More

    ಮನ್‌ಮುಲ್, ಜಿಲ್ಲಾ ಸಹಕಾರ ಬ್ಯಾಂಕ್ ರೈತರ ಕಣ್ಣು

    ಪಾಂಡವಪುರ: ಮನ್‌ಮುಲ್ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ರೈತರ ಎರಡು ಕಣ್ಣುಗಳಾಗಿ ಕೆಲಸ ಮಾಡುತ್ತಿವೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಹಾಗೂ ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಅಭಿಪ್ರಾಯಪಟ್ಟರು.

    ತಾಲೂಕಿನ ಕೆರೆತೊಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಡೇರಿ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

    ಮನ್‌ಮುಲ್ ಹಾಗೂ ಜಿಲ್ಲಾ ಸಹಕಾರ ಬ್ಯಾಂಕ್ ಇಲ್ಲವಾಗಿದ್ದರೆ ರೈತರ ಬದುಕು ಹಸನಾಗುತ್ತಿರಲಿಲ್ಲ. ಅಲ್ಲದೆ ನಿತ್ಯ ಹಾಲು ಸರಬರಾಜು ಮಾಡಿದ ಹಾಲಿಗೆ ವಾರಾಂತ್ಯದಲ್ಲಿ ಹಣವನ್ನು ಬಟವಾಡೆ ಮಾಡಲಾಗುತ್ತದೆ. ಇದು ರೈತರ ಜೀವನ ನಿರ್ವಹಣೆಗೆ ಸಹಕಾರಿ ಎಂದರು.

    ಹಾಲಿನ ಗುಣಮಟ್ಟ ಪರೀಕ್ಷೆಗಾಗಿ ಡೇರಿಗಳಲ್ಲಿ 5.25 ಲಕ್ಷ ಮೌಲ್ಯದ ಇ-ಮ್ಯಾಟ್ ಯಂತ್ರ ಬಳಸಲಾಗುತ್ತಿದೆ. ಇದರ ಖರೀದಿಗಾಗಿ ಡೇರಿ ವತಿಯಿಂದ 1.25 ಲಕ್ಷ ಪಡೆಯಲಾಗುತ್ತಿದ್ದು, ಉಳಿಕೆ ಹಣವನ್ನು ಒಕ್ಕೂಟ ಪಾವತಿಸುತ್ತಿದೆ ಎಂದು ಹೇಳಿದರು.

    ಹಿಂದೆ ನಾಟಿ ಹಸು, ಎಮ್ಮೆಗಳನ್ನು ಸಾಕಲಾಗುತ್ತಿತ್ತು. ಈಗ ಅವುಗಳ ಸಂಖ್ಯೆ ಕ್ಷೀಣಿಸಿದೆ. ಬದಲಾಗಿ ಎಚ್‌ಎಫ್, ಜೆರ್ಸಿ ತಳಿಯ ಹಸುಗಳನ್ನು ಸಾಕಾಲಾಗುತ್ತಿದೆ. ಮಾತು ಬಾರದ ರಾಸುಗಳು ತಮ್ಮ ನೋವನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ರಾಸುಗಳನ್ನು ಮಕ್ಕಳಂತೆ ಸಾಕಬೇಕು ಎಂದರು.

    ಕಾರ್ಯಕ್ರಮದಲ್ಲಿ ಡೇರಿ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ಜಗನಾಥಶೆಟ್ಟಿ, ನಿರ್ದೇಶಕರಾದ ಟಿ.ಪಿ.ರಾಮು, ರಾಧಕೃಷ್ಣ,ವಾಸುದೇವ, ತ್ರಿಲೋಚನಾಮೂರ್ತಿ, ಸತೀಶ್, ಲೀಲಾವತಿ, ರತ್ನಮ್ಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ವಿ.ಭಾಸ್ಕರ, ಗ್ರಾಪಂ ಸದಸ್ಯ ಭಾರತಿ ಸುರೇಶ್, ಸುಧಾರಾಣಿ ಮನ್‌ಮುಲ್ ಮಾರ್ಗವಿಸ್ತಕರಾದ ಜಗದೀಶ್, ನಿತಿನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts