More

    ಕೆಳ ಭಾಗದ ಕಾಲುವೆಗೆ ನೀರು ಹರಿಸಲು ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಒತ್ತಾಯ

    ಮಾನ್ವಿ: ತಾಲೂಕಿನ ಹಿರೇಕೊಟ್ನೆಕಲ್ ಕೆಳ ಭಾಗದ 76/6 ಕಾಲುವೆಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಗ್ರೇಡ್-2 ತಹಸೀಲ್ದಾರ್ ಅಬ್ದುಲ್‌ವಾಹಿದ್‌ಗೆ ಶನಿವಾರ ಮನವಿ ಸಲ್ಲಿಸಿತು.

    ಹಿರೇಕೊಟ್ನೆಕಲ್, ಚಿಕ್ಕಕೊಟ್ನೆಕಲ್, ಉಮಳಿಹೊಸೂರು, ಬೋಸಾಯಿಕ್ಯಾಂಪ್, ಚೀಕಲಪರ್ವಿ, ಚೀಕಲಪರ್ವಿ ಕ್ಯಾಂಪ್‌ನ ರೈತರಿಗೆ ಕಾಲುವೆಯಲ್ಲಿ ಮೂರು ಅಡಿ ನೀರು ಹರಿಸಬೇಕು. ಎರಡು ಸಾವಿರ ಎಕರೆ ಜಮೀನಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

    ಭರವಸೆ: ರೈತ ಸಂಘದ ಹೋರಾಟಕ್ಕೆ ಮಣಿದ ನೀರಾವರಿ ಅಧಿಕಾರಿಗಳು ಆ.21 ರಿಂದ 27ರವರಗೆ ಕಾಲುವೆಗೆ 2.8 ಅಡಿ ನೀರು ಹರಿಸುವುದಾಗಿ ಲಿಖಿತ ಭರವಸೆ ನೀಡಿದ ಬಳಿಕ ಹೋರಾಟ ಹಿಂಪಡೆಯಲಾಯಿತು. ನೀರಾವರಿ ಇಲಾಖೆ ಅಧಿಕಾರಿ ಶಾಂತರಾಜು, ಕಂದಾಯ ನಿರೀಕ್ಷಕ ಸತೀಶ ಇದ್ದರು. ಮುಖಂಡರಾದ ಶಿವಪ್ಪಗೌಡ ಮಾಲಿ ಪಾಟೀಲ್, ಶಂಭುಲಿಂಗನಗೌಡ, ರೆಡ್ಡೆಪ್ಪಗೌಡ ಭೋಗಾವತಿ, ತಿಮ್ಮಣ್ಣ ಭೋವಿ, ಉದ್ದಾನಪ್ಪ ಗೌಡ, ಶ್ಯಾಮ್‌ಸಿಂಗ್, ಅಚ್ಯುತ್‌ರಾಯ್, ಬಸವರಾಜ ಸಜ್ಜನ್, ಬಸನಗೌಡ, ಹನುಮಂತಗೌಡ, ಸದಾಶಿವಪ್ಪಗೌಡ, ಇತರರಿದ್ದರು.

    ಮನವಿ: ಅನಧಿಕೃತ ಪಂಪ್‌ಸೆಟ್‌ಗಳ ತೆರವು ಮತ್ತು ಅನಧಿಕೃತ ಕೆರೆಗಳನ್ನು ಮುಚ್ಚಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರೈತ ಸಂಘ ಮನವಿ ಸಲ್ಲಿಸಿತು. ರೈತಸಂಘ ತಾಲೂಕು ಅಧ್ಯಕ್ಷ ಹನುಮೇಶನಾಯಕ ಕೊಟ್ನೆಕಲ್, ಯುವ ಘಟಕ ಅಧ್ಯಕ್ಷ ರಮೇಶ ಉಪ್ಪಾರ, ಉಪಾಧ್ಯಕ್ಷ ದಾವೂದ್, ರಾಮಲಿಂಗನಾಯಕ, ಬಸ್ಸಪ್ಪನಾಯಕ, ದ್ಯಾವಣ್ಣನಾಯಕ, ಸೂರತ್‌ಸಿಂಗ್, ವಿಜಯನಾಯಕ, ಜಯರಾಜ್ ಕೊಡ್ಲಿ, ಮೌನೇಶನಾಯಕ, ಶ್ಯಾಂಸಿಂಗ್, ವಸಂತ ಕೊಟ್ನೆಕಲ್, ಮಂಜುನಾಥ, ವಿರೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts