More

    ಮಂಗಳೂರು ವಿವಿಯಲ್ಲಿ 2 ವೃತ್ತಿಪರ ಸ್ನಾತಕೋತ್ತರ ಪದವಿ ಆರಂಭ

    ಉಡುಪಿ: ಮಂಗಳೂರು ವಿವಿಯಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಮತ್ತು ವಸ್ತುವಿಜ್ಞಾನ ಎಂಬ ವೃತ್ತಿಪರ ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಲಾಗಿದೆ ಎಂದು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಡಿ.ಶಿವಲಿಂಗಯ್ಯ ಮತ್ತು ವಸ್ತುವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಪಟ್ಟಾಬಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮಾಸ್ಟರ್ಸ್ ಇನ್ ಲೈಬ್ರೆರಿ ಇನ್ಫಾರ್ಮೇಶನ್ ಸಾಯನ್ಸ್ ಸ್ನಾತಕೋತ್ತರ ಪದವಿಗೆ ಯಾವುದೇ ಪದವಿಯ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ. ಒಟ್ಟು 38 ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಈ ಪದವಿ ಪಡೆದವರಿಗೆ ಶೇ. 100ರಷ್ಟು ಉದ್ಯೋಗ ಖಾತ್ರಿ ಇರಲಿದೆ. ಸರ್ಕಾರ ಕಾಲೇಜುಗಳಲ್ಲಿ ಗ್ರಂಥಾಲಯ ಆರಂಭಿಸಲು ಯೋಜನೆ ರೂಪಿಸುತ್ತಿದ್ದು, ಪದವೀಧರರಿಗೆ ಹೆಚ್ಚಿನ ಬೇಡಿಕೆ ಲಭಿಸಲಿದೆ ಎಂದು ಡಾ.ಶಿವಲಿಂಗಯ್ಯ ಹೇಳಿದರು.

    ಡಾ. ಮಂಜುನಾಥ ಪಟ್ಟಾಬಿ ಮಾತನಾಡಿ, ಬಿಎಸ್ಸಿಯಲ್ಲಿ ಭೌತಶಾಸ್ತ್ರವನ್ನು ಮುಖ್ಯ ವಿಷಯವಾಗಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ವಸ್ತುವಿಜ್ಞಾನ ಸ್ನಾತಕೋತ್ತರ ವ್ಯಾಸಂಗ ಮಾಡಬಹುದು. ರಾಜ್ಯದಲ್ಲಿ ಮಂಗಳೂರು ವಿವಿ ಈ ವಿಷಯದ ಏಕೈಕ ಅಧ್ಯಯನ ಕೇಂದ್ರವಾಗಿದೆ. ಅಂತರಿಕ್ಷ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ ಮೊದಲಾದವು ವಸ್ತುವಿಜ್ಞಾನದ ತಳಹದಿಯ ಮೇಲೆ ರೂಪುಗೊಂಡಿದೆ.

    ಪದವಿಧರರು, ವಿಜ್ಞಾನಿಗಳಾಗಿ, ಪ್ರಾಧ್ಯಾಪಕರಾಗಿ, ಕೈಗಾರಿಕೋದ್ಯಮಿಗಳಾಗಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸಬಹುದು. ಇಸ್ರೋ, ಎಚ್‌ಎಎಲ್, ಡಿಆರ್‌ಡಿಒ ಇತ್ಯಾದಿ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗಾವಕಾಶಗಳಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts