More

    ವಿಜೇತ 60 ರಾಸುಗಳ ಮಾಲೀಕರಿಗೆ ಚಿನ್ನದ ನಾಣ್ಯ

    ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ಐತಿಹಾಸಿಕ ಭಾರಿ ದನಗಳ ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಲ್ಲ ವಿಭಾಗದಿಂದ ಆಯ್ಕೆಯಾದ ಎತ್ತುಗಳ ಮಾಲೀಕರಿಗೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಚಿನ್ನದ ನಾಣ್ಯ ಬಹುಮಾನದ ಜತೆಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.


    ಜಾತ್ರೆಯಲ್ಲಿ ನೋಂದಾಯಿಸಿಕೊಂಡಿದ್ದ ಒಟ್ಟು 342 ರಾಸುಗಳನ್ನು ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಪಶು ವೈದ್ಯರು ಪರೀಕ್ಷಿಸಿ ಬಹುಮಾನಿತ ರಾಸುಗಳ ಆಯ್ಕೆ ನಡೆಸಿದ್ದರು. ಇದರಲ್ಲಿ 60 ರಾಸುಗಳ ಮಾಲೀಕರು ಚಿನ್ನದ ನಾಣ್ಯದ ಬಹುಮಾನ ಪಡೆದುಕೊಂಡರು.
    ಚಿನ್ನದ ಬಹುಮಾನ ವಿಜೇತರು: ಹಾಲು ಹಲ್ಲಿನ ಬೀಜದ ಹೋರಿ- ಹೋರಿ ಚಿಕ್ಕಣ್ಣ, ದೇವರ ದೊಡ್ಡಿ, ರಾಮನಗರ. ಎಚ್.ಎನ್.ಮರಿಯಪ್ಪ, ಹುಣಸೂರು. ವಿಜಯಕುಮಾರ್ ಅರ್ಚಕರಹಳ್ಳಿ, ರಾಮನಗರ.


    ಎರಡು ಹಲ್ಲಿನ ಬೀಜದ ಹೋರಿಗಳ ವಿಭಾಗ: ಪ್ರಕಾಶ, ಕೆ.ಆರ್.ಪೇಟೆ. ದೇವರಾಜು, ಬ್ಯಾಟರಾಯನಕೊಪ್ಪಲು ಪಾಂಡವಪುರ. ರಾಜೇಶ್, ಹೊಸಮಾವಿನಕೆರೆ, ಕೆ.ಆರ್.ಪೇಟೆ.
    ನಾಲ್ಕು ಹಲ್ಲಿನ ಬೀಜದ ಹೋರಿಗಳ ವಿಭಾಗ : ಕುಮಾರ್, ಚಿಂಚಿನಕೆರೆ, ಹುಣಸೂರು. ಸೋಮೇಗೌಡ, ಕರುಬನಹಳ್ಳ, ಕೆ.ಆರ್.ಪೇಟೆ. ಭಾಸ್ಕರ, ಕೆನ್ನೂರು ಕೊಪ್ಪಲು, ಕೆ.ಆರ್.ನಗರ.


    ಆರು ಹಲ್ಲಿನ ಬೀಜದ ಹೋರಿಗಳ ವಿಭಾಗ: ಅನಿಲ್‌ಕುಮಾರ್, ಅಂಕನಹಳ್ಳಿ, ಹುಣಸೂರು. ಗೋಪಾಲ್‌ಗೌಡ, ಹಳೇಮಾವಿನಕೆರೆ, ಕೆ.ಆರ್.ಪೇಟೆ. ಎನ್.ಟಿ.ರಾಮಚಂದ್ರ, ನುನ್ನೂರು, ಚನ್ನಪಟ್ಟಣ.
    ಬಾಯಿಗೂಡಿದ ಬೀಜದ ಹೋರಿಗಳ ವಿಭಾಗ: ಮಸಾಲೆ ಜಯರಾಮು(ಎಂಎಲ್‌ಟಿ), ತುರುವೇಕೆರೆ, ತುಮಕೂರು. ಗುರುಪ್ರಸಾದ್, ಕ್ಯಾತನಹಳ್ಳಿ, ಪಾಂಡವಪುರ. ಕುಮಾರ, ಹೊಸಮಾವಿನಕೆರೆ, ಕೆ.ಆರ್.ಪೇಟೆ.
    ಹಾಲು ಹಲ್ಲಿನ ಜೋಡಿ ಕಡಸುಗಳ ವಿಭಾಗ: ಆನಂದ, ಕಬ್ಬನಹಳ್ಳಿ, ಮಂಡ್ಯ. ಕೆಂಚೇಗೌಡ, ಹುಣಸನಹಳ್ಳಿ, ತಿ.ನರಸೀಪುರ. ಬಿ.ಜೆ.ಮನೀಲ್ ರಾಜ್, ಬಿ.ಎಂ.ಬೇವಿನಹಳ್ಳಿ, ತಿ.ನರಸೀಪುರ.
    ಎರಡು ಹಲ್ಲಿನ ಜೋಡಿ ಕಡಸುಗಳು: ಹರ್ಷಿತ್, ಹೊಸಕೊಪ್ಪಲು, ತಿ.ನರಸೀಪುರ. ಕುಮಾರ, ಬಿ.ಸೀಹಳ್ಳಿ, ತಿ.ನರಸೀಪುರ. ರವಿ, ಬನ್ನೂರು, ತಿ.ನರಸೀಪುರ.


    ನಾಲ್ಕು ಹಲ್ಲಿನ ಜೋಡಿ ಕಡಸುಗಳು : ಹೇಮಂತ್, ಅಂಚೇನಹಳ್ಳಿ, ಕೆ.ಆರ್.ಪೇಟೆ, ಬಾಸು, ಬಳ್ಳೇಕೆರೆ, ಶ್ರೀರಂಗಪಟ್ಟಣ, ರಾಜಣ್ಣ, ಬನ್ನೂರು, ತಿ.ನರಸೀಪುರ.
    ಆರು ಹಲ್ಲಿನ ಜೋಡಿ ಹಸು ವಿಭಾಗ: ಸಿ.ಕೆ.ರೇಣು, ಚೀಕನಹಳ್ಳಿ, ಪಾಂಡವಪುರ. ಕೃಷ್ಣೇಗೌಡ, ಅಕ್ಕಿಹೆಬ್ಬಾಳು, ಕೆ.ಆರ್.ಪೇಟೆ. ಪುಟ್ಟರಾಜು, ವಿಠಲಪುರ, ಕೆ.ಆರ್.ಪೇಟೆ.
    ಬಾಯಿಗೂಡಿದ ಜೋಡಿ ಹಸುಗಳ ವಿಭಾಗ: ಪ್ರೀತಮ್‌ಕುಮಾರ್, ಕಿರಗಂದೂರು, ಮಂಡ್ಯ, ವೆಂಕಟಸ್ವಾಮಿ, ಹೊಸಕೋಟೆ, ಬೆಂಗಳೂರು. ನಾಗೇಗೌಡ, ಬಿ.ಸೀಹಳ್ಳಿ, ತಿ.ನರಸೀಪುರ.

    ಹಾಲು ಹಲ್ಲಿನ ಜೋಡಿ ಕರುಗಳ ವಿಭಾಗ : ಮಸಾಲೆ ಜಯರಾಮು(ಎಂಎಲ್‌ಎ), ತುರುವೆಕೆರೆ, ತುಮಕೂರು. ಯಜಮಾನ್ ಎಚ್.ಡಿ.ರಾಜಣ್ಣ, ಬಿ.ಹೊಸಹಳ್ಳಿ, ಮಂಡ್ಯ. ಹರ್ಷ, ಬೀರಗೌಡನಹಳ್ಳಿ, ಮಂಡ್ಯ. ವೆಂಕಟೇಶ, ಕೆ.ಆರ್.ನಗರ, ಮೈಸೂರು. ಎಚ್.ಸಿ.ನಿಂಗರಾಜು, ಹೊಳಲು, ಮಂಡ್ಯ.
    ಎರಡು ಹಲ್ಲಿನ ಜೋಡಿ ಎತ್ತುಗಳ ವಿಭಾಗ: ಹರೀಶ, ಬೇವಿನಕುಪ್ಪೆ, ಪಾಂಡವಪುರ. ಸಂದೀಪ್, ಹಿರೀಸಾವೆ, ಚನ್ನರಾಯಪಟ್ಟಣ. ಪುನೀತ್, ಲಲಿತಾದ್ರಿಪುರ, ಮೈಸೂರು. ಶಿವಕುಮಾರ್, ಗಂಜಾಂ, ಶ್ರೀರಂಗಪಟ್ಟಣ. ಶಿವು, ಸಿದ್ದಲಿಂಗಪುರ, ಮೈಸೂರು.
    ನಾಲ್ಕು ಹಲ್ಲಿನ ಜೋಡಿ ಎತ್ತುಗಳ ವಿಭಾಗ: ವೈ.ಕೆ.ಮಂಚೇಗೌಡ, ವೈ.ಯರಹಳ್ಳಿ, ಮಂಡ್ಯ. ಗೋಪಾಲಕೃಷ್ಣ, ನೆಲಮನೆ, ಶ್ರೀರಂಗಪಟ್ಟಣ. ಅಭಿ, ಹೊಳಲು, ಮಂಡ್ಯ. ಮನು, ಕಗ್ಗಲೀಪುರ, ಮಳವಳ್ಳಿ. ರಮೇಶ, ಇಂಗಲಗುಪ್ಪೆ, ಪಾಂಡವಪುರ.
    ಆರು ಹಲ್ಲಿನ ಜೋಡಿ ಎತ್ತುಗಳ ವಿಭಾಗ: ಕಾರ್ತಿಕ್, ರಾಗಿಮುದ್ದನಹಳ್ಳಿ, ಪಾಂಡವಪುರ. ಲೋಕೇಶ್, ಕೆನ್ನಾಳು, ಪಾಂಡವಪುರ. ಚೇತನ್, ಇಂಡುವಾಳು, ಮಂಡ್ಯ. ಚಂದ್ರಶೇಖರ, ದೊಡ್ಡರಸಿನಕೆರೆ, ಮದ್ದೂರು. ಕೃಷ್ಣಪ್ಪ, ತಿಮ್ಮನಕೊಪ್ಪಲು, ಪಾಂಡವಪುರ.


    ಬಾಯಿಗೂಡಿದ ಜೋಡಿ ಎತ್ತುಗಳ ವಿಭಾಗ: ಕೆ.ಎಂ.ಇಂದ್ರೇಶ್, ಕನಕಪುರ, ರಾಮನಗರ ಜಿಲ್ಲೆ. ಶಶಿಧರ್, ಕೆಂಪಯ್ಯನಹುಂಡಿ, ಮೈಸೂರು. ವೈ.ಎಸ್.ಸಿದ್ದೇಗೌಡ, ಯಾಲದಹಳ್ಳಿ, ಮದ್ದೂರು. ಮಹೇಂದ್ರ, ಡಾಮಡಹಳ್ಳಿ, ಪಾಂಡವಪುರ. ಪುಟ್ಟೇಗೌಡ, ಚಿಕ್ಕೀರೆಗೌಡ, ಸೂನಗಹಳ್ಳಿ, ಮಂಡ್ಯ. ನಂದೀಶ್, ಅಘಲಯ, ಕೆ.ಆರ್.ಪೇಟೆ. ಕೃಷ್ಣ, ಮಂಗಳವಾರಪೇಟೆ. ಚನ್ನಪಟ್ಟಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts