಂಬದ ಸದಸ್ಯರ ಹಕ್ಕುತಗಳಿಗೆ ಚ್ಯುತಿ ತರುವಂತಿವೆ.

    ನೌಕರರ ಸೇವಾ ನಡತೆ ನಿಯಮಗಳನ್ನು ಪರಿಷ್ಕರಿಸುವಾಗ ವೈಯಕ್ತಿಕ ಸ್ವಾತಂತ್ರೃ ಮತ್ತು ಮೂಲ ಹಕ್ಕಗುಳಿಗೆ ಚ್ಯುತಿ ತರುವ ಅಂಶಗಳನ್ನು ಸೇರಿಸಿರುವುದು ಆಕ್ಷೇಪಾರ್ಹವಾಗಿದ್ದು, ಕೂಡಲೇ ಅದನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ನಿಯೋಗದಲ್ಲಿ ಒಕ್ಕೂಟದ ಜಿಲ್ಲಾ ಸಂಚಾಲಕ ತಾಯರಾಜ್ ಮರ್ಚೆಟಹಾಳ, ಪದಾಧಿಕಾರಿಗಳಾದ ಆರ್.ನಾಗರಾಜ, ನಾರಾಯಣ, ರಾಮಪ್ಪ ಗಧಾರ, ಸೈಯದ್ ಶಹಾಬುದ್ದೀನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts