More

    ಮಂತ್ರಿಮಾಲ್​ ತೆರಿಗೆ ಪ್ರಕರಣಕ್ಕೆ ಟ್ವಿಸ್ಟ್​! ವಶಕ್ಕೆ ಪಡೆದ ವಸ್ತುಗಳನ್ನು ವಾಪಸ್​ ಮಾಡುತ್ತಿದ್ದಾರೆ ಬಿಬಿಎಂಪಿ ಅಧಿಕಾರಿಗಳು….

    ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟದೆ ಕಳ್ಳಾಟ ಆಡುತ್ತಿರುವ ಮಂತ್ರಿ ಮಾಲ್​ಗೆ ಬಿಬಿಎಂಪಿ ಶಾಕ್​ ನೀಡಿದೆ. ಮಂತ್ರಿ ಮಾಲ್​​ನ ಚರಾಸ್ತಿಗಳನ್ನು ಬಿಬಿಎಂಪಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು.

    ಸುಮಾರು 43 ಕೋಟಿ ರೂ. ತೆರಿಗೆಯನ್ನು ಹಲವು ವರ್ಷಗಳವರೆಗೆ ಬಿಬಿಎಂಪಿ ಬಾಕಿ ಉಳಿಸಿಕೊಂಡಿತ್ತು. ಈ‌ ಹಿಂದೆ ಎರಡು ಬಾರಿ ಮಂತ್ರಿಮಾಲ್‌ಗೆ ಬಿಬಿಎಂಪಿ ಬೀಗ ಜಡಿದಿತ್ತು. ತೆರಿಗೆ ಕಟ್ಟುವುದಕ್ಕೆ ಸ್ಪಲ್ಪ ಸಮಯ ಬೇಕು ಅಂತ ಮಂತ್ರಿ ಮಾಲ್​ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದಕ್ಕೆ ಕಾಲಾವಕಾಶವನ್ನೂ ನೀಡಲಾಗಿತ್ತು. ಇಷ್ಟಾದರೂ ಬುದ್ಧಿ ಕಲಿಯದೇ ತೆರಿಗೆ ಪಾವತಿಸದ ಮಂತ್ರಿಮಾಲ್​ ಮೇಲೆ ಇಂದು ಬೆಳಗ್ಗೆ ಪಾಲಿಕೆ ಅಧಿಕಾರಿಗಳು ಮತ್ತೆ ದಾಳಿ ಮಾಡಿ, ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.‘

    ಇದನ್ನೂ ಓದಿ: ತೆರಿಗೆ ಕಟ್ಟದೆ ಕಳ್ಳಾಟ ಆಡುತ್ತಿದ್ದ ಮಂತ್ರಿ ಮಾಲ್​ಗೆ ಬಿಬಿಎಂಪಿ ಶಾಕ್​: ಚರಾಸ್ತಿ ಮುಟ್ಟುಗೋಲು

    ಕಚೇರಿಯಲ್ಲಿರುವ ಚೇರ್, ಜೆರಾಕ್ಸ್ ಮೆಶಿನ್, ಕಂಪ್ಯೂಟರ್, ಲ್ಯಾಪ್‌ಟಾಪ್ ಹಾಗೂ ಮೀಟಿಂಗ್ ಟೇಬಲ್ಸ್​ಗಳನ್ನು ವಶಕ್ಕೆ ಪಡೆದಿರುವ ಬಿಬಿಎಂಪಿ ಸಿಬ್ಬಂದಿ ಲೆಕ್ಕ ಮಾಡುತ್ತಿದ್ದಾರೆ. ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಯೋಗೇಶ್ ನೇತೃತ್ವದಲ್ಲಿ ಸುಮಾರು 50 ಮಾರ್ಷಲ್​​ಗಳು, ಆರ್​ಒ, ಎಆರ್​ಒ ಹಾಗೂ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆದಿದೆ.

    ಆದರೆ ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು ಇದೀಗ ಬಿಬಿಎಂಪಿ ಅಧಿಕಾರಿಗಳು ವಶಕ್ಕೆ ಪಡೆದಿರುವ ವಸ್ತುಗಳನ್ನು ಹಿಂತಿರುಗಿಸುತ್ತಿದೆ. ಮಂತ್ರಿಮಾಲ್​ನ ಕಳ್ಳಾಟಕ್ಜೆ ಬಿಬಿಎಂಪಿ ಮಣಿದಿದ್ದು ಇಷ್ಟು ಹೊತ್ತು ಸೀಜ್ ಮಾಡಿದ ವಸ್ತುಗಳನ್ನ ಮತ್ತೆ ವಾಪಸ್ ಮಾಡುತ್ತಿದ್ದಾರೆ.

    ಕಳೆದ ಆರು ವರ್ಷದಿಂದ 42 ಕೋಟಿ ತೆರಿಗೆ ಬಾಕಿ ಅಂತ ನೋಟೀಸ್ ಕಳಿಸಿದ್ದರೂ ಮಂತ್ರಿಮಾಲ್​ ಕಡೆಯಿಂದ ಉತ್ತರ ಇರಲಿಲ್ಲ. ಈಗ ತೆರಿಗೆಯೂ ಸಿಕ್ಕಿಲ್ಲ, ವಸೂಲಿ ಮಾಡಿದ ವಸ್ತುಗಳೂ ಇಲ್ಲ ಎಂಬಂತಾಗಿದೆ.

    ಆಗಿದ್ದೇನು?
    ಮಂತ್ರಿಮಾಲ್ ಚರಾಸ್ತಿ ಗಳನ್ನ ವಶಕ್ಕೆ ಪಡೆಯಲು ಕೋರ್ಟ್​ನಿಂದ ಈ ಹಿಂದೆಯೇ ಸ್ಟೇ ತರಲಾಗಿದೆ. ಮಂತ್ರಿಮಾಲ್, ಸಿಟಿ ಸಿವಿಲ್ ಕೋರ್ಟ್​ನಿಂದ ಸ್ಟೇ ತಂದಿದ್ದು ಈ ಕಾರಣದಿಂದಾಗಿ ವಶಕ್ಕೆ ಪಡೆದ ಚರಾಸ್ತಿಗಳನ್ನ ಮತ್ತೆ ಮಂತ್ರಿಮಾಲ್ ಒಳಗಡೆನೆ ಬಿಬಿಎಂಪಿ ಸಿಬ್ಬಂದಿ ಇಡುತ್ತಿದ್ದಾರೆ.

    ಮಂತ್ರಿಮಾಲ್​ ಕಡೆಯಿಂದ ಫ್ರೆಬ್ರವರಿ ೦೨ಕ್ಕೆ ಸ್ಟೇ ತರಲಾಗಿದೆ. ಮಂತ್ರಿಮಾಲ್​ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿಗಳು ದಾಳಿ ಮಾಡುವ ವೇಳೆ ಸ್ಟೇ ಕಾಪಿಯನ್ನು ತೋರಿಸಿಲ್ಲ. ಈಗ ಮಂತ್ರಿಮಾಲ್ ಕಡೆಯ ವಕೀಲರು ಸ್ಟೇ ತೋರಿಸಿದ ಬಳಿಕ ಬಿಬಿಎಂಪಿ ಸಿಬ್ಬಂದಿ ಚರಾಸ್ತಿಯನ್ನು ವಾಪಾಸ್ ಇಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts