More

    ಬಸ್​ ಹತ್ತುವ ವೇಳೆ ಕಾಲು ಜಾರಿ ಬಿದ್ದ ವಿದ್ಯಾರ್ಥಿನಿ, ಸ್ವಲ್ಪದರಲ್ಲೆ ತಪ್ಪಿತು ಅನಾಹುತ

    ಮಂಗಳೂರು: ಬಸ್​ ಹತ್ತುವ ವೇಳೆ ಕಾಲು ಜಾರಿ ಬಿದ್ದ ವಿದ್ಯಾರ್ಥಿನಿ ಬಸ್ಸಿನಡಿ ಬೀಳುವುದರಿಂದ ಸ್ವಲ್ಪದರಲ್ಲೆ ಪಾರಾಗಿರುವ ಘಟನೆ ಮೂಡಬಿದಿರೆ ತಾಲೂಕಿನ ವಿದ್ಯಾಗಿರಿ ಎಂಬಲ್ಲಿ ನಡೆದಿದೆ.

    ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕು ವಿದ್ಯಾಗಿರಿಯಲ್ಲಿ ಕಾಲೇಜು ಮುಗಿಸಿ ವಿದ್ಯಾರ್ಥಿನಿ ಖಾಸಗಿ ಬಸ್ ನಲ್ಲಿ ಮನೆಗೆ ತೆರಳುವಾಗ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಬಸ್ ಹತ್ತುವ ಮೊದಲೇ ಚಾಲಕ ಬಸ್ ಚಲಾಯಿಸಿದ ಪರಿಣಾಮ, ವಿದ್ಯಾರ್ಥಿನಿ ಆಯತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದಿದ್ದಾಳೆ.

    ಅದೃಷ್ಟವಶಾತ್ ವಿದ್ಯಾರ್ಥಿನಿ ಬಸ್ಸಿನ ಚಕ್ರದಡಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾಳೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಹರ್ಷನ ಹತ್ಯೆ ಕೇಸ್​: ಶಿವಮೊಗ್ಗದ 18 ಕಡೆ ಎನ್‌ಐಎ ಅಧಿಕಾರಿಗಳಿಂದ ತನಿಖೆ

    ಗದ್ದೆ ಉಳುಮೆ ಮಾಡುತ್ತಿರುವಾಗಲೇ ಹೃದಯಾಘಾತ: ಗದ್ದೆಯಲ್ಲೇ ಟ್ರ್ಯಾಕ್ಟರ್​ ಚಾಲಕ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts