More

    2 ಪ್ಯಾಕೆಟ್​ ಕುರುಂಕುರುಂ ತಿಂಡಿ ಕೇಳಿದ್ದಕ್ಕೆ 2 ಲಕ್ಷ ರೂಪಾಯಿ ಗುಳುಂ! ಆಗಿದ್ದೇನು?

    ಮುಂಬೈ: ಆನ್​ಲೈನ್​ನಲ್ಲಿ ಖರೀದಿ ಮಾಡುವಾಗ ಎಷ್ಟೊಂದು ಜಾಗರೂಕರಾಗಿ ಇರಬೇಕು ಎಂದು ಸರ್ಕಾರಗಳು ಹೇಳುತ್ತಲಿದ್ದರೂ, ಮಾಧ್ಯಮದಲ್ಲಿ ಮೋಸಹೋದವರ ಬಗ್ಗೆ ಅನೇಕ ಸುದ್ದಿಗಳು ಬರುತ್ತಿದ್ದರೂ, ಮೋಸ ಹೋಗುವವರ ಸಂಖ್ಯೆಯಂತೂ ಕಮ್ಮಿ ಆಗುತ್ತಿಲ್ಲ.
    ಅದರಲ್ಲಿಯೂ ಲಾಕ್​ಡೌನ್​ ಸಮಯದಲ್ಲಿ ಆನ್​ಲೈನ್​ ಫುಡ್​ ಡೆಲಿವರಿಗೆ ಭಾರಿ ಬೇಡಿಕೆ ಬಂದಿತ್ತು. ಅಂತೆಯೇ ಆನ್​ಲೈನ್​ ಮೋಸಗಾರರೂ ಬಲೆ ಬೀಸಲು ಸಾಕಷ್ಟು ಸಂಖ್ಯೆಯಲ್ಲಿ ಕಾಯುತ್ತಲೇ ಇದ್ದರು. ಅಂಥವರ ಬಲೆಗೆ ಬಿದ್ದ ಮುಂಬೈನ ಉದ್ಯಮಿಯೊಬ್ಬರು ಇದೀಗ 2.25 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅದೂ ಎರಡು ಪ್ಯಾಕೆಟ್​ ಕುರುಂಕುರುಂ ತಿನಿಸಿಗಾಗಿ!

    ಇದನ್ನೂ ಓದಿ: ಲಾಕ್​ಡೌನ್​ ಮಹಿಮೆ: ಮದುವೆ ಸ್ಥಳಕ್ಕೆ ಮದುಮಗ ಕೊಟ್ಟ ಹೀಗೊಂದು ಡಿಫರೆಂಟ್​ ಎಂಟ್ರಿ!

    ದಿನಸಿ ಅಂಗಡಿಗೆ ಬೇಕಾಗುವ ಸಾಮಾನುಗಳು ಯಾವ ವೆಬ್​ಸೈಟ್​ನಲ್ಲಿ ಸಿಗುತ್ತದೆ ಎಂದು ತಡಕಾಡಿದ ಈ ಉದ್ಯಮಿಯ ಗಮನಕ್ಕೆ ಬಂದದ್ದು ಅನೇಕ ಮಂದಿ ಸರ್ಚ್​ ಮಾಡಿದ್ದ ಒಂದು ವೆಬ್​ಸೈಟ್​. ಸರಿ ಅದಕ್ಕೆ ಲಾಗಿನ್​ ಆದರು. ಅಲ್ಲಿ ಅವರಿಗೆ ಬೇಕಾದ ಎಲ್ಲ ಪದಾರ್ಥಗಳೂ ಇದ್ದವು. ಇದರಿಂದ ಖುಷಿಗೊಂಡ ಉದ್ಯಮಿ, ತಮಗೆ ಬೇಕಾಗಿರುವ ಎಲ್ಲ ಪದಾರ್ಥಗಳನ್ನು ಆರ್ಡರ್​ ಮಾಡಿದರು.
    ಸರಿ. ಅವರು ಆರ್ಡರ್​ ಮಾಡಿದಂತೆ ಮನೆಗೆ ನಿಗದಿತ ಸಮಯದಲ್ಲಿ ಪದಾರ್ಥಗಳು ಮನೆಯನ್ನು ತಲುಪಿದವು. ಖುಷಿಯಲ್ಲಿ ಇವರು ಪದಾರ್ಥಗಳನ್ನು ತೆರೆದು ನೋಡಿದಾಗ ಅದರಲ್ಲಿ ಅವರು ಆರ್ಡರ್​ ಮಾಡಿದ್ದ ಎರಡು ಪ್ಯಾಕೆಟ್​ ಕುರುಂಕುರುಂ ತಿನಿಸಾದ ‘ಭುಜಿಯಾ’ ಇರಲಿಲ್ಲ.

    ಇದನ್ನೂ ಓದಿ: ಲಾಕ್​ಡೌನ್​ ಎಫೆಕ್ಟ್​: ದಂಪತಿ ನಡುವೆ ಹೆಚ್ಚಿದ ಸರಸ- ಸಲ್ಲಾಪಕ್ಕೆ ವಿಶ್ವ ಸಂಸ್ಥೆ ಬೆಚ್ಚಿ ಬಿದ್ದದ್ದೇಕೆ?

    ಅದಕ್ಕೆ ಈಗಾಗಲೇ ಹಣ ಸಂದಾಯ ಮಾಡಿದ್ದ ಕಾರಣ, ತಾವು ಖರೀದಿಸಿರುವ ವೆಬ್​ಸೈಟ್​ ಮಳಿಗೆಯ ಹೆಲ್ಪ್​ಲೈನ್​ಗೆ ಕರೆ ಮಾಡುವ ಸಲುವಾಗಿ ಪುನಃ ಗೂಗಲ್​ ಮೊರೆ ಹೋದರು. ಅದರಲ್ಲಿ ಅನೇಕ ಮಂದಿ ಹುಡುಕಾಟ ನಡೆಸಿದ್ದ ನಂಬರ್​ ಸಿಕ್ಕಿತು. ಸರಿ, ಅದಕ್ಕೇ ಕರೆ ಮಾಡಿದರು. ಭುಜಿಯಾ ಪ್ಯಾಕೆಟ್​ ಬಗ್ಗೆ ವಿಚಾರಿಸಿದರು. ನಂತರ ಅತ್ತ ಕಡೆಯಿಂದ ಒಂದೊಂದೇ ಮಾಹಿತಿಗಳನ್ನು ಕೇಳಲಾಯಿತು. ಭುಜಿಯಾ ಪ್ಯಾಕೆಟ್​ ಶೀಘ್ರದಲ್ಲಿ ತಲುಪಿಸುತ್ತೇವೆ ಎಂದಿತು ಅತ್ತ ಕಡೆಯ ದನಿ. ಅದರಂತೆ, ಬ್ಯಾಂಕ್​ ವಿವರ ಸೇರಿದಂತೆ ಕೆಲವೊಂದು ಮಾಹಿತಿಗಳನ್ನು ಕೇಳಲಾಯಿತು.
    ಭುಜಿಯಾ ಪ್ಯಾಕೆಟ್​ ಕನಸು ಕಾಣುತ್ತಿದ್ದ ಈ ಉದ್ಯಮಿ ತಮ್ಮ ಪಿನ್​ ನಂಬರ್​ ಸೇರಿದಂತೆ ಎಲ್ಲಾ ಮಾಹಿತಿಗಳನ್ನೂ ನೀಡಿದರು. ಅಷ್ಟೇ… ಸ್ವಲ್ಪ ಸಮಯದಲ್ಲಿಯೇ ಭುಜಿಯಾ ಬರುತ್ತದೆ ಎಂದು ಕಾದಿದ್ದರೆ, ಫೋನ್​ಗೆ ಒಂದು ಮೆಸೇಜ್​ ಬಂತು. ಅದನ್ನು ನೋಡಿದರೆ ಅವರ ಬ್ಯಾಂಕ್​ ಖಾತೆಯಿಂದ 2.25 ಲಕ್ಷ ರೂಪಾಯಿಗಳನ್ನು ಕಳುವು ಮಾಡಲಾಗಿತ್ತು! ತಲೆ ಸುತ್ತಿದಂತಾದ ಉದ್ಯಮಿ ಕೂಡಲೇ ಅದೇ ನಂಬರ್​ಗೆ ಕಾಲ್​ ಮಾಡಿದರೆ ಸ್ವಿಚ್​ ಆಫ್​.

    ಇದನ್ನೂ ಓದಿ: ದಿನಸಿ ತರಲು ಕಳುಹಿಸಿದರೆ ಹೊಸ ಹೆಂಡತಿಯನ್ನೂ ಕರೆತರುವುದೆ? ಮಗ ರಾಕ್​, ಅಮ್ಮ ಶಾಕ್​!

    ತಡ ಮಾಡದೇ ಪೊಲೀಸರಲ್ಲಿ ದೂರುದಾಖಲು ಮಾಡಿದರು. ಸದ್ಯ ಎಫ್​ಐಆರ್​ ದಾಖಲಾಗಿದೆ. ಆದರೆ ತಿಂಡಿ ಪ್ಯಾಕೆಟ್​ ಕಳುಹಿಸಲು ತಮ್ಮ ವೈಯಕ್ತಿಕ ದಾಖಲೆಗಳ ಮಾಹಿತಿಯನ್ನು ಕೊಟ್ಟ ಉದ್ಯಮಿ ಮಾತ್ರ ಈಗ ಕೋರ್ಟ್​ ಅಲೆದಾಡುವಂತಾಗಿದೆ! (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts