More

    ಬಸ್ ಸಂಚಾರಕ್ಕೆ ಮಂತರ್‌ಗೌಡ ಚಾಲನೆ


    ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಕುಡಿಗಾಣ ಮತ್ತು ಕೊತ್ನಳ್ಳಿ ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಶಾಸಕ ಡಾ.ಮಂತರ್‌ಗೌಡ ಶುಕ್ರವಾರ ಚಾಲನೆ ನೀಡಿದರು. ಗ್ರಾಮೀಣ ಭಾಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ಈಗ ಈಡೇರಿದ್ದು, ಜನರು ಸಂಭ್ರಮಿಸಿದರು. ಗ್ರಾಮಸ್ಥರು ಬಸ್‌ಗೆ ಪೂಜೆ ಸಲ್ಲಿಸಿ, ಅದೇ ಬಸ್ಸಿನಲ್ಲಿ ಶಾಸಕರೊಂದಿಗೆ ತಮ್ಮ ಊರಿಗೆ ತೆರಳಿದರು.


    ಪ್ರತಿದಿನ ಬೆಳಗ್ಗೆ 6.30ಕ್ಕೆ ಕುಶಾಲನಗರದಿಂದ ಹೊರಡುವ ಬಸ್, ಸೋಮವಾರಪೇಟೆ ಬಸ್ ನಿಲ್ದಾಣ ತಲುಪಿ 7.40ಕ್ಕೆ ಸೋಮವಾರಪೇಟೆಯಿಂದ ಕೂಡುರಸ್ತೆ, ಯಡೂರು, ಶಾಂತಳ್ಳಿ, ಕನ್ನಳ್ಳಿಕಟ್ಟೆ, ಜಕ್ಕನಳ್ಳಿ, ಕೊತ್ತನಳ್ಳಿ, ಕುಡಿಗಾಣ ಗ್ರಾಮಕ್ಕೆ ತೆರಳಲಿದೆ. ಅದೇ ಮಾರ್ಗವಾಗಿ ವಾಪಸ್ ಸೋಮವಾರಪೇಟೆ ತಲುಪಿ, 10 ಗಂಟೆಗೆ ಸೋಮವಾರಪೇಟೆಯಿಂದ ಹೊರಟು ಕೊವರ್‌ಕೊಲ್ಲಿ, ಕೂಡಿಗೆ , ಕುಶಾಲನಗರ ಮಾರ್ಗವಾಗಿ ಮೈಸೂರು ತಲುಪಲಿದೆ. ಸಂಜೆ 4 ಗಂಟೆಗೆ ಸೋಮವಾರಪೇಟೆಯಿಂದ ಕುಡಿಗಾಣ ತಲುಪಿ, ವಾಪಸ್ ಸಂಜೆ 6 ಗಂಟೆಗೆ ಸೋಮವಾರಪೇಟೆ ತಲುಪಲಿದೆ.


    ಗ್ರಾಮೀಣ ಜನರ ಬೇಡಿಕೆಯನ್ನು ಈಡೇರಿಸಿರುವ ತೃಪ್ತಿ ಇದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಮಾರ್ಗವನ್ನು ಜೋಡಿಸಿದ್ದೇವೆ. ಕುಶಾಲನಗರ ಘಟಕ ಪ್ರಾರಂಭವಾದ ಮೇಲೆ ಇನ್ನು ಹೆಚ್ಚಿನ ಬಸ್‌ಗಳು ಸಂಚಾರ ಮಾಡಲಿವೆ ಎಂದು ಭರವಸೆ ನಿಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts