More

    ಹದಿನೈದು ದಿನದ ಅಂತರದಲ್ಲಿ ತಂದೆ-ತಾಯಿ ಕರೊನಾಗೆ ಬಲಿ: ಅನಾಥವಾದ 5 ದಿನದ ಹೆಣ್ಣು ಮಗು

    ಮಂಡ್ಯ: ಕೇವಲ ಹದಿನೈದು ದಿನದ ಅಂತರದಲ್ಲಿ ತಂದೆ-ತಾಯಿ ಮಹಾಮಾರಿ ಕರೊನಾಗೆ ಬಲಿಯಾಗಿದ್ದು, ಐದು ದಿನದ ಹೆಣ್ಣು ಮಗು ಅನಾಥವಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯದಲ್ಲಿ ನಡೆದಿದೆ.

    ನಂಜುಂಡೇಗೌಡ(45) ಮತ್ತು ಮಮತಾ(31) ಮೃತ ದಂಪತಿ. ಇವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡೇನಹಳ್ಳಿ ಗ್ರಾಮದ ನಿವಾಸಿಗಳು. ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಮೃತ ನಂಜುಂಡೇಗೌಡ, ಏಪ್ರಿಲ್​ನಲ್ಲಿ ಕರೊನಾ ಸೋಂಕಿಗೆ ತುತ್ತಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಏಪ್ರಿಲ್‍ 30ರಂದು ಮೃತಪಟ್ಟಿದ್ದರು.

    ಇದೇ ವೇಳೆ ತುಂಬು ಗರ್ಭಿಣಿಯಾಗಿದ್ದ ನಂಜುಂಡೇಗೌಡನ ಪತ್ನಿ ಮಮತಾಗೂ ಸೋಂಕು ದೃಢಪಟ್ಟಿತ್ತು. ವೈದ್ಯರ ಸಲಹೆ ಮೇರೆಗೆ ಹೋಂ ಐಶೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ಸಮಸ್ಯೆ ಎದುರಾದಾಗ ಮಿಮ್ಸ್​ಗೆ ದಾಖಲಿಸಲಾಗಿತ್ತು. ಮೇ.11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಮತಾ, ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಮೃತಪಟ್ಟಿದ್ದಾರೆ.

    ಮದುವೆಯಾದ 9 ವರ್ಷದ ನಂತರ ಮಗು ಜನನವಾಗಿದ್ದು, ಕ್ರೂರಿ ಕರೂನಾದಿಂದಾಗಿ ಹಸುಗೂಸು, ತಂದೆ-ತಾಯಿಯ ಪ್ರೀತಿಯಿಂದ ವಂಚಿತವಾಗಿದೆ. ಮೃತ ದಂಪತಿ ಕುಟುಂಬಸ್ಥರಲ್ಲಿ ಇದೀಗ ಆಕ್ರಂದನ ಮುಗಿಲುಮುಟ್ಟಿದೆ. (ದಿಗ್ವಿಜಯ ನ್ಯೂಸ್​)

    ಕರೊನಾ ಸೋಂಕಿತ ಮಕ್ಕಳಿಗೆ ಚಿಕಿತ್ಸೆ ಹೇಗೆ?

    ಸಿಎಂ ಜಗನ್​ ಸರ್ಕಾರದ ವಿರುದ್ಧ ಗಂಭೀರ ಆರೋಪ: ವೈಎಸ್​ಆರ್​ ಕಾಂಗ್ರೆಸ್​ ಸಂಸದನ ಬಂಧನ!

    ಇಲ್ಲಿ ಕಳ್ಳರು ಶವಗಳನ್ನೂ ಬಿಡುತ್ತಿಲ್ಲ; ಕೋವಿಡ್ ಸೋಂಕಿನಿಂದ ಮೃತಪಟ್ಟವರ ಚಿನ್ನಾಭರಣ ಕಳವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts