More

    ಮನಸಿನ ಸಮತೋಲನಕ್ಕೆ ಶರಣರ ಹಿತನುಡಿ ಅವಶ್ಯ

    ಅಭಿನವ ಮಹಾಂತ ಸ್ವಾಮೀಜಿ ಅನಿಸಿಕೆ ಚೀಕಲಪರ್ವಿಯಲ್ಲಿ ಧರ್ಮಸಭೆ

    ಮಾನ್ವಿ: ಶರಣರ ವಚನ ಸಾಹಿತ್ಯ ಅಲಿಸಿದಾಗ ಮನಸು ಏಕಾಗ್ರತೆ ಹೊಂದಲು ಸಾಧ್ಯ ಎಂದು ಹಾಲ್ವಿಯ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ಚೀಕಲಪರ್ವಿ ಗ್ರಾಮದ ರುದ್ರಮುನೀಶ್ವರ ಮಠದ ರುದ್ರಮುನೀಶ್ವರ ಶಿವಯೋಗಿಗಳ 94 ನೇ ಜಾತ್ರಾ ಮಹೋತ್ಸವ ಅಂಗವಾಗಿ ಮಠದಲ್ಲಿ ಶನಿವಾರ ಆಯೋಜಿಸಿದ್ದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು. ಕಷ್ಟಗಳೂ ಇದ್ದಾಗ ಜೀವನದ ಮೌಲ್ಯ ನಮಗೆ ತಿಳಿಯುತ್ತದೆ. ಹಲವಾರು ವಿಷಯಗಳನ್ನು ಸಂಗ್ರಹಿಸಿ, ಒಂದಿಷ್ಟು ಬುದ್ದಿವಂತಿಕೆ ಸೇರಿಸಿ ಅನುಭವ, ಸೃಜನಶೀಲತೆ, ಸಾಮಾನ್ಯಜ್ಞಾನ, ಉತ್ಸಾಹದೊಂದಿಗೆ ನಾಳಿನ ಬದುಕು ನಮ್ಮದು ಎನ್ನುವ ಭರವಸೆ ಹಾಗೂ ನಂಬಿಕೆಯನ್ನು ಹೊಂದಿದಾಗ ಜೀವನ ಅರ್ಥಪೂರ್ಣವಾಗಲು ಸಾಧ್ಯ ಎಂದು ಹೇಳಿದರು.

    ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಚೀಕಲಪರ್ವಿಯ ಸದಾಶಿವ ಸ್ವಾಮೀಜಿ, ಬಳಗಾನೂರು ಮರಿಶಿವಯೋಗಿಗಳ ಮಠದ ಸಿದ್ದಬಸವ ಸ್ವಾಮೀಜಿ, ಯದ್ದಲದೊಡ್ಡಿಯ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ, ಅರಳಹಳ್ಳಿಯ ಶರಣಬಸವ ದೇವರು, ಮೈಸೂರಿನ ನಿರಂಜನ ದೇವರು, ಶಂಕರಯ್ಯಸ್ವಾಮಿ ಸುವರ್ಣಗಿರಿಮಠ, ಎ.ಬಿ.ಉಪ್ಪಳಮಠ, ಕಿಡಿಗಣಯ್ಯಸ್ವಾಮಿ, ಪ್ರಮುಖರಾದ ತಿಮ್ಮರೆಡ್ಡಿ ಭೋಗಾವತಿ, ಆರ್.ತಿಮಯ್ಯಶೆಟ್ಟಿ, ಈರಪ್ಪಗೌಡ ಶಿವಪೂಜಿ, ವೀರನಗೌಡ, ಚನ್ನಬಸವನಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts