More

    ಪೌರಕಾರ್ಮಿಕರಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶ್ರೀ

    ಮಾನ್ವಿ: ಪಟ್ಟಣದ ಸ್ವಚ್ಛತೆ ಸದಾ ಶ್ರಮಿಸುವ ಪೌರಕಾರ್ಮಿಕರಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶ್ರೀಗಳು ಹೇಳಿದರು.

    ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚರಂಡಿ, ರಸ್ತೆಗಳ ಸ್ವಚ್ಛತೆ, ಕಸ ವಿಲೇವಾರಿ ಸೇರಿದಂತೆ ಇತರ ಕೆಲಸಗಳನ್ನು ಮಾಡುತ್ತಿರುವ ಪೌರಕಾರ್ಮಿಕರು ಮಳೆ, ಗಾಳಿ, ಚಳಿ ಎನ್ನದೆ ನಿತ್ಯಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾವು ಕೂಡ ಮನೆಯಲ್ಲಿನ ಕಸವನ್ನು ರಸ್ತೆಯ ಮೇಲೆ ಬಿಸಾಡುವ ಬದಲು ಪುರಸಭೆ ರಸ್ತೆ ಬದಿ ನಿಗದಿಪಡಿಸಿದ ಸ್ಥಳಗಳಲ್ಲಿ ಹಾಕಿದರೆ ಕಾರ್ಮಿಕರಿಗೆ ಸ್ವಲ್ಪ ಶ್ರಮ ಕಡಿಮೆಯಾಗುತ್ತದೆ ಎಂದರು.

    ಪುರಸಭೆ ಸಿಒ ಜಗದೀಶ ಭಂಡಾರಿ ಮಾತನಾಡಿ, ಸಾರ್ವಜನಿಕರು, ವ್ಯಾಪಾರಸ್ಥರು ಕಸದ ವಾಹನ ಬಂದಾಗ ಸಿಬ್ಬಂದಿಗೆ ಕೊಟ್ಟರೆ ಒಳಿತು. ಇಲ್ಲವೆ ಪುರಸಭೆ ವಾಹನ ಬಂದಾಗ ಹಾಕಬೇಕು ಎಂದರು.

    ಪುರಸಭೆ ಅಧ್ಯಕ್ಷೆ ಸುಫೀಯಾಬೇಗಂ ಅಧ್ಯಕ್ಷೆತೆ ವಹಿಸಿದ್ದರು, ಉಪಾಧ್ಯಕ್ಷ ಕೆ.ಸುಖಮುನಿ, ನೈರ್ಮಲ್ಯ ಅಧಿಕಾರಿ ಹಾಗೂ ಪೌರಸೇವಾ ಸಂಘದ ತಾಲೂಕು ಅಧ್ಯಕ್ಷ ಹಂಪಯ್ಯ, ಸಂಘದ ಪದಾಧಿಕಾರಿಗಳಾದ ಹುಸೇನ್‌ಸಾಬ್ ಬಾಗಲವಾಡ, ಈರಣ್ಣ, ವೆಂಕಟೇಶ ನಾಯಕ, ಸೈಯ್ಯದ್ ಸೂಫೀ, ಸೂರ್ಯಕಾಂತ, ನಾಗರಾಜ, ಈರಣ್ಣ ನಾಯಕ, ಆನಂದಮ್ಮ, ವೆಂಕಟೇಶ ಇತರರಿದ್ದರು.

    ಬಹುಮಾನ: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕರೊನಾ ವಾರಿಯರ್‌ಗಳನ್ನೂ ಇದೇ ಸಂದರ್ಭ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts