More

    ಮಂಗಳೂರುಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 42.90 ಲಕ್ಷ ರೂ. ಮೌಲ್ಯದ ಅಕ್ರಮ ಸಾಗಾಟದ ಚಿನ್ನ ವಶ

    ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅ.31ರಿಂದ ನ.5 ರ ನಡುವೆ ಮೂವರು ಪ್ರಯಾಣಿಕರಿಂದ ಒಟ್ಟು 42,90,060 ಲಕ್ಷ ರೂ. ಮೌಲ್ಯದ ಅಕ್ರಮ ಸಾಗಾಟದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.


    ಅ.31ರಿಂದ ನ.2 ನಡುವೆ ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾದ ವಿಮಾನದ ಮೂಲಕ ಬಂದಿಳಿದ ಇಬ್ಬರು ಒಟ್ಟು 17,49,660 ರೂ. ಮೌಲ್ಯದ 228 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪೇಸ್ಟ್ ರೂಪದ ಚಿನ್ನ ಹಾಗೂ ಚಿನ್ನದ ಸರವನ್ನು ಒಳ ಉಡುಪು, ಸಾಕ್ಸ್ ಗಳಲ್ಲಿ ಬಚ್ಚಿಟ್ಟು ಸಾಗಿಸಲಾಗುತ್ತಿತ್ತು.


    ಇನ್ನೊಂದು ಪ್ರಕರಣದಲ್ಲಿ ನ.5ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಕೇರಳ ಮೂಲದ ಪ್ರಯಾಣಿಕ ಚಾಕಲೇಟ್ ರೂಪದಲ್ಲಿ ಚಿನ್ನದ ಪೌಡರ್ ಮಾಡಿಕೊಂಡು ಬಂದು ಸಿಕ್ಕಿಬಿದ್ದಿದ್ದಾನೆ.


    ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕನ ಟ್ರಾಲಿ ಬ್ಯಾಗನ್ನು ಕಸ್ಟಮ್ಸ್ ಅಧಿಕಾರಿಗಳು ಸ್ಕಾನ್ ಮಾಡಿ ಸಂಶಯ ಬಂದಿದ್ದರಿಂದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ’ಜ್ಛ್ಛಿಚ್ಞ ಉ್ಚ್ಝಜ್ಟಿ’ ಹೆಸರಿನ ಚಾಕಲೇಟ್ ಪ್ಯಾಕೆಟ್ ಕಂಡುಬಂದಿದೆ. ಚಾಕಲೇಟ್ ತೆರೆದು ನೋಡಿದಾಗ ಹಳದಿ ಬಣ್ಣದ ಪೌಡರ್ ಕಂಡು ಬಂದಿತ್ತು. 24 ಕ್ಯಾರೆಟ್ ಶುದ್ಧ ಚಿನ್ನವನ್ನು ಪೌಡರ್ ರೂಪಕ್ಕಿಳಿಸಿ ಬೇರೊಂದು ಹುಡಿಯ ಜೊತೆಗೆ ಮಿಕ್ಸ್ ಮಾಡಿ, ಬೆಳ್ಳಿಯ ಕಲರಿನ ಪ್ಲಾಸ್ಟಿಕ್ ಪೇಪರಿನಲ್ಲಿ ಕಟ್ಟಿಡಲಾಗಿತ್ತು.


    ಈ ರೀತಿಯ ಏಳು ಚಾಕೆಟ್ ಪತ್ತೆಯಾಗಿದ್ದು 420 ಗ್ರಾಮ್ ಚಿನ್ನ ಇರುವುದನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ 25,49,400 ರೂ. ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts