More

    2 ಲಕ್ಷ ಸಾಲದ ಆಸೆಗೆ ಬರೋಬ್ಬರಿ 4.52 ಲಕ್ಷ ರೂಪಾಯಿ ಕಳೆದುಕೊಂಡ ವಿದ್ಯಾರ್ಥಿ

    ಕಾರವಾರ: ಎರಡು ಲಕ್ಷ ಸಾಲದ ಆಸೆಗೆ ಆನ್​ಲೈನ್​ನಲ್ಲಿ ಮಾಹಿತಿ ಹಂಚಿಕೊಂಡ ವಿದ್ಯಾರ್ಥಿ 4.52 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದ್ದು, ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೊನ್ನಾವರ ಹೊಸಾಡದ ವಿದ್ಯಾರ್ಥಿ ಕ್ರಿಜೋಸ್ಟಮ್ ಪುಡ್ತಾಡೊ ಹಣ ಕಳೆದುಕೊಂಡಾತ. ಸಾಲ ನೀಡುವುದಾಗಿ ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೆಸರಿನಲ್ಲಿ ಇನ್ಸ್​ಸ್ಟಾ ಗ್ರಾಂ ಖಾತೆಯಲ್ಲಿ ಬಂದ ಜಾಹೀರಾತು ನೋಡಿದ ಯುವಕ 2 ಲಕ್ಷ ರೂ. ಸಾಲ ಪಡೆಯಲು ತನ್ನ ಮಾಹಿತಿ ಹಂಚಿಕೊಂಡಿದ್ದ. ಕರೆ ಮಾಡಿದ ಅಪರಿಚಿತ ವ್ಯಕ್ತಿಗಳು ಸಾಲ ನೀಡುವುದಾಗಿ ಹೇಳಿ, ಅದು, ಇದು ಶುಲ್ಕದ ಹೆಸರಿನಲ್ಲಿ ಬ್ಯಾಂಕ್ ಖಾತೆಗೆ 4.52 ಲಕ್ಷಕ್ಕೂ ಅಧಿಕ ಹಣ ಜಮಾ ಮಾಡಿಸಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts