More

    ದೆಹಲಿ ಡಿಸಿಎಂ ಮನೀಶ್​ ಸಿಸೋಡಿಯಗೆ ಕರೊನಾ ಜತೆಗೆ ಡೆಂಘೆ ಆಘಾತ

    ನವದೆಹಲಿ: ಮಹಾಮಾರಿ ಕರೊನಾ ಸೋಂಕಿನಿಂದ ನಿನ್ನೆಯಷ್ಟೇ ಆಸ್ಪತ್ರೆಗೆ ದಾಖಲಾಗಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯವರಲ್ಲಿ ಡೆಂಘೆ ಜ್ವರ ಸಹ ಪತ್ತೆಯಾಗಿರುವುದಾಗಿ ವೈದ್ಯಾಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

    ಸೆಪ್ಟೆಂಬರ್​ 14ರಂದು ಕರೊನಾ ಪಾಸಿಟಿವ್ ವರದಿ​ ಬಂದಾಗಿನಿಂದ ದೆಹಲಿಯ ಅಧಿಕೃತ ನಿವಾಸದಲ್ಲಿ ಸ್ವಯಂ ಕ್ವಾರಂಟೈನ್​ನಲ್ಲಿದ್ದರು. ನಿನ್ನೆ ಉಸಿರಾಟದಲ್ಲಿ ತೊಂದರೆ ಮತ್ತು ಜ್ವರ ಕಾಣಿಸಿಕೊಂಡಿದ್ದರಿಂದ ದೆಹಲಿಯ ಲೋಕ ನಾಯಕ್​ ಜಯಪ್ರಕಾಶ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ರಕ್ತದ ಪ್ಲೇಟ್ಲೇಟ್​ಗಳ ಸಂಖ್ಯೆ ಕಡಿಮೆಯಾಗಿದ್ದು, ಡೆಂಘೆ ಜ್ವರವು ಕಾಣಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ.

    ಇದನ್ನೂ ಓದಿ: ಸೈನಿಕರಿಗೆ ಮಾಸ್ಕ್ ಕಳುಹಿಸಿದ ಬಾಲಕಿಗೆ ರಕ್ಷಣಾ ಸಚಿವ ರಾಜನಾಥ್ ಶ್ಲಾಘನೆ

    ತಮಗೆ ಕರೊನಾ ತಗುಲಿರುವುದಾಗಿ ಮತ್ತು ತಮ್ಮ ಸಂಪರ್ಕದಲ್ಲಿದ್ದವರು ಎಚ್ಚರಿಕೆ ವಹಿಸುವಂತೆ ಸೆ. 14ರಂದು ಟ್ವೀಟ್​ ಸಹ ಮಾಡಿದ್ದರು. ಸಣ್ಣ ಜ್ವರದಿಂದ ಬಳಲಿದ ಬಳಿಕ ಕರೊನಾ ಪರೀಕ್ಷೆ ಮಾಡಿಸಿದೆ. ನನಗೆ ಪಾಸಿಟಿವ್​ ಬಂದಿದೆ. ಹೀಗಾಗಿ ಸ್ವಯಂ ಕ್ವಾರಂಟೈನ್​ನಲ್ಲಿದ್ದೇನೆ. ಸದ್ಯದವರೆಗೂ ನನಗೆ ಯಾವುದೇ ತೊಂದರೆ ಇಲ್ಲ. ನಾನು ತುಂಬಾ ಚೆನ್ನಾಗಿದ್ದೇನೆ. ನಿಮ್ಮ ಪ್ರಾರ್ಥನೆಯೊಂದಿಗೆ ಗುಣಮುಖನಾಗಿ ನಿಮ್ಮ ಸೇವೆಗೆ ಮರಳುತ್ತೇನೆಂದು ಟ್ವೀಟ್​ ಮಾಡಿದ್ದರು.

    48 ವರ್ಷದ ಸಿಸೋಡಿಯಾ ಅವರು ತಮ್ಮ ಸಂಪುಟ ಅನೇಕ ಸಚಿವರೊಂದಿಗೆ ಕರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿದ್ದರು. ಅನೇಕ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಅವರು ಕೋವಿಡ್​ ಸೌಲಭ್ಯ ಮತ್ತು ನಿರ್ವಹಣೆಯನ್ನು ಪರಿಶೀಲಿಸುತ್ತಿದ್ದರು. ಇದೀಗ ಕರೊನಾದಿಂದ ಆಸ್ಪತ್ರೆ ದಾಖಲಾಗಿರುವ ಅವರಿಗೆ ಡೆಂಘೆ ಸಹ ಇರುವುದು ಆಮ್​ ಆದ್ಮಿ ಪಕ್ಷದ ನಾಯಕರು ಮತ್ತು ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಯಾವುದೇ ತೊಂದರೆಯಾಗದೇ ಆದಷ್ಟು ಬೇಗ ಗುಣಮುಖರಾಗಿ ಬರಲೆಂದು ಎಲ್ಲರು ಪ್ರಾರ್ಥಿಸುತ್ತಿದ್ದಾರೆ. (ಏಜೆನ್ಸೀಸ್​)

    ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ತೀವ್ರ ಚಿಂತಾಜನಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts