More

    ಸೈಕಲ್‌ನಲ್ಲಿ 60 ಸಾವಿರ ಕಿ.ಮೀ. ಪರ್ಯಟನೆ, ಮರವಂತೆಗೆ ಬಂದ ಛತ್ತೀಸ್‌ಗಡ ಯಾತ್ರಿ

    ಗಂಗೊಳ್ಳಿ: ಛತ್ತೀಸ್‌ಗಢ ಮೂಲದ ಫಕೀರರೊಬ್ಬರು ಸೈಕಲ್‌ನಲ್ಲಿ 60 ಸಾವಿರ ಕಿ.ಮೀ. ದೂರದ ತೀರ್ಥಯಾತ್ರೆ ಕೈಗೊಂಡಿದ್ದು, ಎರಡು ವರ್ಷ ಬಳಿಕ ಪ್ರವಾಸಿ ತಾಣ ಮರವಂತೆ ತಲುಪಿದ್ದಾರೆ.

    ಛತ್ತೀಸ್‌ಗಢದ ಬಿಲಾಯು ದುರ್ಗಾ ನಿವಾಸಿ ಮಹಮ್ಮದ್ ಜಮಾಲ್ (57) ಎಂಬುವರು ದೇಶದ ಪ್ರಸಿದ್ಧ ಕ್ಷೇತ್ರಗಳಿಗೆ ಯಾತ್ರೆ ಹೊರಡುವ ಇಚ್ಛೆ ಹೊಂದಿದ್ದು, 2018ರ ಆಗಸ್ಟ್ 15ರಂದು ಸೈಕಲ್‌ನಲ್ಲಿ ತೀರ್ಥಯಾತ್ರೆ ಆರಂಭಿಸಿದ್ದರು. ಗುಜರಾತ್, ರಾಜಸ್ಥಾನ, ಪಂಜಾಬ್, ಜಮ್ಮು ಯಾತ್ರೆ ಮುಗಿಸಿರುವ ಅವರು ಕರ್ನಾಟಕದಲ್ಲಿ ಮಂಗಳೂರು, ಬೆಂಗಳೂರು, ಮೈಸೂರಲ್ಲಿ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ, ಹೈದರಾಬಾದ್‌ಗೆ ತೆರಳಲಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಗುಜರಾತ್‌ನಲ್ಲಿದ್ದು ಅಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ.

    ಈಶ್ವರ ಒಬ್ಬನೇ ಎಂಬ ಧ್ಯೇಯದಡಿ ದೇವಾಲಯ, ಚರ್ಚ್‌ಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದೇನೆ. ದಾರಿಯುದ್ದಕ್ಕೆ ಎಲ್ಲ ಜಾತಿ ಧರ್ಮದವರ ಸಹಕಾರ ಪಡೆದು ಯಾತ್ರೆ ಮುಂದುವರಿಸಿಕೊಂಡು ಬಂದಿದ್ದೇನೆ.
    – ಮಹಮ್ಮದ್ ಜಮಾಲ್, ಸೈಕಲ್ ಯಾತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts