More

    ಮಾವಿಗೆ ಧರ್ಮ ದಂಗಲ್ ಕಂಟಕ ; ಹೆಚ್ಚಿನ ಬೆಲೆ ನಿರೀಕ್ಷೆಯಲ್ಲಿದ್ದ ಬೆಳೆಗಾರ ಕಂಗಾಲು

    ರಾಮನಗರ: ಬೆಳೆ ನಷ್ಟವಾದರೂ ಬಂಪರ್ ಬೆಲೆ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ರಾಜ್ಯದಲ್ಲಿ ಎದ್ದಿರುವ ಧರ್ಮಾಧಾರಿತ ಖರೀದಿ ವಿವಾದ ಆತಂತ ತಂದೊಡ್ಡಿದೆ.

    ಜಿಲ್ಲೆ ಸೇರಿ ರಾಜ್ಯಾದ್ಯಂತ ಸುಮಾರು 1800 ಲಕ್ಷ ಟನ್ ಮಾವು ಪ್ರತಿ ವರ್ಷ ಮಾರುಕಟ್ಟೆಗೆ ಬರುತ್ತದೆ. ಇದರಲ್ಲಿ ರಾಮನಗರ ಮಾವು ಮಾರುಕಟ್ಟೆಗೆ ಮೊದಲು ಪ್ರವೇಶ ಮಾಡುತ್ತಿತ್ತು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಸಲು ಸಂಪೂರ್ಣ ಇಳಿಮುಖವಾಗಿದ್ದು, ಅಷ್ಟಿಷ್ಟು ಇರುವ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಧರ್ಮ ದಂಗಲ್ ಹೊಸ ತಲೆಬೇನೆ ತಂದಿಟ್ಟಿದೆ.

    ರಾಮನಗರದಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಪ್ರತಿವರ್ಷ ಸುಮಾರು 2.5 ಲಕ್ಷ ಟನ್ ಮಾವು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಇದರಿಂದ ವಾರ್ಷಿಕ ಸುಮಾರು 400 ಕೋಟಿ ರೂ. ವ್ಯವಹಾರವೂ ನಡೆಯುತ್ತದೆ. ಆದರೆ ಈ ಬಾರಿ ಇದರ ಪ್ರಮಾಣ ಪಾತಾಳಕ್ಕೆ ಕುಸಿದಿದೆ. ಹವಾಮಾನ ವೈಪರೀತ್ಯದ ಪರಿಣಾಮ ಈಗಾಗಲೇ ಶೇ.80 ಸಲು ನಾಶವಾಗಿದೆ. ಉಳಿಕೆ ಸಲಲ್ಲಿ 50-80 ಸಾವಿರ ಟನ್ ಮಾವು ಮಾರುಕಟ್ಟೆಗೆ ಬರುವ ನಿರೀಕ್ಷೆಯೂ ಇದೆ. ಒಂದೆಡೆ ಇಳುವರಿ ಕುಸಿತ ಕಂಡರೂ ಬೆಲೆ ಏರಿಕೆ ನಿರೀಕ್ಷೆ ಹೆಚ್ಚಿಸಿತ್ತು. ಅಲ್ಲದೆ, ಇದಕ್ಕೆ ಪೂರಕ ಎನ್ನುವಂತೆ ಈಗಾಗಲೇ ಮಾರುಕಟ್ಟೆ ತಲುಪಿರುವ ಗುಣಮಟ್ಟದ ಬಾದಾಮಿ ತಳಿಯ ಕಾಯಿ ಕೆ.ಜಿ.ಗೆ 260 ರೂ. ಆಸುಪಾಸು ತಲುಪಿದೆ.

    ಹೆಚ್ಚಿನವರು ಮುಸ್ಲಿಮರು: ರಾಮನಗರ ಮಾರುಕಟ್ಟೆಯಲ್ಲಿ ರೈತರಿಂದ ಖರೀದಿಸುವ ಹೆಚ್ಚಿನ ಪ್ರಮಾಣದ ಮಾವು ಮುಂಬೈ ಸೇರಿ ವಿವಿಧ ಕಡೆಗಳಲ್ಲಿ ಇರುವ ಪಲ್ಪ್ ್ಯಾಕ್ಟರಿಗಳಿಗೆ ಮಾರಾಟವಾಗುತ್ತದೆ. ಉಳಿದಂತೆ ಕೆಲವು ರೈತರು ಆನ್‌ಲೈನ್ ಮೂಲಕವೇ ಮಾರಾಟ ಮಾಡುತ್ತಿದ್ದರೆ, ಒಂದಿಷ್ಟು ರೈತರು ತಮ್ಮದೇ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡಿದ್ದಾರೆ. ಆದರೆ ಹೆಚ್ಚಿನ ಪ್ರಮಾಣದ ರೈತರು ಚನ್ನಪಟ್ಟಣ ಮತ್ತು ರಾಮನಗರ ಎಪಿಎಂಸಿರುವ ವರ್ತಕರನ್ನೇ ನಂಬಿದ್ದಾರೆ. ಈ ವರ್ತಕರಲ್ಲಿ ಶೇ.90 ಮಂದಿ ಮುಸ್ಲಿಂ ಸಮುದಾಯದವರೇ ಹೆಚ್ಚಿದ್ದು, ಇತ್ತೀಚೆಗೆ ಶುರುವಾಗಿರುವ ವಿವಾದದಿಂದ ರೈತರನ್ನು ಕಂಗಾಲಾಗಿಸಿದೆ.

    ಹೊಡೆತ ಬೀಳುತ್ತದೆ?: ಒಂದು ವೇಳೆ ಧರ್ಮ ದಂಗಲ್ ವ್ಯಾಪಕ ರೂಪ ಪಡೆದುಕೊಂಡರೆ ಖಂಡಿತವಾಗಿ ಮಾವು ಬೆಳೆಗಾರರರಿಗೆ ಹೊಡೆತ ಬೀಳುತ್ತದೆ. ಬಹುತೇಕ ರೈತರು ಮಾವಿನ ತೋಟವನ್ನು ಗುತ್ತಿಗೆಗೋ, ಇಲ್ಲವೇ ತಾವೇ ಕೊಯ್ಲು ಮಾಡಿ ಮಾರುಕಟ್ಟೆ ತಂದು ಮಾರಾಟ ಮಾಡುತ್ತಿದ್ದರು. ಧರ್ಮಾಧಾರಿತ ಖರೀದಿ ನಡೆದರೆ ಖಂಡಿತವಾಗಿ ಇದು ಮಾರುಕಟ್ಟೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದರ ಹೆಚ್ಚಿನ ಹೊಡೆತ ರೈತರಿಗೆ ಬೀಳಲಿದೆ.

    ತೋಟಗಾರಿಕೆ ಇಲಾಖೆ ಪ್ರಯತ್ನ: ಈ ನಡುವೆ ತೋಟಗಾರಿಕೆ ಇಲಾಖೆ ರೈತರಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಜಿಲ್ಲೆಯಲ್ಲಿರುವ ಎ್ಪಿಒಗಳ ಮೂಲಕ ಅಂತಾರಾಷ್ಟ್ರೀಯ ಕಂಪನಿಗಳ ಬೇಡಿಕೆಗೆ ತಕ್ಕಂತೆ ಮಾವು ಪೂರೈಕೆ ಮಾಡಲು ಹಾಗೂ ರೈತರೇ ನೇರವಾಗಿ ಮಾರುಕಟ್ಟೆ ಮಾಡಲು ಮಾವು ಮೇಳ ಆಯೋಜಿಸಲು ಸಿದ್ಧತೆ ನಡೆಸಿದೆ. ಏಪ್ರಿಲ್ 2 ಇಲ್ಲವೇ 3ನೇ ವಾರದಲ್ಲಿ ಈ ಸಭೆಗಳನ್ನು ನಡೆಸುವ ಮೂಲಕ ಮಾರುಕಟ್ಟೆ ವಿಸ್ತರಿಸುವ ಪ್ರಯತ್ನ ನಡೆಸಿದೆ.

    ಸಭೆಗೆ ಆಗ್ರಹ: ಪ್ರಸ್ತುತ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಯಾವುದೇ ಗೊಂದಲ ನಿರ್ಮಾಣವಾಗದಂತೆ ಕ್ರಮವಹಿಸುವಂತೆ ರೈತರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು ಕೂಡಲೇ ಮಾವು ಬೆಳೆಗಾರರು ಮತ್ತು ಖರೀದಿದಾರರ ನಡುವೆ ಸಭೆ ನಡೆಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

     

    ಈ ಬಾರಿ ಶೇ.20 ಮಾವು ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಸಂಬಂಧ ಶೀಘ್ರವೇ ಎ್ಪಿಒಗಳ ಮೂಲಕ ಮಾವು ಖರೀದಿಗೆ ಅವಕಾಶ ಕಲ್ಪಿಸಿಕೊಡಲು ಸಭೆ ನಡೆಸಲಾಗುವುದು.
    ಮುನೇಗೌಡ ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

    ಎಲ್ಲ ಧರ್ಮಗಳಿಗೂ ಅನ್ನ ಹಾಕುವವನು ರೈತನೇ. ರೈತನಿಲ್ಲದೆ ಯಾವುದೂ ಇಲ್ಲ. ಇದನ್ನು ಮೊದಲು ಅರಿತುಕೊಳ್ಳಬೇಕು. ಧರ್ಮದ ವಿಚಾರದಲ್ಲಿ ರೈತರಿಗೆ ತೊಂದರೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ಒಂದು ವೇಳೆ ಧರ್ಮಾಧಾರಿತ ವ್ಯಾಪಾರಕ್ಕೆ ಮುಂದಾದರೆ, ರೈತರೊಟ್ಟಿಗೆ ನಾವಿದ್ದೇವೆ ಎನ್ನುವುದನ್ನು ಸರ್ಕಾರ ಖಾತ್ರಿಪಡಿಸಿ, ಸಾಮರ್ಥ್ಯ ತೋರಿಸಬೇಕು.
    ಸಿ.ಪುಟ್ಟಸ್ವಾಮಿ, ರೈತ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts